Advertisment

ಟೀಂ ಇಂಡಿಯಾದಲ್ಲಿ ದೊಡ್ಡ ವಿವಾದ.. ಅಗರ್ಕರ್ ವಿರುದ್ಧ ಭುಗಿಲೆದ್ದ ಆಕ್ರೋಶ..

author-image
Ganesh
Updated On
ನಾಳೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಪತ್ರಿಕಾಗೋಷ್ಠಿಯಿಂದ ಕೋಚ್​​ ಗಂಭೀರ್​ಗೆ ಕೊಕ್​​
Advertisment
  • ಟೀಮ್ ಇಂಡಿಯಾ ಅಭಿಮಾನಿಗಳಿಗೆ ಶಾಕ್..!
  • ಕಾರಣ ಇಲ್ಲದೆ ಡ್ರಾಪ್ ಮಾಡಿದ್ದೇಕೆ ಬಿಸಿಸಿಐ..?
  • ವರುಣ್ ಚಕ್ರವರ್ತಿಗಾಗಿ ಈ ಆಟಗಾರನಿಗೆ ಅನ್ಯಾಯ..?

ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಜಸ್ಟ್​ ಆರೇ ಆರು ದಿನ ಬಾಕಿಯಿದೆ. ಇಂಗ್ಲೆಂಡ್ ಸರಣಿ ಮುಗಿಸಿರುವ ಟೀಮ್ ಇಂಡಿಯಾ, ಇನ್ನೇನು ದುಬೈ ಫ್ಲೈಟ್ ಏರೋದೊಂದೇ ಬಾಕಿಯಿತ್ತು. ದುಬೈ ಪ್ಲೈಟ್ ಏರುವ ಮುನ್ನವೇ ಟೀಮ್ ಇಂಡಿಯಾದಲ್ಲಿ ಆದ ಬದಲಾವಣೆ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ​

Advertisment

18, ಜನವರಿ.. 2025.. ಚಾಂಪಿಯನ್ಸ್​ ಟ್ರೋಫಿಗೆ ಟೀಮ್ ಇಂಡಿಯಾ ಪ್ರಕಟವಾಗಿದ್ದ ದಿನ. ಅವತ್ತು ಚಾಂಪಿಯನ್ಸ್​ ಟ್ರೋಫಿಗೆ ಪ್ರಕಟಿಸಿದ್ದ ತಂಡ ನೋಡಿ, ಸೆಲೆಕ್ಷನ್ ಕಮಿಟಿಯನ್ನು ಹಾಡಿಹೊಳಿದ್ದೇ ಹೆಚ್ಚು. 12 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ಸ್​ ಟ್ರೋಫಿಗೆ ಟೀಮ್ ಇಂಡಿಯಾ ಮುಡಿಗೇರುತ್ತೆ ಎಂದು ಭವಿಷ್ಯ ನುಡಿದವರ ಸಂಖ್ಯೆಯಂತೂ ಲೆಕ್ಕಕ್ಕಿಲ್ಲ. ಕೊನೆ ಕ್ಷಣದಲ್ಲಾದ ಬದಲಾವಣೆ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಅಘಾತ ತರಿಸಿದೆ. ಪ್ರಶ್ನೆಗಳ ಜೊತೆಗೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಯಶಸ್ವಿ ಜೈಸ್ವಾಲ್​ನ ಕೈಬಿಟ್ಟಿದ್ದು ನ್ಯಾಯನಾ?

ಭಾರತೀಯ ಕ್ರಿಕೆಟ್ ಲೋಕದ ಹಾಟ್ ಟಾಫಿಕ್​ ಯಶಸ್ವಿ ಜೈಸ್ವಾಲ್. ಟೆಸ್ಟ್​, ಟಿ20 ಫಾರ್ಮೆಟ್​ನಲ್ಲಿ ಸಾಲಿಡ್ ಆಟವಾಡಿದ್ದ ಜೈಸ್ವಾಲ್, ಸಹಜವಾಗೇ ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೆ ಬುಲಾವ್ ಪಡೆದಿದ್ರು. ಚಾಂಪಿಯನ್ಸ್​ ಟ್ರೋಫಿ ತಂಡದಲ್ಲಿ ಬ್ಯಾಕ್​ ಅಪ್​​ ಓಪನರ್​ ಆಗಿದ್ದ ಜೈಸ್ವಾಲ್, ಈಗ ಚಾಂಫಿಯನ್ಸ್​ ಟ್ರೋಪಿಯಿಂದ ಔಟ್ ಆಗಿದ್ದಾರೆ. ಇದು ಸಹಜವಾಗೇ ಜೈಸ್ವಾಲ್​ನ ಕೈಬಿಟ್ಟಿದೆಷ್ಟು ಸರಿ ಎಂಬ ಪ್ರಶ್ನೆ ಹುಟ್ಟಿಹಾಕಿದೆ.

ಇದನ್ನೂ ಓದಿ:WPL ಶುರು.. ಈ ಬಾರಿ ವಿಶೇಷತೆ ಏನು? ಗೆದ್ದ ತಂಡಕ್ಕೆ ಎಷ್ಟು ಕೋಟಿ ಸಿಗಲಿದೆ..?

Advertisment

publive-image

ಒಂದೇ ಚಾನ್ಸ್​.. ಜೈಸ್ವಾಲ್​ನ ಹೊರಗಿಟ್ಟಿದ್ದೇಕೆ..?

ಚಾಂಫಿಯನ್ಸ್ ಟ್ರೋಫಿಯ ದೃಷ್ಟಿಯಿಂದಲೇ ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಿದ್ದ ಸೆಲೆಕ್ಷನ್ ಕಮಿಟಿ, ನಾಗ್ಪುರದಲ್ಲಿ ಅವಕಾಶವನ್ನು ನೀಡಿ​ತ್ತು. ಒಂದೇ ಒಂದು ಚಾನ್ಸ್​ ನೀಡಿ ನಂತರದ ಎರಡೂ ಪಂದ್ಯಗಳಲ್ಲಿ ಬೆಂಚ್ ಕಾಯಿಸ್ತು. ಆದ್ರೀಗ ಏಕಾಏಕಿ ಚಾಂಪಿಯನ್ಸ್​ ಟ್ರೋಫಿಯಿಂದ ಹೊರಗಿಟ್ಟಿರುವ ಬಿಸಿಸಿಐ, ಯಾವುದೇ ರೀಸನ್ ಕೂಡ ನೀಡಲ್ಲ. ತಂಡದ ಟಾಪ್ ಆರ್ಡರ್​ನಲ್ಲಿ ಲೆಫ್ಟಿ ಬ್ಯಾಟರ್ ಇಲ್ಲ. ಬ್ಯಾಕ್ ಅಪ್ ಓಪನರ್ ಕೂಡ ಇಲ್ಲ. ಇಂಥಹ ಸಮಯದಲ್ಲಿ ಜೈಸ್ವಾಲ್ ಡ್ರಾಪ್, ಸಹಜವಾಗೇ ವಿವಾದಕ್ಕೀಡಾಗುವಂತೆ ಮಾಡಿದೆ.

ವರುಣ್ ಚಕ್ರವರ್ತಿಗಾಗಿ ಜೈಸ್ವಾಲ್​​ಗೆ ಅನ್ಯಾಯ..?

ಯುವ ಆಟಗಾರ, ಏಕದಿನ ಅನುಭವ ಯಶಸ್ವಿ ಜೈಸ್ವಾಲ್​ಗೆ ಇಲ್ಲ. ಜೈಸ್ವಾಲ್ ಸ್ಥಾನದಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಸ್ಥಾನ ನೀಡಲಾಗಿದೆ. ಇದು ಸಹಜವಾಗೇ ವರುಣ್ ಚಕ್ರವರ್ತಿಗಾಗಿ ಜೈಸ್ವಾಲ್​ಗೆ ಮಾಡಿದ ಅನ್ಯಾಯ ಅಂತಾನೇ ಬಿಂಬಿತವಾಗ್ತಿದೆ. ಈಗಾಗಲೇ ತಂಡದಲ್ಲಿ ನಾಲ್ವರು ಸ್ಪಿನ್ನರ್​ಗಳಿರುವಾಗ ವರುಣ್ ಚಕ್ರವರ್ತಿ, ಯಾಕೆಂಬ ಚರ್ಚೆಗೂ ನಾಂದಿಯಾಡಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: Valentine’s Day: ಗಂಡನ ಸಾಲದಿಂದ ಚಿಗುರಿದ ಪ್ರೀತಿ.. ವಸೂಲಿಗೆ ಬರ್ತಿದ್ದ ಏಜೆಂಟ್ ಜೊತೆ ಲೇಡಿ ಪರಾರಿ..!

Advertisment

publive-image

ಬೂಮ್ರಾ ಇಲ್ಲದ ಬೌಲಿಂಗ್ ವಿಭಾಗಕ್ಕೆ ಸ್ಟ್ರೆಂಥ್ ಯಾರು?

ಬೂಮ್ರಾ ಇಲ್ಲದ ಬೌಲಿಂಗ್ ವಿಭಾಗ ಈಗ ಬಡವಾಗಿದೆ. ಬೂಮ್ರಾ ಬದಲಿ ಆಟಗಾರನಾಗಿ ಹರ್ಷಿತ್ ರಾಣಾ ಸೇರಿಕೊಂಡಿದ್ದಾರೆ. ಇದು ಸಹಜವಾಗೇ ಟೀಮ್ ಇಂಡಿಯಾ ಪೇಸ್ ಅಟ್ಯಾಕ್​ನ ಬಲವನ್ನೇ ಪ್ರಶ್ನಿಸುತ್ತಿದೆ. ಯಾಕಂದ್ರೆ, ಕಮ್​ಬ್ಯಾಕ್​ ಮಾಡಿದ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಧಮ್ ಇಲ್ಲ. ಟಿ20ಯಲ್ಲಿ ಫ್ರೂವ್ ಮಾಡಿರುವ ಆರ್ಶ್​ದೀಪ್ ಸಿಂಗ್, ಏಕದಿನ ಫಾರ್ಮೆಟ್​​ನ ಅನುಭವ ಇಲ್ಲ. ಇಂಥಹ ಟೈಮ್​ನಲ್ಲಿ ಅನುಭವಿ ಮೊಹಮ್ಮದ್ ಸಿರಾಜ್​ಗೆ ಸ್ಥಾನ ನೀಡಬೇಕಿದ್ದ ಸೆಲೆಕ್ಷನ್​ ಕಮಿಟಿ, ಹರ್ಷೀತ್ ರಾಣಾನ ತಂಡಕ್ಕೆ ಸೇರಿಸಿಕೊಂಡಿದೆ. ಇದು ನಿಜಕ್ಕೂ ಟೀಮ್ ಇಂಡಿಯಾಗಾಗಿರುವ ಬಿಗ್​ ಸೆಟ್​ಬ್ಯಾಕ್.

2019, 2021 ಐಸಿಸಿ ಟೂರ್ನಿ ನೆನಪಿಸುತ್ತಾ?

ಒಂದೇ ಒಂದು ತಪ್ಪು ನಿರ್ಣಯಕ್ಕೆ ಟೀಮ್ ಇಂಡಿಯಾ, 2019ರ ಏಕದಿನ ವಿಶ್ವಕಪ್, 2021ರ ಟಿ20 ವಿಶ್ವಕಪ್​ ಟೂರ್ನಿಯನ್ನ ಬೆಲೆ ತೆತ್ತಿತ್ತು. 2019ರಲ್ಲಿ ಅಂಬಾಟಿ ರಾಯುಡುನ ಕೈಬಿಟ್ಟು, ವಿಜಯ್​ಶಂಕರ್​​ಗೆ ಚಾನ್ಸ್ ನೀಡಿತ್ತು. ಅದೇ ರೀತಿ 2021ರಲ್ಲಿ ದುಬೈನಲ್ಲೇ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಯಜುವೇಂದ್ರ ಚಹಲ್​ನ ಡ್ರಾಪ್ ಮಾಡಿದ್ದ ಬಿಸಿಸಿಐ, ಇದೇ ವರುಣ್ ಚಕ್ರವರ್ತಿಗೆ ಬುಲಾವ್ ನೀಡಿತ್ತು. ಆದ್ರೀಗ ಜೈಸ್ವಾಲ್ ಬದಲಾಗಿ ವರುಣ್​ಗೆ ಅವಕಾಶ ನೀಡಿದೆ. ಬೂಮ್ರಾ ಸ್ಥಾನಕ್ಕೆ ಅನಾನುಭವಿ ಹರ್ಷಿತ್ ರಾಣಾನ ಕರೆತಂದಿದೆ. ಆದ್ರೀಗ ಈ ಎರಡು ಮಹಾ ಅಪರಾಧಗಳು, ಚಾಂಪಿಯನ್ಸ್​ ಟ್ರೋಫಿ ಕನಸನ್ನು ನುಚ್ಚುನೂರು ಮಾಡಿದ್ರ ಅಚ್ಚರಿ ಪಡೆಬೇಕಿಲ್ಲ.

ಇದನ್ನೂ ಓದಿ: ನಮ್ಮ ಮೆಟ್ರೋ ಈ ಮಾರ್ಗಗಳಲ್ಲಿ ಟಿಕೆಟ್ ಬೆಲೆ ಕಡಿಮೆ ಮಾಡಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment