ಮತ್ತೊಂದು ಕಾರು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್.. ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಕೋಟಿ..?

author-image
Veena Gangani
Updated On
ಮತ್ತೊಂದು ಕಾರು ಖರೀದಿಸಿದ ರಾಕಿಂಗ್ ಸ್ಟಾರ್ ಯಶ್.. ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಕೋಟಿ..?
Advertisment
  • ರಾವಣನಾಗಿ ಮಿಂಚಲು ಸಜ್ಜಾಗಿದ್ದಾರೆ ರಾಕಿಂಗ್​ ಸ್ಟಾರ್ ಯಶ್
  • ಮುಂಬೈ ಏರ್ ಪೋರ್ಟ್​ಗೆ ಕಾರಿನಲ್ಲಿ ಬಂದಿಳಿದ ರಾಕಿ ಭಾಯ್
  • ಯಶ್​ ಖರೀದಿ ಮಾಡಿದ ದುಬಾರಿ ಕಾರಿನ ಬೆಲೆ ಎಷ್ಟು ಗೊತ್ತಾ?

ರಾಕಿಂಗ್​ ಸ್ಟಾರ್​ ಯಶ್​​ ಸಾಲು ಸಾಲು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ನಟ ಯಶ್ ರಾವಣನಾಗಿ ಮಿಂಚಲು ಸಜ್ಜಾಗಿದ್ದಾರೆ. ಈ ಮಧ್ಯೆ ನಟ ಯಶ್ ಮತ್ತೊಂದು​ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್​ ಅವರ ಬಳಿ ಈಗಾಗಲೇ ಹಲವಾರು ಐಶಾರಾಮಿ ಕಾರುಗಳಿವೆ. ಈಗ ಅಷ್ಟು ಕಾರುಗಳ ಜೊತೆಗೆ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ.

ಇದನ್ನೂ ಓದಿ:ಇಂದಿನಿಂದ ರೈಲು ಪ್ರಯಾಣವೂ ದುಬಾರಿ.. ಐದು ವರ್ಷಗಳ ನಂತರ ಟಿಕೆಟ್​​ ರೇಟ್ ಹೆಚ್ಚಳ..

publive-image

ಇದೀಗ ಆ ಹೊಚ್ಚ ಹೊಸ ಕಾರನ್ನು ನಟ ಯಶ್​ ಮುಂಬೈನಲ್ಲಿ ಖರೀದಿಸಿದ್ದಾರೆ. ಯಶ್ ಖರೀದಿ ಮಾಡಿರುವ ಲೆಕ್ಸಸ್​ನ ಎಲ್​ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರಿನ ಬೆಲೆ ಸುಮಾರು 3 ಕೋಟಿ. ಈ ಕಾರಿನ ಎಕ್ಸ್ ಶೋರೂಂ ಬೆಲೆಯೇ 2.65 ಕೋಟಿ ರೂಪಾಯಿಗಳಿದೆ.

publive-image

ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಈ ಕಾರಿನ ನೊಂದಣಿಯನ್ನು ನಟ ಯಶ್ ಮಾಡಿಸಿದ್ದಾರೆ. ಇದೇ ಕಾರಿನಲ್ಲಿ ಮುಂಬೈ ಏರ್ ಪೋರ್ಟ್​ಗೆ ರಾಕಿ ಭಾಯ್ ಬಂದಿಳಿದ್ದಾರೆ. ಯಶ್ ಹೊಸ ಕಾರ್‌ ಮೇಲೆ MH47C 8055 ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಈಗಾಗಲೇ ಯಶ್ ಬಳಿ ಇರೋ ಎಲ್ಲಾ ಕಾರ್​ಗಳ ನಂಬರ್ ಪ್ಲೇಟ್​ 8055 ಇದೇ ನಂಬರಿನಲ್ಲಿದೆ.


">July 1, 2025

ಸದ್ಯ ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಮಧ್ಯೆದಲ್ಲೇ ರಾಕಿಂಗ್ ಸ್ಟಾರ್ ಯಶ್ ಯುಎಸ್ ಪ್ರವಾಸಕ್ಕೆ ಮುಂದಾಗಿದ್ದಾರೆ. ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಬಿಡುವಿಲ್ಲದ ಶೂಟಿಂಗ್​ನಲ್ಲಿ ಯಶ್ ಭಾಗಿಯಾಗಿದ್ರು. ಇದೀಗ ಕುಟುಂಬದ ಜೊತೆ ಕಾಲ ಕಳೆಯಲು ಯುಎಸ್ ಪ್ರವಾಸಕ್ಕೆ ಯಶ್ ಕುಟುಂಬ ಹೊರಟಿದ್ದು, ವಿಮಾನ ನಿಲ್ದಾಣದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment