/newsfirstlive-kannada/media/post_attachments/wp-content/uploads/2024/10/Yangwang-U8-car.jpg)
ಚೀನಾ ಏನಾದರೊಂದು ಅನ್ವೇಷಣೆ ಮಾಡುತ್ತಿರುತ್ತದೆ. ಅದರಲ್ಲೂ ಪ್ರಪಂಚಕ್ಕೆ ಹೊಸ ಕೊಡುಗೆಯನ್ನು ನೀಡುತ್ತಿರುತ್ತದೆ. ಎಲೆಕ್ಟ್ರಿಕ್​ ಸಾಧನಗಳಲ್ಲಿ ಮಾತ್ರವಲ್ಲದೆ ವಾಹನಗಳಲ್ಲೂ ಸಾಕಷ್ಟು ಬದಲಾವಣೆಯನ್ನು ಚೀನಾ ತಂದಿದೆ. ಅದರಂತೆಯೇ ಎಲೆಕ್ಟ್ರಿಕ್​ ಕಾರೊಂದನ್ನ ಪರಿಚಯಿಸಿರುವ ಚೀನಾ ಅದರಲ್ಲಿ ನೀರಿನಲ್ಲೂ ತೇಲುವಂತೆ ಮಾಡುವ ವೈಶಿಷ್ಯವನ್ನು ತಂದಿದೆ.
ಕಳೆದ ಫೆಬ್ರವರಿಯಲ್ಲಿ ಚೀನಾದ ಬಿವೈಡಿ ಜಿನೀವಾ ಕಾರ್​ ಶೋನಲ್ಲಿ ಯಂಗ್​ವಾಂಗ್​ ಯು8 ಹೆಸರಿನ ಕಾರನ್ನು ಪ್ರದರ್ಶಿಸಿತ್ತು. ಇದು ಐಷಾರಾಮಿ ಕಾರು ಆಗಿದ್ದು, ಪ್ಲಗ್​-ಇನ್​​ ಹೈಬ್ರಿಡ್​​ ಎಸ್​ಯುವಿಯಾಗಿದೆ. ಈ ಕಾರು ಅಪಘಾತದ ಸಮಯದಲ್ಲಿ ನೀರಿಗೆ ಬಿದ್ದರೆ ತೇಲುವ ಸಾಮರ್ಥ್ಯವನ್ನು ಹೊಂದಿದೆ.
/newsfirstlive-kannada/media/post_attachments/wp-content/uploads/2024/10/Yangwang-U8-car-1.jpg)
ಇದನ್ನೂ ಓದಿ: Vodafone Idea: 5G ಸೇವೆ ಪ್ರಾರಂಭಿಸಲು ಮುಂದಾದ ವೊಡಾಫೋನ್​ ಐಡಿಯಾ? ಬೆಂಗಳೂರಿಗೆ ಯಾವಾಗ?
ಅಂದಹಾಗೆಯೇ ಯಂಗ್​ವಾಂಗ್​ ಯು8 ಸುಮಾರು 3.5 ಟನ್​ ತೂಕವಿದೆ. ಪ್ರತಿ ಚಕ್ರದಲ್ಲೂ ಒಂದರಂತೆ ನಾಲ್ಕು ಎಲೆಕ್ಟ್ರಿಕ್​ ಮೋಟಾರ್​ ಅಳವಡಿಸಲಾಗಿದೆ. ಇದು ನೀರಿಗೆ ಬಿದ್ದರೆ ಆಮೆಯಂತೆ ತೇಲುತ್ತದೆ. ಈ ಎಲೆಕ್ಟ್ರಿಕ್​ ಕಾರು ಬರೀ 18 ನಿಮಿಷದಲ್ಲಿ 80 ಪ್ರತಿಶತದಷ್ಟು ಬ್ಯಾಟರಿ ಚಾರ್ಜ್​ ಆಗುತ್ತದೆ.
/newsfirstlive-kannada/media/post_attachments/wp-content/uploads/2024/10/Yangwang-U8-car-2.jpg)
ಪ್ರಸ್ತುತ ಯಂಗ್​ವಾಂಗ್​ ಯು8 ಕಾರು ಚೀನಾ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟಕ್ಕಿದೆ. ನೋಡಲು ಮೇಲ್ನೋಟಕ್ಕೆ ರೇಂಜ್​ ರೋವರ್​ನಂತೆ ಕಾಣುವ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಗ್ರ್ಯಾಂಡ್​ ಲುಕ್​​ ಹೊಂದಿರುವ ಈ ಕಾರನ್ನು 1,98,11,366 ರೂಪಾಯಿಗೆ ಮಾರಾಟ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us