ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video

author-image
Ganesh
Updated On
ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video
Advertisment
  • ಭೀಕರ ದುರ್ಘಟನೆಯಲ್ಲಿ ಅಮ್ಮ-ಮಗಳು ಬದುಕಿದ್ದೇ ಪವಾಡ
  • ನಿನ್ನೆ ಬೆಳ್ಳಂಬೆಳಗ್ಗೆ ಸಂಭವಿಸಿದ ಅಪಘಾತದಿಂದ ಅನಾಹುತ
  • ತಾಯಿ ಮಗಳ ಜೀವ ಉಳಿಸಿದ್ದು ಏನು ಗೊತ್ತಾ?

ಗ್ರೇಟರ್ ನೋಯ್ಡಾದ ದಂಕೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭಯಾನಕ ರಸ್ತೆ ಅಪಘಾತದಲ್ಲಿ ತಾಯಿ ಮಗಳು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಅಪಘಾತದ ತೀವ್ರತೆ ನೋಡಿದ್ದರೆ ಇಬ್ಬರು ಬದುಕುಳಿದಿದ್ದೇ ಹೆಚ್ಚು.

ಮೇ 23 (ನಿನ್ನೆ) ಬೆಳಗ್ಗೆ 7 ಗಂಟೆಗೆ ದುರ್ಘಟನೆ ನಡೆದಿದೆ. ದೆಹಲಿಯಿಂದ ತಾಯಿ ಮತ್ತು ಮಗಳು ತಮ್ಮ ಕ್ರೆಟಾ ಕಾರಿನ ಮೂಲಕ ನೋಯ್ಡಾಗೆ ಬರುತ್ತಿದ್ದರು ಎಂಬ ಮಾಹಿತಿ ಇದೆ. ಈ ವೇಳೆ ವೇಗವಾಗಿ ಬಂದ ಕಾರು, ಇಟ್ಟಿಗೆಗಳಿಂದ ಲೋಡ್ ಆಗಿದ್ದ ಟ್ರಾಲಿಗೆ ಗುದ್ದಿದೆ. ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ.

ಇದನ್ನೂ ಓದಿ:ಕಪ್ ಗೆಲ್ಲಬೇಕು ಅಂದರೆ ಕೊಹ್ಲಿ RCB ತೊರೆಯಬೇಕು -ಕಿಡಿ ಹೊತ್ತಿಸಿದ ಮಾಜಿ ಆಟಗಾರ

publive-image

ಜೀವ ಉಳಿಸಿದ್ದು ಏನು..?
ಟ್ರಾಲಿಗೆ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆಯೇ ಕಾರಿನಲ್ಲಿದ್ದ ಏರ್​ಬ್ಯಾಕ್​ ಓಪನ್ ಆಗಿದೆ. ಪರಿಣಾಮ ತಾಯಿ ಮಗಳು ಬಚಾವ್ ಆಗಿದ್ದಾರೆ. ಅಪಘಾತದ ತೀವ್ರತೆಯಿಂದ ನುಜ್ಜುಗುಜ್ಜಾದ ಕಾರಿನೊಳಗೆ ಲಾಕ್ ಆಗಿ ಬಿಟ್ಟಿದ್ದರು. ಜೋರಾಗಿ ಕಿರುಚಾಡುತ್ತಿದ್ದರು. ನಂತರ ಸ್ಥಳೀಯರು ಹಾಗೂ ಪೊಲೀಸರು ಆಗಮಿಸಿ ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಲಾಕ್ ಆಗಿದ್ದ ಇವರನ್ನು ಹೊರ ತೆಗೆಯಲು ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಬೇಕಾಗಿದೆ ಎಂಬ ಮಾಹಿತಿ ಇದೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅನ್ನೋದೇ ಸಮಾಧಾನದ ವಿಷಯ.

ಇದನ್ನೂ ಓದಿ:ಮ್ಯಾಕ್ಸಿ ಆರ್​​ಸಿಬಿ ಸೋಲಿಗೆ ಹೆಂಗೆಲ್ಲ ಕಾರಣರಾದರು? ಕಂಪ್ಲೀಟ್ ಡೀಟೈಲ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment