/newsfirstlive-kannada/media/post_attachments/wp-content/uploads/2025/04/yash14.jpg)
ರಾಕಿಂಗ್ ಸ್ಟಾರ್ ಯಶ್ ಅವರು ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೇ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದಾರೆ. ಯಶ್ ಅವರು ಕೇವಲ ನಟ ಮಾತ್ರವಲ್ಲದೇ ನಿರ್ಮಾಪಕ ಕೂಡ ಹೌದು. ಬಾಲಿವುಡ್ನ ರಾಮಾಯಣ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.
ಇದೀಗ ನಟ ಯಶ್ ಮಾತ್ರವಲ್ಲದೇ ಅವರ ಕುಟುಂಬದವರು ಕೂಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಹೌದು, ಯಶ್ ಅವರ ಪೋಷಕರು ಸಿನಿಮಾ ನಿರ್ಮಾಣಕ್ಕೆ ರೆಡಿ ಆಗಿದ್ದಾರೆ. ಸಿನಿಮಾ ನಿರ್ಮಾಣಕ್ಕಾಗಿ ಪಿಎ (PA) ಅನ್ನೋ ಹೊಸ ಪ್ರೊಡಕ್ಷನ್ ಆರಂಭಿಸಿದ್ದಾರೆ.
View this post on Instagram
ಈ ಸಂಸ್ಥೆಗೆ ಯಶ್ ತಾಯಿ - ತಂದೆಯ ಶುರುವಾಗುವ ಮೊದಲ ಅಕ್ಷರವನ್ನು ಇಡಲಾಗಿದೆ. A ಎಂದರೆ ಅರುಣ್ ಕುಮಾರ್, p ಎಂದರೆ ಪುಷ್ಪಾ. ಈ ಪ್ರೊಡಕ್ಷನ್ ಮೊದಲ ಸಿನಿಮಾಗೆ ಪೃಥ್ವಿ ಅಂಬರ್ ಹೀರೋ ಆಗಿದ್ದಾರೆ. ಆದ್ರೆ ಈ ಬಗ್ಗೆ ಯಶ್ ತಾಯಿ ನಿರ್ಮಾಣ ಸಂಸ್ಥೆ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಮಾಹಿತಿ ಹೊರಬೀಳಲಿದೆ.
ಸದ್ಯ ನಟ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ರಾಮಾಯಣ’ ಸಿನಿಮಾ ಕೆಲಸಗಳು ಇತ್ತೀಚೆಗೆ ಆರಂಭ ಆಗಿವೆ. ಅದಕ್ಕೂ ಮೊದಲು ಅವರು ಮಧ್ಯೆ ಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿ ಬಂದರು. ಈ ಸಂದರ್ಭದ ವಿಡಿಯೋ ಹಾಗೂ ಫೋಟೋ ವೈರಲ್ ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ