Advertisment

ಬ್ಯಾಕ್​ ಟು ಬ್ಯಾಕ್​ ಡಬಲ್​ ಸೆಂಚೂರಿ; ಅಂದು ಪಾನಿಪುರಿ ಮಾರುತ್ತಿದ್ದವ ಈಗ ಭಾರತದ ಸೂಪರ್​​ ಸ್ಟಾರ್

author-image
Ganesh Nachikethu
Updated On
ವಯಸ್ಸು 22.. ಆಡಿರೋದು ಜಸ್ಟ್​​ 7 ಟೆಸ್ಟ್..​ ಭಾರತೀಯ ಕ್ರಿಕೆಟ್​ನಲ್ಲೀಗ ಜೈಸ್ವಾಲ್​​ ದರ್ಬಾರ್​​!
Advertisment
  • ಇಂಗ್ಲೆಂಡ್​ ವಿರುದ್ಧ 2ನೇ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್​​​
  • ಬ್ಯಾಕ್​ ಟು ಬ್ಯಾಕ್​ ಡಬಲ್​ ಸೆಂಚೂರಿ ಬಾರಿಸಿದ ಯುವ ಬ್ಯಾಟರ್​​​​
  • ಜೈಸ್ವಾಲ್​ ಈಗ ಟೀಮ್​ ಇಂಡಿಯಾದ ಸೂಪರ್‌ ಬ್ಯಾಟ್ಸ್​​ಮನ್​​!

ಅಮೋಘ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಕ್ರಿಕೆಟ್‌ ಜಗತ್ತಿನ ಗಮನ ಸೆಳೆಯುತ್ತಿರೋ ಟೀಮ್​ ಇಂಡಿಯಾದ ಯಂಗ್​ ಕ್ರಿಕೆಟರ್​​ ಯಶಸ್ವಿ ಜೈಸ್ವಾಲ್. ಇವರು ಟೀಮ್​ ಇಂಡಿಯಾದ ಭವಿಷ್ಯದ ಸೂಪರ್‌ ಸ್ಟಾರ್‌ ಎಂದೇ ಹೇಳಲಾಗುತ್ತಿದೆ.

Advertisment

ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ನಡೆದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಭರ್ಜರಿ ದ್ವಿಶತಕ ಬಾರಿಸಿದ್ರು. ಈಗ 3ನೇ ಟೆಸ್ಟ್​ ಪಂದ್ಯದಲ್ಲೂ ಜೈಸ್ವಾಲ್​ ಮತ್ತೊಂದು ಡಬಲ್​ ಸೆಂಚೂರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಅದರಲ್ಲೂ 2ನೇ ಇನ್ನಿಂಗ್ಸ್​ನಲ್ಲಿ 85ನೇ ಓವರ್​​ನಲ್ಲಿ ಆ್ಯಂಡರ್ಸನ್​​ ಬೌಲಿಂಗ್​​ನಲ್ಲಿ ಜೈಸ್ವಾಲ್​​​ ಬ್ಯಾಕ್​ ಟು ಬ್ಯಾಕ್​​ ಹ್ಯಾಟ್ರಿಕ್​​ 3 ಸಿಕ್ಸರ್​ ಸಿಡಿಸಿದ್ರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಟ್ರೆಂಡ್​ ಆಗುತ್ತಿದೆ.


">February 18, 2024

ಹೌದು, ಕ್ರಿಕೆಟ್‌ ಜಗತ್ತಿನಲ್ಲಿ ಇತ್ತೀಚೆಗೆ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಯಶಸ್ವಿ ಜೈಸ್ವಾಲ್‌ ಭಾರಿ ಸುದ್ದಿಯಲ್ಲಿದ್ದಾರೆ. ಉತ್ತರ ಪ್ರದೇಶದ ಒಂದು ಪುಟ್ಟ ಗ್ರಾಮದಿಂದ 10ನೇ ವಯಸ್ಸಿಗೆ ಮುಂಬೈಗೆ ಬಂದ ಯಶಸ್ವಿ ಜೈಸ್ವಾಲ್‌, ಕ್ರಿಕೆಟ್‌ನಲ್ಲಿ ಬದುಕು ಕಟ್ಟಿಕೊಳ್ಳಲು ಆರಂಭಿಕ ದಿನಗಳಲ್ಲಿ ಪಾನಿಪುರಿ ಮಾರಿದ್ದರು. ಅಂದು ಪಾನಿಪುರಿ ಮಾರಿ ಇಂದು ಟೀಮ್​ ಇಂಡಿಯಾಗೆ ಆಯ್ಕೆಯಾದ ಜೈಸ್ವಾಲ್​ ಛಲ ಕಂಡು ಇಡೀ ಕ್ರೀಡಾಲೋಕವೇ ಫಿದಾ ಆಗಿದೆ.

Advertisment

​ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment