ರಾಧಿಕಾ ಪಂಡಿತ್​ಗಾಗಿ ರೊಮ್ಯಾಂಟಿಕ್‌ ಹಾಡು ಹಾಡಿದ ರಾಕಿಂಗ್​ ಸ್ಟಾರ್​ ಯಶ್​; ವಿಡಿಯೋ ವೈರಲ್‌!

author-image
Veena Gangani
Updated On
ರಾಧಿಕಾ ಪಂಡಿತ್​ಗಾಗಿ ರೊಮ್ಯಾಂಟಿಕ್‌ ಹಾಡು ಹಾಡಿದ ರಾಕಿಂಗ್​ ಸ್ಟಾರ್​ ಯಶ್​; ವಿಡಿಯೋ ವೈರಲ್‌!
Advertisment
  • ಅದೆಷ್ಟೋ ದಂಪತಿಗಳಿಗೆ ಈ ಸ್ಯಾಂಡಲ್​ವುಡ್ ಸ್ಟಾರ್​ ಜೋಡಿಯೇ ಪ್ರೇರಣೆ
  • ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್
  • ಮಾರ್ಚ್​ 7ರಂದು ತುಂಬಾ ಗ್ರ್ಯಾಂಡ್‌ ಆಗಿ ಬರ್ತ್​ ಡೇ ಆ ಆಚರಿಸಿಕೊಂಡ ನಟಿ

ಅದೆಷ್ಟೋ ಪ್ರೇಮಿಗಳಿಗೆ, ಅದೆಷ್ಟೋ ದಂಪತಿಗಳಿಗೆ ಈ ಸ್ಟಾರ್​ ಜೋಡಿಯೇ ಪ್ರೇರಣೆ. ಸಾಕಷ್ಟು ಪ್ರೇಮಿಗಳು ಹಾಗೂ ದಂಪತಿ ಜೀವನದಲ್ಲಿ ಹೀಗೆ ಯಶ್​ ಹಾಗೂ ರಾಧಿಕಾ ಪಂಡಿತ್​ ಅವರ ರೀತಿ ಬಾಳಿ ಬದುಕಬೇಕು ಅಂತ ಅಂದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ತಮ್ಮ ಪ್ರೀತಿಯನ್ನು ಭದ್ರವಾಗಿ ಇಟ್ಟುಕೊಂಡಿದ್ದಾರೆ ಈ ಸ್ಟಾರ್​ ಸ್ಯಾಂಡಲ್​ವುಡ್​ ಜೋಡಿ.

ಇದನ್ನೂ ಓದಿ:ಪ್ರೇಮಿಗಳಿಗೆ ಈ ಸ್ಟಾರ್​ ಜೋಡಿಯೇ ಪ್ರೇರಣೆ; ಯಶ್,​ ರಾಧಿಕಾ ಪಂಡಿತ್ ಮಧ್ಯೆ ಲವ್ ಹುಟ್ಟಿದ್ದು ಹೇಗೆ?

publive-image

ಸದ್ಯ ಈ ಸ್ಟಾರ್​ ಜೋಡಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್‌ವುಡ್‌ನ ಸಿಂಡ್ರೆಲಾ ರಾಧಿಕಾ ಪಂಡಿತ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸ್ಟಾರ್​ ನಟ ರಾಕಿಂಗ್​ ಸ್ಟಾರ್ ಯಶ್​ ತಮ್ಮ ಪತ್ನಿ ರಾಧಿಕಾ ಪಂಡಿತ್​ ಅವರ  ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಮೊದಲು ಯಶ್‌ ಅವರ ಹುಟ್ಟುಹಬ್ಬವನ್ನು ರಾಧಿಕಾ ಪಂಡಿತ್‌ ಗೋವಾದಲ್ಲಿ ಸೆಲಬ್ರೇಟ್‌ ಮಾಡಿದ್ದರು. ಅದೇ ರೀತಿ ನಟ ಯಶ್‌ ಕೂಡ ರಾಧಿಕಾ ಅವರ ಈ ಬಾರಿಯ ಬರ್ತ್‌ ಡೇಯನ್ನು ಮಾರ್ಚ್​ 7ರಂದು ತುಂಬಾ ಗ್ರ್ಯಾಂಡ್‌ ಆಗಿ ಆಚರಿಸಿದ್ದಾರೆ. ಅಲ್ಲದೇ ರಾಧಿಕಾ ಪಂಡಿತ್‌ಗಾಗಿ ಯಶ್‌ ಹಾಡಿರುವ ಹಾಡು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಹೌದು, ಪತ್ನಿ ರಾಧಿಕಾ ಪಂಡಿತ್‌ ಅವರ ಹುಟ್ಟು ಹಬ್ಬವನ್ನು ತುಂಬಾ ಸ್ಪೆಷಲ್ ಸೆಲೆಬ್ರೇಟ್ ಮಾಡಿದ್ದಾರೆ. ಬರ್ತ್​ ಡೇ ನಿಮಿತ್ತ ನಟ ಯಶ್‌ ಪ್ರೈವೇಟ್‌ ಇವೆಂಟ್‌ನಲ್ಲಿ ಮೈಕ್‌ ಹಿಡಿದು ಹಾಡು ಹಾಡಿದ್ದಾರೆ. ಪತ್ನಿಗಾಗಿ ಲವ್‌ ಸಾಂಗ್‌ ಒಂದನ್ನು ರಾಕಿ ಭಾಯ್‌ ಡೆಡಿಕೇಟ್‌ ಮಾಡಿದ್ದಾರೆ. ಶಂಕರ್‌ನಾಗ್‌ ಅಭಿನಯದ ʻಗೀತಾʼ ಸಿನಿಮಾದ ಸೂಪರ್​ ಸಾಂಗ್​ ʻಜೊತೆಯಲಿ ಜೊತೆ ಜೊತೆಯಲಿʼ ಹಾಡನ್ನು ರಾಧಿಕಾ ಪಂಡಿತ್‌ಗಾಗಿ ಯಶ್‌ ಹಾಡಿದ್ದಾರೆ. ಯಶ್‌ ಹಾಡು ಕೇಳುತ್ತಿದ್ದಂತೆಯೇ ಇವೆಂಟ್​ನಲ್ಲಿ ನೆರೆದಿದ್ದ ಎಲ್ಲರೂ ಫುಲ್​ ಖುಷ್​ ಆಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ ಬರೀ ನಟ ಅಷ್ಟೇ ಅಲ್ಲ, ಅದ್ಭುತ ಸಿಂಗರ್‌ ಕೂಡ ಹೌದು ಅಂತೆಲ್ಲಾ  ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment