/newsfirstlive-kannada/media/post_attachments/wp-content/uploads/2024/09/YASH-DAYAL.jpg)
ಬಾಂಗ್ಲಾದೇಶ ಬೆನ್ನಲ್ಲೀಗ ನ್ಯೂಜಿಲೆಂಡ್ ಭಾರತ ಪ್ರವಾಸ ಕೈಗೊಂಡಿದೆ. ಅಕ್ಟೋಬರ್ 16ನೇ ತಾರೀಕಿನಿಂದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ಮಧ್ಯೆ 3 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದೆ. ಈ ಮಹತ್ವದ ಸರಣಿಗೆ ಈಗಾಗಲೇ ಬಿಸಿಸಿಐ ಬಲಿಷ್ಠ ಟೀಮ್ ಇಂಡಿಯಾ ಪ್ರಕಟಿಸಿದೆ.
ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಆದರೀಗ, ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದ ಎಡಗೈ ಬೌಲರ್ ಯಶ್ ದಯಾಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಯಶ್ ದಯಾಳ್ ಕೈ ಬಿಡಲು ಕಾರಣವೇನು?
ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಯಶ್ ದಯಾಳ್ ಬೆಂಚ್ ಕಾದಿದ್ದರು. ನಂತರ ಇರಾನಿ ಕಪ್ ಟೂರ್ನಿಯಲ್ಲಿ ಯಶ್ ದಯಾಳ್ ರೆಸ್ಟ್ ಆಫ್ ಇಂಡಿಯಾ ಪರ ಆಡಿದ್ದರು. ಬಳಿಕ ಶುರುವಾದ ರಣಜಿ ಟ್ರೋಫಿ ಪಂದ್ಯದ ವೇಳೆ ಯಶ್ ದಯಾಳ್ ತೀವ್ರವಾಗಿ ಗಾಯಗೊಂಡಿದ್ದರು.
ಕೈ ಕೊಟ್ಟ ಅದೃಷ್ಟ
ನ್ಯೂಜಿಲೆಂಡ್ ವಿರುದ್ಧ ಯಶ್ ದಯಾಳ್ ಡೆಬ್ಯೂ ಮಾಡುವ ನಿರೀಕ್ಷೆಯಿತ್ತು. ಆದರೆ ತೀವ್ರವಾಗಿ ಗಾಯಗೊಂಡ ಕಾರಣ ಸುವರ್ಣ ಅವಕಾಶವನ್ನು ಕಸಿದುಕೊಂಡಿದೆ. ಯಶ್ ದಯಾಳ್ ಯಾವುದೇ ಪಂದ್ಯ ಆಡದೆ ಟೆಸ್ಟ್ ತಂಡದಿಂದ ಹೊರಗುಳಿದಿರುವುದು ಎಲ್ಲರಿಗೂ ಬೇಸರ ತರಿಸಿದೆ.
ಇದನ್ನೂ ಓದಿ:6,6,6,6,6,6,6,6; ಸಂಜು ಸ್ಫೋಟಕ ಶತಕಕ್ಕೆ ಕಾರಣ ಯಾರು? ಈ ಬಗ್ಗೆ ಸ್ಯಾಮ್ಸನ್ ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ