Toxic: ನಟಿಯಾಗಿಯೂ ಸೈ, ನಿರ್ದೇಶಕಿಯಾಗಿಯೂ ಜೈ! ಯಶ್​ಗೆ ಆ್ಯಕ್ಷನ್​ ಕಟ್​​ ಹೇಳುತ್ತಿರುವ ಗೀತು ಯಾರು?

author-image
AS Harshith
Updated On
Toxic: ನಟಿಯಾಗಿಯೂ ಸೈ, ನಿರ್ದೇಶಕಿಯಾಗಿಯೂ ಜೈ! ಯಶ್​ಗೆ ಆ್ಯಕ್ಷನ್​ ಕಟ್​​ ಹೇಳುತ್ತಿರುವ ಗೀತು ಯಾರು?
Advertisment
  • 1986ರಲ್ಲಿ ಮೊದಲ ಬಾರಿಗೆ ನಟಿಸಿದ ಗೀತು ಮೋಹನ್ ದಾಸ್
  • 'ಲಾಯರ್ಸ್​ ಡೈಸ್​' ಸಿನಿಮಾದ ಮೂಲಕ ಭಾರೀ ಸಕ್ಸಸ್​
  • 2004ರಲ್ಲಿ 'ಆಕಲೇ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ

‘ಟಾಕ್ಸಿಕ್’ ಯಶ್​ 19ನೇ ಸಿನಿಮಾ. ಇಂದು ಈ ಸಿನಿಮಾದ ಟೈಟಲ್​ ಅನೌನ್ಸ್​ ಆಗಿದೆ. ಕೆವಿಎನ್​ ಪ್ರೊಡಕ್ಷನ್​ನಡಿ ಈ ಸಿನಿಮಾ ಮೂಡಿಬರುತ್ತಿದ್ದು, ಯ್ಯೂಟೂಬ್​ನಲ್ಲಿ ಟೈಟಲ್​ ರಿಲೀಸ್​ ಆಗುತ್ತಿದ್ದಂತೆ ಅಭಿಮಾನಿಗಳ ಪುಲಕ ಇನ್ನಷ್ಟು ಹೆಚ್ಚಾಗಿದೆ. ಅಂದಹಾಗೆಯೇ ಈ ಸಿನಿಮಾವನ್ನ ಮಹಿಳಾ ಮಣಿಯೊಬ್ಬರು ನಿರ್ದೇಶನ ಮಾಡುತ್ತಿದ್ದಾರೆ.

ಯಶ್​ಗೆ ಈ ಬಾರಿ ನಟಿ, ನಿರ್ದೇಶಕಿ ಗೀತು ಮೋಹನ್​ದಾಸ್​​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಮಲಯಾಳಂ ಮೂಲದ ಗೀತು ಈ ಬಾರಿ ಯಶ್​ಗೆ ಮತ್ತೆ ಸಕ್ಸಸ್​​ ದಾರಿ ತೋರಿಸಲು ಮುಂದಾಗಿದ್ದಾರೆ.

ಯಾರು ಈ ಗೀತು ಮೋಹನ್ ದಾಸ್?

ಗೀತು ಅವರ ಮತ್ತೊಂದು ಹೆಸರು ಗಾಯತ್ರಿ ದಾಸ್​. ಮೊದಲೇ ಹೇಳಿದಂತೆ ಗೀತು ಮೋಹನ್ ದಾಸ್​ ಮಲಯಾಳಂ ನಟಿ ಹಾಗೂ ನಿರ್ದೇಶಕಿ. ಒಂದು ಕಿರುಚಿತ್ರ ಹಾಗೂ ಎರಡು ಫೀಚರ್ ಸಿನಿಮಾ ಮಾಡಿದ್ದಾರೆ.

publive-image

2014ರಲ್ಲಿ ತೆರೆಗೆ ಬಂದಿದ್ದ 'ಲಾಯರ್ಸ್​ ಡೈಸ್​' ಸಿನಿಮಾದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ಗೀತು ಇದೇ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಮಾತ್ರವಲ್ಲದೆ, ಈ ಸಿನಿಮಾದ ಅತ್ತುತ್ತಮ ನಟಿ ಗೀತಾಂಜಲಿ ತಪ್ಪ ಹಾಗೂ ಅತ್ಯುತ್ತಮ ಛಾಯಾಗ್ರಾಹಕ ರಾಜೀವ್ ರವಿಗೆ ಕೂಡ ಪ್ರಶಸ್ತಿ ಬಂದಿತ್ತು.2019ರಲ್ಲಿ ಗೀತು ಮೋಹನ್​ 'ಮೂತನ್' ಸಿನಿಮಾ ಮಾಡಿದ್ದು ಈ ಚಿತ್ರ ಹಲವು ಫಿಲಂ ಫೆಸ್ಟಿವಲ್​ಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.

ನಟಿಯಾಗಿಯೂ ಸೈ, ನಿರ್ದೇಶಕಿಯಾಗಿಯೂ ಜೈ!

ಗೀತು ಮೋಹನ್ ದಾಸ್​ ಬಾಲನಟಿ, ಪೋಷಕನಟಿಯಾಗಿ ಖ್ಯಾತಿ ಪಡೆದಿದ್ದಾರೆ. 1986ರಲ್ಲಿ ಚೊಚ್ಚಲ ಬಾರಿಗೆ ಗೀತು ಮೋಹನ್ ದಾಸ್ ನಟಿಸಿದ್ದು, ಅವರ ನಟನೆಗೆ ಕೇರಳ ರಾಜ್ಯ ಚಲನಚಿತ್ರ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಕೂಡ ಸಿಕ್ಕಿದೆ.

publive-image

2004ರಲ್ಲಿ 'ಆಕಲೇ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಈ ಚಿತ್ರದ ನಟನೆ ಫಿಲಂ ಫೇರ್ ಪ್ರಶಸ್ತಿನೂ ಬಂದಿದೆ. 2009ರಲ್ಲಿ ನಾಮಲ್ ತಮ್ಮಿಲ್ ಚಿತ್ರದಲ್ಲಿ ಗೀತು ಮೋಹನ್ ದಾಸ್ ಕೊನೆಯದಾಗಿ ನಟಿಸಿದ್ದರು. ಸದ್ಯ ಯಶ್​​ಗೆ ಆ್ಯಕ್ಷನ್​ ಕಟ್​​ ಹೇಳಲು ಗೀತು ಮೋಹನ್​ ದಾಸ್​ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment