newsfirstkannada.com

WATCH: ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಯಮುನಾ ನದಿ; ದೆಹಲಿಯಲ್ಲಿ ಪ್ರವಾಹದ ಅಬ್ಬರ, ಕ್ಷಣ, ಕ್ಷಣಕ್ಕೂ ಆತಂಕ

Share :

Published July 11, 2023 at 1:25pm

Update July 11, 2023 at 1:27pm

    ಹರಿಯಾಣ, ಉತ್ತರಾಖಂಡ್‌ ರಾಜ್ಯದಲ್ಲಿ ಸುರಿದ ಭಾರೀ ಮಳೆಯ ಹೊಡೆತ

    ಅಪಾಯದ ಮಟ್ಟ ಮೀರಿದ ಯಮುನಾ ನೀರಿನ ಮಟ್ಟ 206.65 ಮೀಟರ್

    ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ದಿಲ್ಲಿ ಸರ್ಕಾರ ಸೂಚನೆ

ನವದೆಹಲಿ: ಹರಿಯಾಣ, ಉತ್ತರಾಖಂಡ್‌ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೇಂದ್ರ ಜಲ ಆಯೋಗದ ಪ್ರಕಾರ ಯಮುನಾ ನದಿಯಲ್ಲಿ ಅಪಾಯದ ನೀರಿನ ಮಟ್ಟವು 205.33 ಮೀಟರ್ ಎತ್ತರ ತಲುಪಿದರೆ ಅಪಾಯದ ಮಟ್ಟ ಎಂದು ಪರಿಗಣಿಸಲಾಗುತ್ತೆ. ಇವತ್ತು ಮುಂಜಾನೆಗೆ ಯಮುನಾ ನೀರಿನ ಮಟ್ಟ 206.65ಕ್ಕೆ ತಲುಪಿದೆ. ಇನ್ನೂ ಪ್ರವಾಹ ಹೆಚ್ಚಾಗುವ ಸಂಭವವಿದ್ದು ನೀರಿನ ಮಟ್ಟ 207.32 ಮೀಟರ್ ಎತ್ತರಕ್ಕೆ ತಲುಪುವ ಸಾಧ್ಯತೆಯಿದೆ.

ಹರಿಯೋ ನೀರಿನ ರಭಸಕ್ಕೆ ಯಮುನಾ ನದಿ ಉದ್ದಕ್ಕೂ ಇರುವ ತಗ್ಗು ಪ್ರದೇಶಗಳು ಪ್ರವಾಹಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಯಮುನಾ ನದಿ ನೀರು ಅಪಾಯದ ಮಟ್ಟ ತಲುಪಿರೋದ್ರಿಂದ ನದಿ ಪಾತ್ರದ ಜನರನ್ನ ಸ್ಥಳಾಂತರ ಮಾಡಲಾಗಿದೆ. ಯಮುನಾ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಯ ಅಕ್ಕಪಕ್ಕದ ನಿವಾಸಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈಗಾಗಲೇ ದೆಹಲಿ ಸರ್ಕಾರ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಿದೆ. ತಗ್ಗು ಪ್ರದೇಶದಲ್ಲಿರುವವರನ್ನು ರಕ್ಷಣೆಯ ಕಾರ್ಯ ಭರದಿಂದ ಸಾಗಿದೆ.

ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಹೊರ ಹರಿವು ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಕಳೆದ ಸೋಮವಾರ 2,15,677 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿತ್ತು. ಈ ಹಿನ್ನೆಲೆ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಯುಮುನಾ ಬ್ರಿಡ್ಜ್‌ನಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧ ಮಾಡಲಾಗಿದೆ. ಮುಜಾಗ್ರತೆಯಾಗಿ ಸಾರಿಗೆ ಸಂಚಾರಕ್ಕೂ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿ: ಮಹಾಮಳೆಗೆ ತತ್ತರಿಸಿದ ಉತ್ತರ ಭಾರತ.. ಕುಸಿದ ಭೂಮಿ, ಉಕ್ಕಿಹರಿದ ನದಿಗಳು.. ಪ್ರವಾಹದಿಂದ ಏನೆಲ್ಲಾ ಅನಾಹುತ ಆಗ್ತಿದೆ..?

ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡುಗಡೆಯಾದ ಕಾರಣ ಯಮುನಾ ನದಿ ನೀರಿನ ಮಟ್ಟ ಅಪಾಯವನ್ನು ದಾಟಿದೆ. ಉತ್ತರಾಖಂಡ್ ರಾಜ್ಯದ ಯಮುನೋತ್ರಿಯಲ್ಲಿ ಯಮುನಾ ನದಿ ಹುಟ್ಟುತ್ತದೆ. ಹರಿಯಾಣ ಮೂಲಕ ದೆಹಲಿ, ಉತ್ತರ ಪ್ರದೇಶದತ್ತ ಯಮುನಾ ನದಿ ಹರಿಯುತ್ತದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಗಂಗಾ, ಅದೃಶ್ಯ ಸರಸ್ವತಿ ನದಿಯಲ್ಲಿ ವಿಲೀನವಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಯಮುನಾ ನದಿ; ದೆಹಲಿಯಲ್ಲಿ ಪ್ರವಾಹದ ಅಬ್ಬರ, ಕ್ಷಣ, ಕ್ಷಣಕ್ಕೂ ಆತಂಕ

https://newsfirstlive.com/wp-content/uploads/2023/07/Yamuna-River-2.jpg

Load More