ಹೊಸ ಸಿನಿಮಾ ಸೆಟ್​ನಲ್ಲಿ ಯಶ್ ಜತೆ ಹೊಸ ಲುಕ್​ನಲ್ಲಿ ಶಿವಣ್ಣ; ಇಬ್ಬರ ಭೇಟಿ ಹಿಂದಿನ ಕಾರಣವೇನು?

author-image
Bheemappa
Updated On
ಹೊಸ ಸಿನಿಮಾ ಸೆಟ್​ನಲ್ಲಿ ಯಶ್ ಜತೆ ಹೊಸ ಲುಕ್​ನಲ್ಲಿ ಶಿವಣ್ಣ; ಇಬ್ಬರ ಭೇಟಿ ಹಿಂದಿನ ಕಾರಣವೇನು?
Advertisment
  • ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯುತ್ತಿರುವುದು ಎಲ್ಲಿ..?
  • ಶೂಟಿಂಗ್ ಮಾಡುವ ವೇಳೆ ಭೇಟಿಯಾದ ಶಿವಣ್ಣ- ಯಶ್​
  • ಶಿವರಾಜ್​ ಕುಮಾರ್ ಯಾವ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ?

ಸದ್ಯ ಸ್ಯಾಂಡಲ್​​ವುಡ್​​ನಲ್ಲಿ ಸಿನಿಮಾಗಳ ಶೂಟಿಂಗ್ ಕೆಲಸ​ ಜೋರಾಗಿ ನಡೆಯುತ್ತಿದೆ. ಕೆಜಿಎಫ್​ ಬಳಿಕ ಯಶ್​ ಅವರು ಟಾಕ್ಸಿಕ್​​ನಲ್ಲಿ ಬ್ಯುಸಿ ಇದ್ದರೇ, ಇತ್ತ ಶಿವಣ್ಣ ಕೂಡ ತಮ್ಮ 131ನೇ ಸಿನಿಮಾ ಶೂಟಿಂಗ್​ನಲ್ಲಿ ಫುಲ್ ಬ್ಯುಸಿ ಇದ್ದಾರೆ. ಇಂತಹ ಬ್ಯುಸಿ ಸಮಯದಲ್ಲೇ ರಾಕಿಂಗ್ ಸ್ಟಾರ್ ಯಶ್ ಹಾಗೂ ಶಿವಣ್ಣ ಇಬ್ಬರು ಪರಸ್ಪರ ಭೇಟಿಯಾಗಿ ಕೆಲ ಸಮಯ ಚರ್ಚೆ ಮಾಡಿದ್ದಾರೆ.

publive-image

ಸಿನಿಕಾನ್ ಸಿಟಿಯ ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಟಾಕ್ಸಿಕ್​ ಸಿನಿಮಾಕ್ಕಾಗಿ ಅದ್ಧೂರಿ ಸೆಟ್​ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಇದರಲ್ಲಿ ಹಲವಾರು ಕಲಾವಿದರು, ಟೆಕ್ನಿಷಿಯನ್ಸ್ ಕೆಲಸ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ ಇದೇ ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರ 131ನೇ ಸಿನಿಮಾ ಶೂಟಿಂಗ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ.

publive-image

ಎರಡು ಸಿನಿಮಾಗಳು ಒಂದೇ ಸ್ಥಳದಲ್ಲಿ ಶೂಟಿಂಗ್ ಆಗುತ್ತಿರುವುದರ ಕುರಿತು ತಿಳಿದುಕೊಂಡ ರಾಕಿ ಭಾಯ್ ಅವರು ಶೂಟಿಂಗ್​​ನಲ್ಲಿ ಬ್ಯುಸಿ ಇದ್ದ ಶಿವಣ್ಣ ಬಳಿ ಬಂದಿದ್ದಾರೆ. ಈ ವೇಳೆ ಶಿವಣ್ಣ ಕೂಡ ಯಶ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

publive-image

ಶಿವಣ್ಣ ಅವರನ್ನು ಮೀಟ್ ಆಗುತ್ತಿದ್ದಂತೆ ಯಶ್ ಅವರು ಥ್ಯಾಂಕ್ಸ್ ಕೊಟ್ಟು ಪರಸ್ಪರ ಅಪ್ಪಿಕೊಂಡರು. ಇದೇ ವೇಳೆ ಟಾಕ್ಸಿಕ್ ಮೂವಿಗೆ ಡಾ. ಶಿವರಾಜ್ ಕುಮಾರ್ ಅವರು ಶುಭಾಶಯಗಳನ್ನು ಕೋರಿದ್ದಾರೆ.

publive-image

ರಾಕಿ ಭಾಯ್ ಯಶ್ ಹಾಗೂ ಶಿವರಾಜ್​ ಕುಮಾರ್ ಭೇಟಿ ಆಗಿರುವ ವಿಡಿಯೋ ಶೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಈ ಸ್ಟಾರ್​​ಗಳ ಫೋಟೋಗಳು ವೈರಲ್ ಆಗುತ್ತಿವೆ. ಅಲ್ಲದೇ ಇದಕ್ಕೆ ರಾಕಿ ಭಾಯ್ ಮೀಟ್ಸ್​ ದೇವ ಎನ್ನುವ ಟ್ಯಾಗ್​ ಲೈನ್ ಕೂಡ ಸಖತ್ ಫೇಮಸ್ ಆಗುತ್ತಿದೆ.

publive-image

131ನೇ ಸಿನಿಮಾ ಶೂಟಿಂಗ್​ನಲ್ಲಿ ಯಶ್ ಅವರನ್ನು ನೋಡುತ್ತಿದ್ದಂತೆ ನಗುತ್ತ ಬಂದು ಶಿವರಾಜ್ ಕುಮಾರ್ ಥ್ಯಾಂಕ್ಸ್ ಕೊಟ್ಟರು. ಬಳಿಕ ಯಶ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಅಲ್ಲದೇ ಶೂಟಿಂಗ್ ಸೆಟ್​​ನಲ್ಲಿದ್ದ ಇತರೆ ವ್ಯಕ್ತಿಗಳು ಥ್ಯಾಂಕ್ಸ್ ಕೊಟ್ಟರು. ಇದೇ ವೇಳೆ ಇಬ್ಬರು ಸ್ಟಾರ್ಸ್​ ಕುಳಿತು ಕೆಲವೊತ್ತು ಮಾತನಾಡಿದರು.

publive-image

ಇನ್ನು ಯಶ್ ಅವರ ಸಿನಿಮಾ ಟಾಕ್ಸಿಕ್​ ಅನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣ ಅವರ 131ನೇ ಮೂವಿಯನ್ನು ಡೈರೆಕ್ಟರ್ ಕಾರ್ತಿಕ್ ಅದ್ವೈತ್ ಡೈರೆಕ್ಷನ್ ಮಾಡುತ್ತಿದ್ದಾರೆ. ಎರಡು ಸಿನಿಮಾಗಳು ಅದ್ಭುತವಾದ ಕಥೆ ಹೊಂದಿದ್ದರಿಂದ ದೊಡ್ಡ ದೊಡ್ಡ ಸೆಟ್​ ಹಾಕಿ ಶೂಟಿಂಗ್​ ಮಾಡುತ್ತಿದ್ದಾರೆ. ಈ ಮೊದಲಿನ ಸಿನಿಮಾಗಳಿಗಿಂತ ಇಬ್ಬರು ಸ್ಟಾರ್ಸ್ ವಿಭಿನ್ನವಾದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.


">August 19, 2024



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment