ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್​ ಮುದ್ದಿನ ಮಗ; ಕ್ಯೂಟ್​​ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್

author-image
Veena Gangani
Updated On
ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್​ ಮುದ್ದಿನ ಮಗ; ಕ್ಯೂಟ್​​ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
Advertisment
  • ರಾಕಿಂಗ್​ ಸ್ಟಾರ್ ಯಶ್​ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಸಂಭ್ರಮ
  • ಮಗನ ಮುದ್ದಾದ ವಿಡಿಯೋ ಶೇರ್ ಮಾಡಿಕೊಂಡ ಸ್ಟಾರ್ ದಂಪತಿ
  • ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಌಕ್ಟೀವ್​ ಆಗಿರುತ್ತಾರೆ ನಟಿ

ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಮುದ್ದಿನ ಮಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾನೆ.

publive-image

ಇದೇ ಖುಷಿಯಲ್ಲಿದ್ದ ರಾಧಿಕಾ ಪಂಡಿತ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತುಂಬಾ ಮುದ್ದಾದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಸ್ಟಾರ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಎರಡನೇ ಮಗ ಯಥರ್ವ್​ಗೆ ಹುಟ್ಟುಹಬ್ಬದ ಸಂಭ್ರಮ.

publive-image

ಇದನ್ನೂ ಓದಿ: ದರ್ಶನ್ ಇವತ್ತೇ ಬಳ್ಳಾರಿ ಜೈಲಿನಿಂದ ರಿಲೀಸ್? ಮಧ್ಯಂತರ ಜಾಮೀನಿಗೆ 13 ಷರತ್ತುಗಳು; ಏನವು?

ಯಥರ್ವ್ ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಮಗನಿಗೆ ರಾಧಿಕಾ ಪಂಡಿತ್ ಕ್ಯೂಟ್​ ಆಗಿ ವಿಶ್​ ಮಾಡಿದ್ದಾರೆ. ಇನ್ನು ನಟಿ ರಾಧಿಕಾ ಅವರು ಶೇರ್ ಮಾಡಿಕೊಂಡ ವಿಡಿಯೋಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

publive-image

ಮಗ ಯಥರ್ವ್ ಮುದ್ದಾದ ಫೋಟೋಗಳನ್ನು ವಿಡಿಯೋ ರೂಪದಲ್ಲಿ ಶೇರ್ ಮಾಡಿದ್ದಾರೆ. ತುಂಬಾ ಬೇಗ, ಅದ್ಬುತ ಹುಡುಗನಾಗಿ ಬೆಳೆದಿದ್ದಾನೆ.

publive-image

ಹ್ಯಾಪಿ ಬರ್ತ್​ ಡೇ ಮೈ ಸನ್​ಶೈನ್​ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ಮಕ್ಕಳ ಲಾಲನೆ-ಪಾಲನೆಯಲ್ಲಿ ಸಖತ್ ಬ್ಯುಸಿ ಆಗಿದ್ದಾರೆ.

publive-image

ಆಗಾಗ ಮಕ್ಕಳ ಜೊತೆ ಟ್ರಿಪ್ ಮಾಡುತ್ತಾ ಇರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಸದ್ಯ ಹೊಸದಾಗಿ ಶೇರ್ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment