4 ಕ್ಯಾಚ್ ಡ್ರಾಪ್ ಮಾಡಿದ್ದರೂ ಕಾಡಲಿಲ್ಲ ಪಶ್ಚಾತಾಪ.. ಡ್ಯಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಸ್ಟಾರ್..! VIDEO

author-image
Ganesh
Updated On
4 ಕ್ಯಾಚ್ ಡ್ರಾಪ್ ಮಾಡಿದ್ದರೂ ಕಾಡಲಿಲ್ಲ ಪಶ್ಚಾತಾಪ.. ಡ್ಯಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಸ್ಟಾರ್..! VIDEO
Advertisment
  • ಟೀಂ ಇಂಡಿಯಾಗೆ ವಿಲನ್ ಆಗಿದ್ದು ಯಶಸ್ವಿ ಜೈಸ್ವಾಲ್
  • ಜೈಸ್ವಾಲ್ ಹೊಡೆದಿದ್ದು 105 ರನ್, ಬಿಟ್ಟುಕೊಟ್ಟಿದ್ದು 160 ರನ್​
  • ಲೈಫ್​​ಲೈನ್ ಪಡೆದ ಡಕೆಟ್ ಅರ್ಧಶತಕ.. ಪೋಪ್ ಶತಕ..!

ಲೀಡ್ಸ್​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ತೀವ್ರ ಮುಖಭಂಗ ಅನುಭವಿಸಿದೆ. ಮೊದಲ ಟೆಸ್ಟ್​ ಪಂದ್ಯ ಟೀಮ್ ಇಂಡಿಯಾ ಕಂಟ್ರೋಲ್​ನಲ್ಲಿದ್ರೂ, ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ. ಬ್ಯಾಟಿಂಗ್, ಬೌಲಿಂಗ್​​ನಲ್ಲಿ ಗಿಲ್ ಪಡೆ ಎಡವಿದ್ದು ನಿಜ. ಜೈಸ್ವಾಲ್ ಮಾಡಿದ ಯಡವಟ್ಟು ತಂಡದ ಸೋಲಿಗೆ ಕಾರಣವಾಯ್ತು. ಶತಕ ವೀರ ಜೈಸ್ವಾಲ್ ಟೀಮ್ ಇಂಡಿಯಾದ ನಂಬರ್ 1 ವಿಲನ್ ಆದರು.

ಜೈಸ್ವಾಲ್ ಒಂದೆರಡು ಕ್ಯಾಚ್ ಬಿಟ್ಟಿದ್ರೆ ಹೋಗ್ಲಿ ಬಿಡು ಅನ್ನಬಹುದಿತ್ತು. ಜೈಸ್ವಾಲ್ ಬಿಟ್ಟಿದ್ದು ಬರೋಬ್ಬರಿ ನಾಲ್ಕು ಕ್ಯಾಚ್​ಗಳು. ಕ್ಯಾಚಸ್ ವಿನ್ ಮ್ಯಾಚಸ್ ಅಂತಾರೆ. ಇದು ಜೈಸ್ವಾಲ್​ಗೆ ಗೊತ್ತಿಲ್ಲ ಅನ್ನಿಸುತ್ತದೆ. ಗೊತ್ತಿದ್ರೆ ಬಹುಷಃ ಜೈಸ್ವಾಲ್, ಬಿಟ್ಟ ನಾಲ್ಕು ಕ್ಯಾಚ್​ಗಳಲ್ಲಿ ಅಟ್ಲೀಸ್ಟ್​ ಎರಡನ್ನಾದ್ರೂ ಹಿಡಿತಿದ್ರೋ ಏನೋ.

ಇದನ್ನೂ ಓದಿ: ಮೊದಲ ಟೆಸ್ಟ್ ಸೋಲಿಗೆ ಹೊಣೆ ಮಾಡಿದ ಗಿಲ್.. ನಾಯಕ ಬೊಟ್ಟು ಮಾಡಿದ್ದು ಯಾರ ಮೇಲೆ..?

ಲೀಡ್ಸ್​​ ಟೆಸ್ಟ್​​ನಲ್ಲಿ ಜೈಸ್ವಾಲ್ ಹೊಡೆದಿದ್ದು 105 ರನ್

ಮೊದಲ ಇನ್ನಿಂಗ್ಸ್​ನಲ್ಲಿ ಜೈಸ್ವಾಲ್, ಭರ್ಜರಿ ಬ್ಯಾಟಿಂಗ್ ನಡೆಸಿದರು. ಶತಕ ಸಿಡಿಸಿದ ಜೈಸ್ವಾಲ್ ಒಟ್ಟು 105 ರನ್​ಗಳಿಸಿದ್ರು. ಶತಕ ಸಿಡಿಸಿದ್ದೀನಿ, ರನ್ ಹೊಡೆದಿದ್ದೀನಿ ಅಂತ ಜಯಸ್ವಾಲ್ ರನ್​​​​​​​ ​ಕೊಟ್ರೆ ಹೇಗೆ? ಜೈಸ್ವಾಲ್ ಹೊಡೆದ ರನ್​ಗಿಂತ ಕ್ಯಾಚ್​ಗಳನ್ನ ಬಿಟ್ಟು ಕೊಟ್ಟ ರನ್​​​ ಎಷ್ಟು ಗೊತ್ತಾ? 160 ರನ್​!

ಇದನ್ನೂ ಓದಿ: ಟೀಂ ಇಂಡಿಯಾಗೆ ಮುಖಭಂಗ.. ಈ ಐದು ತಪ್ಪುಗಳಿಂದ ಗಿಲ್​ ಪಡೆಗೆ ಸೋಲು..

ಲೈಫ್​​ಲೈನ್ ಪಡೆದ ಡಕೆಟ್ ಅರ್ಧಶತಕ

ಮೊದಲ ಇನ್ನಿಂಗ್ಸ್​ನಲ್ಲಿ ಬೆನ್​ ಡಕೆಟ್​​​ನ 15 ರನ್​​​​​​ಗೆ ಔಟ್ ಮಾಡಬಹುದಿತ್ತು. ಗಲ್ಲಿಯಲ್ಲಿ ಡಕೆಟ್ ನೀಡಿದ ಕ್ಯಾಚನ್ನ ಜೈಸ್ವಾಲ್, ಕೈಚೆಲ್ಲಿದ್ರು. ಆ ಇನ್ನಿಂಗ್ಸ್​ನಲ್ಲಿ ಡಕೆಟ್​​​​​​, 62 ರನ್​ಗಳಿಸಿದ್ರು. ಎರಡನೇ ದಿನ 3ನೇ ಸೆಷನ್. ಬೂಮ್ರಾ ಬೌಲಿಂಗ್​​​​​​​​ನಲ್ಲಿ ಓಲಿ ಪೋಪ್, 3ನೇ ಸ್ಲಿಪ್​ನಲ್ಲಿ ಕ್ಯಾಚ್​ ನೀಡಿದ್ರು. ಜೈಸ್ವಾಲ್ ಮತ್ತೆ ಕ್ಯಾಚ್​​ ಡ್ರಾಪ್ ಮಾಡಿದ್ರು. 62 ರನ್​ಗಳಿಸಿದ್ದಾಗ ಜೀವದಾನ ಪಡೆದ ಪೋಪ್, ಜೈಸ್ವಾಲ್ ಕೃಪೆಯಿಂದ 106 ರನ್​ಗಳಿಸಿದ್ರು.

ಹ್ಯಾರಿ ಬ್ರುಕ್​​ಗೆ ಜೈ ಎಂದ ಜೈಸ್ವಾಲ್

3ನೇ ದಿನ, 2ನೇ ಸೆಷನ್. ಮೂರನೇ ಬಾರಿ ಬೂಮ್ರಾಗೆ, ಜೈಸ್ವಾಲ್ ನಿರಾಸೆ ಮೂಡಿಸಿದ್ರು. 4ನೇ ಸ್ಲಿಪ್​ನಲ್ಲಿ ಫೀಲ್ಡ್​ ಮಾಡ್ತಿದ್ದ ಜೈಸ್ವಾಲ್, ಹ್ಯಾರಿ ಬ್ರುಕ್ ಕ್ಯಾಚ್ ಮಿಸ್ ಮಾಡಿದ್ರು. ಆ ಇನ್ನಿಂಗ್ಸ್​ನಲ್ಲಿ 83 ರನ್​ಗಳಿಸಿದ್ದ ಬ್ರೂಕ್, 99 ರನ್​ಗಳಿಸಿದ್ರು. ಪಂದ್ಯದ ಕೊನೆಯ ದಿನವೂ ಜೈಸ್ವಾಲ್ ಕಳಪೆ ಫೀಲ್ಡಿಂಗ್ ಮುಂದುವರೆಯಿತು. ಕೊನೆಯ ದಿನದ 2ನೇ ಸೆಷನ್​ನಲ್ಲಿ ಜೈಸ್ವಾಲ್, ಡಕೆಟ್​​​​​ ಕ್ಯಾಚ್​​​​​​​ ಬಿಟ್ಟರು. ಸಿರಾಜ್ ಬೌಲಿಂಗ್​ನಲ್ಲಿ ಸ್ಕೇರ್​​ ಲೆಗ್​ನಲ್ಲಿದ್ದ ಜೈಸ್ವಾಲ್, ಸುಲಭದ ಕ್ಯಾಚ್ ಕೈಚೆಲ್ಲಿದ್ರು. 98 ರನ್​ಗಳಿದ್ದಾಗ ಲೈಫ್​ ಪಡೆದ ಡಕೆಟ್, 149 ರನ್​​ ಸಿಡಿಸಿದ್ರು.

ಇದನ್ನೂ ಓದಿ: KL ರಾಹುಲ್, ಪಂತ್, ಗಿಲ್, ಜೈಸ್ವಾಲ್​ ಬ್ಯಾಟಿಂಗ್​ ಓಕೆ.. ಉಳಿದ ಆಟಗಾರರ ಪರ್ಫಾಮೆನ್ಸ್​​ಗೆ ಬೇಸರ!

4 ಕ್ಯಾಚ್ ಬಿಟ್ರು ಫೀಲ್ಡ್​​​ನಲ್ಲಿ ಡ್ಯಾನ್ಸ್..!

ನಾಲ್ಕು ಕ್ಯಾಚ್​ಗಳನ್ನ ಬಿಟ್ಟು ತಂಡದ ಹಿನ್ನಡೆಗೆ ಕಾರಣವಾದ ಜೈಸ್ವಾಲ್​​​​​ಗೆ ತನ್ನ ತಪ್ಪಿನಿಂದ ಸ್ವಲ್ಪವೂ ಪಶ್ಚಾತಾಪ ಇರಲಿಲ್ಲ. ಬದಲಿಗೆ ಇಂಗ್ಲೆಂಡ್ ಅಭಿಮಾನಿಗಳ ಮುಂದೆ ಡ್ಯಾನ್ಸ್ ಮಾಡುತ್ತಾ, ತಾನೇನು ಮಾಡಲಿಲ್ಲ ಅನ್ನೋ ರೀತಿ ನಗು ನಗುತ್ತಿದ್ದರು.

ಕ್ಯಾಚ್ ಡ್ರಾಪ್, ನೋ ಪ್ರಾಬ್ಲಂ ಎಂದ ಕೋಚ್

ತಂಡದ ಸೋಲಿಗೆ ಜೈಸ್ವಾಲ್ ಪ್ರಮುಖ ಕಾರಣ. ಅದು ಕೋಚ್ ಗೌತಮ್ ಗಂಭೀರ್​ಗೂ ಗೊತ್ತು. ಆದ್ರೆ ಪ್ರೆಸ್ ಕಾನ್ಫರೆನ್ಸ್​ರಲ್ಲಿ ಕೋಚ್ ಹೇಳಿಕೆ ನೋ ಪ್ರಾಬ್ಲಂ ಹೇಳಿಕೆ ಅಚ್ಚರಿ ಮೂಡಿಸಿತು. ಬ್ಯಾಟ್ಸ್​​ಮನ್​ಗಳು​ ಪಂದ್ಯ ಗೆಲ್ಲಿಸಿಕೊಡದೇ ಇರಬಹುದು. ಬೌಲರ್​​ಗಳಿಗೂ ಪಂದ್ಯ ಗೆಲ್ಲಿಸಿಕೊಡೋ ಸಾಮರ್ಥ್ಯ ಇಲ್ಲದೇ ಇರಬಹುದು. ಬೆಸ್ಟ್ ಫೀಲ್ಡಿಂಗ್​ನಿಂದ ಪಂದ್ಯ ಸೋತಿದ್ದೂ, ತೀರಾ ಕಡಿಮೆ.

ಇದನ್ನೂ ಓದಿ: MS​ ಧೋನಿ ಬರ್ತ್​​ಡೇಗೆ ಬಂದಿದ್ದಕ್ಕೆ ಆನಂದಭಾಷ್ಪ.. ಕೇಕ್ ತಿನ್ನಿಸುತ್ತಿದ್ದಂತೆ ಗೆಳೆಯ ಭಾವುಕ!​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment