/newsfirstlive-kannada/media/post_attachments/wp-content/uploads/2025/06/YASH_DAYAL-1.jpg)
ಐಪಿಎಲ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ಆರ್ಸಿಬಿಗೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನೇ ವಹಿಸಿದ್ದರು. ಇದೀಗ ಅದೇ ಮ್ಯಾಚ್ ವಿನ್ನರ್ ಬೌಲರ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಯಶ್ ದಯಾಳ್ ಅರೆಸ್ಟ್ ಆಗ್ತಾರಾ ಎಂಬ ಸುದ್ದಿ ಜೋರಾಗಿ ಕೇಳಿ ಬರ್ತಿದೆ.
ಯಶ್ ದಯಾಳ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾಚ್ ವಿನ್ನರ್. 3 ವರ್ಷಗಳ ಹಿಂದೆ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದ ಯಶ್ ದಯಾಳ್, ಕಳೆದ ಎರಡು ವರ್ಷಗಳಿಂದ ರಾಯಲ್ ಚಾಲೆಂರ್ಸ್ ಬೆಂಗಳೂರು ಪಾಲಿನ ರಿಯಲ್ ಗೇಮ್ ಚೇಂಜರ್ ಮಾತ್ರವಲ್ಲ. 18 ವರ್ಷಗಳ ಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಿಯಲ್ ಹೀರೋ. ಇದೀಗ ಕ್ರಿಕೆಟ್ ಲೋಕದಲ್ಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಅದು ಆನ್ಫೀಲ್ಡ್ ವಿಚಾರಕ್ಕಲ್ಲ, ಆಫ್ ದಿ ಫೀಲ್ಡ್ ವಿಚಾರಕ್ಕಾಗಿದೆ.
ವಿವಾದದ ಸುಳಿಯಲ್ಲಿ ಆರ್ಸಿಬಿಯ ಯಶ್ ದಯಾಳ್..!
ಐಪಿಎಲ್ನಲ್ಲಿ ಡೆಡ್ಲಿ ಸ್ಪೆಲ್ಸ್ ಹಾಕಿ, ಆರ್ಸಿಬಿಯ ಅಭಿಮಾನಿಗಳ ಮನ ಗೆದ್ದಿದ್ದ ಯಶ್ ದಯಾಳ್, ಈಗ ಅದೇ ಅಭಿಮಾನಿಗಳ ಮುಂದೆ ವಿಲನ್ ಆಗಿದ್ದಾರೆ. ಆದ್ರೆ, ಈ ಸಲ ವಿಲನ್ ಆಗಿರೋದು ಆಫ್ ಫೀಲ್ಡ್ನಲ್ಲಿ ಮಾಡಿರೋ ಘನಂದಾರಿ ಕೆಲಸಕ್ಕೆ. ಬಿರುಗಾಳಿ ವೇಗದ ಎಸೆತಗಳಿಂದಲೇ ನಡುಕ ಹುಟ್ಟಿಸಿದ್ದ ಯಶ್ ದಯಾಳ್, ಇದೀಗ ಲೈಂಗಿಕ ಕಿರುಕುಳ, ಹಿಂಸೆ ಹಾಗೂ ವಂಚನೆಯಂಥ ಬಹುದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ಕೂಲ್ ಆ್ಯಂಡ್ ಕಾಮ್ ವ್ಯಕ್ತಿತ್ವದಿಂದಲೇ ಪರಿಚಿತನಾಗಿದ್ದ ಯಶ್ ದಯಾಳ್ರ ಮತ್ತೊಂದು ಮುಖ ಬಟಬಯಲಾಗಿದೆ.
ಸಂತ್ರಸ್ತ ಯುವತಿಯಿಂದ ದೂರು.. ಎಫ್‌ಐಆರ್ ದಾಖಲು..!
ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಸಂತ್ರಸ್ತ ಯುವತಿ, ಸಿಎಂ ಯೋಗಿ ಆದಿತ್ಯನಾಥ್ ಆನ್‌ಲೈನ್ ಪೋರ್ಟಲ್ನಿಂದ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಲೈಂಗಿಕ ಕಿರುಕುಳ, ಮಾನಸಿಕ, ದೈಹಿಕ ಹಲ್ಲೆಯ ಆರೋಪ ಮಾಡಿದ್ದಾರೆ. ಈ ಕುರಿತಾಗಿ ದಯಾಳ್ ವಿರುದ್ಧ ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ. ಇದರೊಂದಿಗೆ ಯಶ್ ದಯಾಳ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎಫ್‌ಐಆರ್‌ನಲ್ಲಿ ಏನಿದೆ..?
- 5 ವರ್ಷಗಳಿಂದ ತಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಉಲ್ಲೇಖ
- ನಾನೇ ನಿನ್ನ ಗಂಡ ಎಂದು ಪೋಷಕರ ಪರಿಚಯಿಸಿದ್ದ ಯಶ್ ದಯಾಳ್
- ದಯಾಳ್ ಮಾತು ನಂಬಿ, ಸರ್ವಸ್ವವೂ ಅರ್ಪಿಸಿರುವುದಾಗಿ ಉಲ್ಲೇಖ
- ಮದುವೆ ವಿಚಾರ ಪ್ರಸ್ತಾಪಿಸಿದ್ದಕ್ಕಾಗಿ ದೈಹಿಕ ಹಲ್ಲೆ, ಮಾನಸಿಕ ಹಿಂಸೆ
- ಆರ್ಥಿಕವಾಗಿಯು ಶೋಷಣೆ ಮಾಡಿದ್ದಾನೆ ಎಂದು ಯುವತಿ ಆರೋಪ
- ಸುಳ್ಳು ಮದುವೆ ಭರವಸೆ ನೀಡಿ ಹಲವು ಯುವತಿಯರಿಗೆ ವಂಚನೆ
ಯಶ್ ದಯಾಳ್ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ಸಂತ್ರಸ್ತ ಯುವತಿ, ಚಾಟ್ ರೆಕಾರ್ಡ್‌ಗಳು, ಸ್ಕ್ರೀನ್‌ಶಾಟ್‌ಗಳು, ವಿಡಿಯೋ ಕಾಲ್‌ಗಳು ಸೇರಿದಂತೆ ಇನ್ನಿತರ ಸಾಕ್ಷಿಗಳಿವೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಕಚೇರಿಯಿಂದಲೇ ತನಿಖೆಗೆ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ KRS.. ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ
ಅರೆಸ್ಟ್ ಆಗ್ತಾರಾ ಆರ್ಸಿಬಿಯ ಯಶ್ ದಯಾಳ್.?
ಸದ್ಯ ಮುಖ್ಯಮಂತ್ರಿ ಕಚೇರಿಯಿಂದಲೇ ತನಿಖೆಗೆ ಆದೇಶಿಸಲಾಗಿದ್ದು, ಈ ಸಂಬಂಧ ವರದಿ ನೀಡಲು ಗಾಜಿಯಾಬಾದ್ ಪೊಲೀಸರಿಗೆ ಸೂಚಿಸಲಾಗಿದೆ. ತನಿಖೆಯ ವರದಿ ಸಲ್ಲಿಸಲು ಜುಲೈ 21ರ ತನಕ ಗಡುವು ನೀಡಲಾಗಿದೆ. ಈ ಸಂಬಂಧ ತನಿಖೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಬೆನ್ನಲ್ಲೇ ಯಶ್ ದಯಾಳ್ ಅರೆಸ್ಟ್ ಆಗ್ತಾರಾ ಎಂಬ ಕುತೂಹಲ ಫ್ಯಾನ್ಸ್ಗೆ ಕಾಡ್ತಿದೆ.
ಒಂದಲ್ಲ.. ಎರಡಲ್ಲ.. ಬರೋಬ್ಬರಿ 11 ಮಂದಿಯಿಂದ ದೂರು!
ಆರ್ಸಿಬಿ ವೇಗಿ ಯಶ್ ದಯಾಳ್ ಮೇಲೆ ಮಾತ್ರವಲ್ಲ, ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಶಮರ್ ಜೋಸೆಫ್ ವಿರುದ್ಧವೂ ಆರೋಪ ಕೇಳಿಬಂದಿದೆ. ಒಂದಲ್ಲ ಎರಡಲ್ಲ, 18 ವರ್ಷದ ಯುವತಿ ಸೇರಿ 11 ಮಂದಿ ಶಮರ್ ಜೋಸೆಫ್ ವಿರುದ್ಧ ಗಯಾನಾ ಪೊಲೀಸರು ಮುಂದೆ ದೂರು ನೀಡಿದ್ದಾರೆ. 18 ವರ್ಷದ ಯವತಿ ಮೇಲೆ 2023ರ ಮಾರ್ಚ್ 3ರಿಂದ ನಿರಂತರ ಅತ್ಯಾಚಾರ ಎಸಗಿರುವುದಾಗಿ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ದೂರು ದಾಖಲಿಸಿರುವ ಸಂತ್ರಸ್ತೆಯರು, ಮೆಸೇಜ್‌ಗಳು, ಆಡಿಯೋಗಳು ಸೇರಿದಂತೆ ಇನ್ನಿತರ ಸಾಕ್ಷ್ಯಗಳನ್ನ ಪೊಲೀಸರಿಗೆ ಸಲ್ಲಿಸಿದ್ದಾರೆ. ಸದ್ಯ ಇವರಿಬ್ಬರ ಮೇಲಿನ ದೂರುಗಳು ವಿಶ್ವ ಕ್ರಿಕೆಟ್ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ