/newsfirstlive-kannada/media/post_attachments/wp-content/uploads/2025/05/Virat-kohli-7.jpg)
ಮೇ 3 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆಲುವಿಗೆ ಯಶ್ ದಯಾಳ್ ಪ್ರಮುಖ ಪಾತ್ರವಹಿಸಿದ್ದರು. ಕೊನೆಯ ಓವರ್‌ನಲ್ಲಿ CSK ಗೆಲುವಿಗೆ 15 ರನ್‌ಗಳು ಬೇಕಾಗಿದ್ದವು.
ಬೆಸ್ಟ್ ಫಿನಿಷರ್ ಎಂದೇ ಖ್ಯಾತಿ ಪಡೆದಿದ್ದ ಧೋನಿ ಸ್ಟ್ರೈಕ್‌ನಲ್ಲಿದ್ದರೆ, ಜಡೇಜಾ ನಾನ್-ಸ್ಟ್ರೈಕ್‌ನಲ್ಲಿದ್ದರು. ಹೀಗಿದ್ದೂ ಚೆನ್ನೈ ತಂಡಕ್ಕೆ ಗೆಲುವು ಸಿಗಲಿಲ್ಲ. ಅದಕ್ಕೆ ಕಾರಣ ಯಶ್ ದಯಾಳ್! ಕಳೆದ ಋತುವಿನಲ್ಲಿಯೂ ಯಶ್ ದಯಾಳ್ ಸಿಎಸ್‌ಕೆ ವಿರುದ್ಧ ಇದೇ ರೀತಿಯ ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ: ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಭಾರೀ ಏರಿಳಿತ.. ಪ್ಲೇ-ಆಫ್ಗಾಗಿ ಪೈಪೋಟಿ ಹೇಗಿದೆ..?
ಕಳೆದ ಋತುವಿನ ಪಂದ್ಯದಲ್ಲಿ ಧೋನಿ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದರೂ ಕೊನೆಯ ಓವರ್‌ನಲ್ಲಿ 17 ರನ್ಗಳಿಸಲು ಸಾಧ್ಯವಾಗಲಿಲ್ಲ. ಯಶ್ ದಯಾಳ್ ರನ್ ಹೊಡೆಯಲು ಬಿಟ್ಟು ಕೊಡಲಿಲ್ಲ. ಒಂದು ಕಾಲದಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ನೀಡಿ ಕೆಟ್ಟ ದಾಖಲೆ ಬರೆದಿದ್ದ ದಯಾಳ್, ಈಗ ಆರ್‌ಸಿಬಿಗೆ ದೊಡ್ಡ ಆಸ್ತಿ ಆಗಿದ್ದಾರೆ. ದಯಾಳ್ ಈ ಬದಲಾವಣೆಗೆ ಕಾರಣ ಕೊಹ್ಲಿ ಎಂದು ದಯಾಳ್ ತಂದೆ ಚಂದ್ರಪಾಲ್ ಹೇಳಿದ್ದಾರೆ.
ದಯಾಳ್ ಜೀವನ ಬದಲಾಯಿಸಿದ ಕೊಹ್ಲಿ..
ಯಶ್ ದಯಾಳ್ ಪ್ರದರ್ಶನದ ಬಗ್ಗೆ ಮಾತನಾಡಿದ ಅವರ ತಂದೆ, ‘ಕೊಹ್ಲಿಯಿಂದಾಗಿ ನನ್ನ ಮಗ ಮುಕ್ತವಾಗಿ ಆಡ್ತಿದ್ದಾನೆ. ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ. ಕೊಹ್ಲಿ ಆರ್‌ಸಿಬಿ ಸೇರಿದಾಗಿನಿಂದ ಮಗನೊಂದಿಗೆ ನಿರಂತರವಾಗಿ ಮಾತನಾಡ್ತಿದ್ದಾರೆ. ಕೊಹ್ಲಿ ಆಗಾಗ ದಯಾಳ್ ಜೊತೆ ಮಾತನಾಡಲು ಕೋಣೆಗೆ ಕರೆಯುತ್ತಾರೆ. ಕೆಲವೊಮ್ಮೆ ಅವರೇ ಯಶ್ ರೂಮ್ಗೆ ಹೋಗಿ ಆಟದ ಬಗ್ಗೆ ವಿವರಿಸುತ್ತಾರೆ. ನಾನು ನಿಮ್ಮೊಂದಿಗಿದ್ದೇನೆ, ಚಿಂತಿಸಬೇಡಿ, ತಪ್ಪುಗಳನ್ನು ಮಾಡಿ ಆದರೆ ಅವುಗಳಿಂದ ಕಲಿಯಿರಿ ಮತ್ತು ಮುಂದುವರಿಯಿರಿ ಎಂಬ ಸಲಹೆ ನೀಡ್ತಿದ್ದಾರೆ ಎಂದು ಕೊಹ್ಲಿಯ ದೊಡ್ಡಗುಣವನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ: ಆರೆಂಜ್ ಕ್ಯಾಪ್ಗಾಗಿ ರನ್ ವಾರ್.. 4 ದಿನದಲ್ಲಿ ಮೂವರ ಪಾಲು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ