ಜೈಸ್ವಾಲ್​ಗೂ ಗೆಳತಿ ಇದ್ದಾಳೆ.. ಬೆಡ್​​ ರೂಮ್​​ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಫೋಟೋ ವೈರಲ್..! Photo

author-image
Ganesh
Updated On
ಜೈಸ್ವಾಲ್​ಗೂ ಗೆಳತಿ ಇದ್ದಾಳೆ.. ಬೆಡ್​​ ರೂಮ್​​ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಫೋಟೋ ವೈರಲ್..! Photo
Advertisment
  • ಐಪಿಎಲ್​​ನಲ್ಲಿ RR ಪರ ಆಡ್ತಿರುವ ಯಶಸ್ವಿ ಜೈಸ್ವಾಲ್
  • ಇಂಗ್ಲೆಂಡ್​ನ ಚೆಲುವೆ ಜೊತೆಗೆ ಜೈಸ್ವಾಲ್ ಡೇಟಿಂಗ್..?
  • ಮೂರು ವರ್ಷಗಳಿಂದ ಪರಿಚಯ, ಪ್ರತಿ ಪಂದ್ಯದಲ್ಲೂ ಕಾಣ್ತಾರೆ..

ಕಳೆದ ಎರಡ್ಮೂರು ದಿನಗಳಿಂದ ಟೀಂ ಇಂಡಿಯಾ ಸ್ಟಾರ್ ಯಶಸ್ವಿ ಜೈಸ್ವಾಲ್ ವೃತ್ತಿಪರ ವಿಚಾರಕ್ಕೆ ಸುದ್ದಿಯಲ್ಲಿದ್ದರು. ದೇಸಿಯ ಕ್ರಿಕೆಟ್​ನಲ್ಲಿ ಮುಂಬೈ ಬಿಟ್ಟು ಗೋವಾ ತಂಡಕ್ಕೆ ವಲಸೆ ಹೋಗಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಜೈಸ್ವಾಲ್ ವೈಯಕ್ತಿಕ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.

ಜೈಸ್ವಾಲ್ ಸುತ್ತ ಡೇಟಿಂಗ್ ರೂಮರ್ಸ್..!

ನಿನ್ನೆಯ ದಿನ ಜೈಸ್ವಾಲ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿರುವ ಅಭಿಮಾನಿಗಳು ನಮ್ಮ ಹುಡುಗ ಲವ್ವಲ್ಲಿ ಬಿದ್ದಿದ್ದಾರೆ ಅಂತಾ ಅನೌನ್ಸ್ ಮಾಡ್ತಿದ್ದಾರೆ. ಆದರೆ ಇದು ಎಷ್ಟು ಸತ್ಯನೋ ಗೊತ್ತಿಲ್ಲ.

ಇದನ್ನೂ ಓದಿ: ರಿಟೈರ್ಡ್​ ಔಟ್ ಗಲಾಟೆ ಮಧ್ಯೆ ರೋಹಿತ್​ರನ್ನ​​ ಹೊರಗಿಟ್ಟಿದ್ದ ಅಸಲಿ ಕಾರಣವೂ ರಿವೀಲ್​​..!

publive-image

ಜೈಸ್ವಾಲ್ ಶೇರ್ ಮಾಡಿದ ಪೋಸ್ಟ್​ನಲ್ಲಿ ಏನಿದೆ..?

ಬೆಡ್​ ರೂಮ್​ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಅದಾಗಿದೆ. ಆ ಸೆಲ್ಫಿ ಫೋಟೋದಲ್ಲಿ ಜೈಸ್ವಾಲ್, ಬ್ರಿಟನ್ ಮೂಲದ ಮ್ಯಾಡಿ ಹ್ಯಾಮಿಲ್ಟನ್ (Maddie Hamilton) ಹಾಗೂ ಆಕೆಯ ಸಹೋದರ ಹೆನ್ರಿ ಹ್ಯಾಮಿಲ್ಟನ್ ಇದ್ದಾರೆ. ಈ ಫೋಟೋ ಶೇರ್ ಮಾಡಿರುವ ಜೈಸ್ವಾಲ್, ಸಮಯ ಕಳೆದು ಹೋಗಬಹುದು. ಬಂಧನಗಳು ಮರೆಯಲಾಗುವುದಿಲ್ಲ. ನಾವು ಕೃತಜ್ಞರಾಗಿರಬೇಕು ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಇಂಟರ್​​​ನೆಟ್​ನಲ್ಲಿ ಜೈಸ್ವಾಲ್ ಬಗ್ಗೆ ಭಾರೀ ಚರ್ಚೆ ಆಗ್ತಿದೆ.

ಇದನ್ನೂ ಓದಿ: CSK ತಂಡದಲ್ಲಿ ಬಿಗ್ ಚೆಂಜ್; ಇಂದು ಚೆನ್ನೈ ಸೂಪರ್​​ ಕಿಂಗ್ಸ್​ಗೆ ಧೋನಿ ಕ್ಯಾಪ್ಟನ್..!

publive-image

ಮ್ಯಾಡಿ ಅವರು ಇಂಗ್ಲೆಂಡ್​ ಸುಂದರ ಯುವತಿ ಆಗಿದ್ದಾರೆ. ಇವರಿಬ್ಬರ ನಡುವಿನ ರಿಲೇಷನ್​ಶಿಪ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಆದರೆ, ಜೈಸ್ವಾಲ್ ಕ್ರಿಕೆಟ್ ಆಡುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಗಾಗ ಗಮನ ಸೆಳೆಯುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಜೈಸ್ವಾಲ್​ಗೆ ಮ್ಯಾಡಿ ಪರಿಚಯ ಎನ್ನಲಾಗಿದೆ. ಸದ್ಯ ಮ್ಯಾಡಿ, ಇನ್ನೂ ಓದುತ್ತಿದ್ದಾರೆ ಎಂದು ವರದಿಯಾಗಿದೆ. ಸದ್ಯ ದೇಶದಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿವೆ. ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಜೈಸ್ವಾಲ್, ಈ ವರ್ಷ ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ತಿಲಕ್​ಗೆ ರಿಟೈರಿಂಗ್ ಔಟ್ ಆಗಲು ಸೂಚಿಸಿದ್ದು ಪಾಂಡ್ಯ ಅಲ್ಲ.. ಬದಲಾಗಿ ಬೇರೆ ಶಕ್ತಿಯೇ ಕೆಲಸ ಮಾಡಿದೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment