/newsfirstlive-kannada/media/post_attachments/wp-content/uploads/2024/08/dharmasthala.jpg)
ರಾಕಿಂಗ್ ಸ್ಟಾರ್ ಯಶ್ ಧರ್ಮಸ್ಥಳಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಪುಣ್ಯಸ್ಥಳದಲ್ಲಿ ನೆಲೆನಿಂತ ಮಂಜುನಾಥನ ದರ್ಶನ ಪಡೆದಿದ್ದಾರೆ. ಅಂದಹಾಗೆಯೇ ಯಶ್ ಇದ್ದಕ್ಕಿದ್ದಂತೆಯೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಯಾಕೆ ಗೊತ್ತಾ? ಈ ಸ್ಟೋರಿ ಓದಿ.
ರಾಕಿಂಗ್ ಸ್ಟಾರ್ ಯಶ್ ಸದ್ಯ ಬ್ಯುಸಿ ಇದ್ದಾರೆ. ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಹೆಚ್ಚು ಸಮಯ ಕಳೆಯುತ್ತಿದ್ದು, ಇದರ ನಡುವೆ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯಲು ಬಂದಿದ್ದಾರೆ. ಬಳಿಕ ಸೂರ್ಯ ದೇವಸ್ಥಾನಕ್ಕೂ ಭೇಟಿ ನೀಡಿದ ಅವರು ಸದಾಶಿವ ದೇವರ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ದೇವಸ್ಥಾನದಲ್ಲಿ ದರ್ಶನ್ ಫೋಟೋಗೆ ಪೂಜೆ.. ಅಧಿಕ ಪ್ರಸಂಗಿ ಅರ್ಚಕನಿಗೆ ಸರಿಯಾಗಿ ಪಾಠ ಕಲಿಸಿದ ಧಾರ್ಮಿಕ ದತ್ತಿ ಇಲಾಖೆ
ಯಾವುದೇ ಒಂದು ಶುಭ ಕಾರ್ಯ ಆರಂಭಿಸುವಾಗ ಪ್ರತಿಯೊಬ್ಬರು ದೇವರ ದರ್ಶನ ಪಡೆಯುತ್ತಾರೆ. ಕಾಂತಾರ ಶುರು ಮಾಡಿದಾಗ ನಟ ರಿಷಬ್ ಶೆಟ್ಟಿ ಕೂಡ ಮಂಜುನಾಥನ ದರ್ಶನ ಪಡೆದಿದ್ದರು. ಕಾಂತಾರ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದಲ್ಲದೆ, ದೊಡ್ಡ ಸಕ್ಸಸ್ ನೀಡಿತ್ತು. ಇದೀಗ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಹೀಗಿರುವಾಗ ಮಂಜುನಾಥನ ಸನ್ನಿಧಿಗೆ ಆಗಮಿಸಿ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ಚಿಕ್ಕಪ್ಪನಿಂದ ಮಗನ ಕೊಲೆ.. ಮಚ್ಚಿನಿಂದ ಕೊಚ್ಚಿ ರಸ್ತೆ ಬದಿಗೆ ತಂದು ಬಿಸಾಕಿದ ದುಷ್ಕರ್ಮಿಗಳು
ಧರ್ಮಸ್ಥಳಕ್ಕೆ ಬಂದ ನಟ ಯಶ್ರವರು ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಖಾವಂದರು ರಾಕಿ ಭಾಯ್ ಅವರನ್ನು ಗೌರವಿಸಿ, ಪ್ರಸಾದ ನೀಡಿದ್ದಾರೆ.
ಇದನ್ನೂ ಓದಿ: ಅಂಗನವಾಡಿ ಬಾಲಕನ ಮೇಲೆ ಹರಿದ ಖಾಸಗಿ ಶಾಲಾ ವಾಹನ.. 5 ವರ್ಷದ ಪುಟಾಣಿ ಸಾವು
ಅಂದಹಾಗೆಯೇ ಟಾಕ್ಸಿಕ್ ಬಹುನಿರೀಕ್ಷಿತ ಸಿನಿಮಾ. ಯಶ್ ಕನಸಿನ ಪ್ರಾಜೆಕ್ಟ್ ಎಂದರೆ ತಪ್ಪಾಗಲಾರದು. ಗೀತು ಮೋಹನ್ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಂದಹಾಗೆಯೇ ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಟೊವಿನೊ ಥಾಮಸ್ ಅವರು ವಿಲನ್ ಆಗಿ ಅಭಿನಯ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ