newsfirstkannada.com

IND vs ENG; ಮತ್ತೊಂದು ಭರ್ಜರಿ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್​

Share :

Published February 18, 2024 at 1:10pm

Update February 18, 2024 at 1:22pm

    ಗುಜರಾತ್​ನ ರಾಜ್​ಕೋಟ್​​ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್​

    ದ್ವಿಶತಕ ಸಿಡಿಸಿ ಮತ್ತೊಂದು ಇತಿಹಾಸ ನಿರ್ಮಿಸಿದ ಯಶಸ್ವಿ

    ಜೈಸ್ವಾಲ್​ಗೆ ಮತ್ತೊಬ್ಬ ಯಂಗ್​ ಗನ್​ ಸರ್ಫರಾಜ್​ ಸಾಥ್​

ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್​ ಡಬಲ್ ಹಂಡ್ರೆಡ್ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್​ ಪಂದ್ಯದಲ್ಲಿ ತಮ್ಮ 2ನೇ ದ್ವಿಶತಕವನ್ನು ಬಾರಿಸಿ ದಾಖಲೆ ಮಾಡಿದರು.

ನಿನ್ನೆ 104 ರನ್​ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಅವರು ಕಾರಣಾಂತರದಿಂದ ವಿಶ್ರಾಂತಿ ತೆಗೆದುಕೊಂಡಿದ್ದರು. ಇಂದು ಶುಭ್​ಮನ್​ ಗಿಲ್ ಔಟ್ ಆದ ಬಳಿಕ ಮತ್ತೆ ಕ್ರೀಸ್​ಗೆ ಆಗಮಿಸಿದ ಯಂಗ್​ ಬ್ಯಾಟ್ಸ್​ಮನ್​ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 231 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್​ 14 ಬೌಂಡರಿ, 10 ಆಕಾಶದೆತ್ತರ ಸಿಕ್ಸರ್​ ಸಮೇತ 200 ರನ್​ಗಳನ್ನು ಪೂರೈಸಿದರು. ಈ ಮೂಲಕ ಟೆಸ್ಟ್​ನಲ್ಲಿ ತಮ್ಮ ವೃತ್ತಿ ಜೀವನದ 2ನೇ ದ್ವಿಶತಕ ದಾಖಲಿಸಿದರು.

ಇನ್ನು ಯಶಸ್ವಿ ಜೈಸ್ವಾಲ್ ಅವರಿಗೆ ಉತ್ತಮ ಸಾಥ್ ಕೊಡುತ್ತಿರುವ ಸರ್ಫರಾಜ್ ಖಾನ್​ (67) ಹಾಫ್​ ಸೆಂಚುರಿ ಸಿಡಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಟೆಸ್ಟ್​ ಸರಣಿಯಲ್ಲಿ ಸತತವಾಗಿ 2 ದ್ವಿಶತಕ ದಾಖಲಿಸಿದ ಭಾರತದ ಬ್ಯಾಟ್ಸ್​ಮನ್​ಗಳೆಂದರೆ;

  • ವಿನೋದ್ ಕಾಂಬ್ಳೆ 1992-93ರಲ್ಲಿ ಇಂಗ್ಲೆಂಡ್​ ವಿರುದ್ಧ 224 ಮತ್ತು ಜಿಂಬಾಬ್ವೆ ವಿರುದ್ಧ 227 ರನ್ ದಾಖಲಿಸಿದ್ದರು.
  • ವಿರಾಟ್​ ಕೊಹ್ಲಿ 2017-18ರಲ್ಲಿ ಶ್ರೀಲಂಕಾ ಜೊತೆ 213 ರನ್​ ಮತ್ತು 243 ರನ್​ ಗಳಿಸಿದ್ದರು.
  • ಯಶಸ್ವಿ ಜೈಸ್ವಾಲ್​ 2023-24ರಲ್ಲಿ ಇಂಗ್ಲೆಂಡ್​ ವಿರುದ್ಧವೇ 209 ಮತ್ತು 200* ರನ್​

​ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs ENG; ಮತ್ತೊಂದು ಭರ್ಜರಿ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್​

https://newsfirstlive.com/wp-content/uploads/2024/02/YASHASWI_JAISWAL.jpg

Load More