/newsfirstlive-kannada/media/post_attachments/wp-content/uploads/2025/04/yash2.jpg)
ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಮಾರ್ಚ್ನಲ್ಲಿ ಬಿಡುಗಡೆ ಕಾಣಲಿದೆ. ಹೀಗಾಗಿ ಬೇಗನೇ ಸಿನಿಮಾ ಶೂಟ್ ಮುಗಿಸುವ ತವಕದಲ್ಲಿದ್ದಾರೆ.
ಇದನ್ನೂ ಓದಿ:ಘೋರ ದುರಂತ.. ಟ್ರ್ಯಾಕ್ಟರ್‌ನಡಿ ಸಿಲುಕಿ 5 ವರ್ಷದ ಬಾಲಕ ದಾರುಣ ಸಾವು
ಅಷ್ಟೇ ಅಲ್ಲದೇ ಯಶ್ ಅವರು ಮೇ ತಿಂಗಳಿಂದ ಅಕ್ಟೋಬರ್ವರೆಗೆ ‘ರಾಮಾಯಣ’ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಹೀಗಾಗಿ ಬಹುತೇಕ ಸಮಯವನ್ನು ಮುಂಬೈಗೆ ಹೋಗಿ ಬರುತ್ತಾ ಇದ್ದಾರೆ.
ಇನ್ನೂ, ವಿಶೇಷ ಎಂದರೆ ಸಾಲು ಸಾಲು ಸಿನಿಮಾ ಶೂಟಿಂಗ್ ಬ್ಯೂಸಿ ನಡುವೆಯೂ ನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದು ತಂಗಿಯ ಮದುವೆ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದಾರೆ.
ಹೌದು, ನಟ ಯಶ್ ಅವರ ತಂಗಿ ನಂದಿನಿ ದಂಪತಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ದಂಪತಿ ಒಂದು ಪುಟ್ಟ ಪಾರ್ಟಿಯನ್ನು ಆಯೋಜನೆ ಮಾಡಿತ್ತು. ಇದೇ ಪಾರ್ಟಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಬಂದಿದ್ದಾರೆ.
ಇನ್ನೂ, ತಂಗಿಯ ಗಂಡನ ಜೊತೆಗೆ ನಟ ಯಶ್ ತುಂಬಾ ಆತ್ಮೀಯರಾಗಿ ಅಪ್ಪಿಕೊಂಡಿದ್ದಾರೆ. ಅಲ್ಲದೇ ತಂಗಿ ಹಾಗೂ ಭಾವನಿಗೆ ಕೇಕ್ ತಿನಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ