/newsfirstlive-kannada/media/post_attachments/wp-content/uploads/2024/12/JAISWAL-2.jpg)
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ಅವರ ಅರ್ಧ ಶತಕ ಟೀಂ ಇಂಡಿಯಾಗೆ ದೊಡ್ಡ ಪೆಟ್ಟು ಕೊಟ್ಟಿದೆ. ಆ ಮೂಲಕ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 9 ವಿಕೆಟ್ ಕಳೆದುಕೊಂಡು 228 ರನ್​ಗಳಿಸಿದೆ. ಅಲ್ಲದೇ 333 ವಿಕೆಟ್​​ಗಳ ಅಂತರ ಕಾಯ್ದುಕೊಂಡಿದೆ.
ಪಂದ್ಯದ ಆರಂಭದಲ್ಲಿ ಮಾರ್ನಸ್​ ಔಟ್ ಮಾಡುವ ಅವಕಾಶ ಟೀಂ ಇಂಡಿಗೆ ಇತ್ತು. ಯಶಸ್ವಿ ಜೈಸ್ವಾಲ್ ಈಜಿ ಕ್ಯಾಚ್ ಕೈಚೆಲ್ಲಿ ನಿರಾಸೆ ಮೂಡಿಸಿದರು. ಇದರಿಂದ ಕೋಪಿಸಿಕೊಂಡ ಪ್ರಸಂಗ ಕೂಡ ನಡೆಯಿತು.
40ನೇ ಓವರ್​​ ಎಸೆಯಲು ಆಕಾಶ್ ದೀಪ್ ಬಂದಿದ್ದರು. ಆಕಾಶ್ ದೀಪ್ ಎಸೆದ ಬಾಲ್, ಮಾರ್ನಸ್​​ ಬ್ಯಾಟ್​​ಗೆ ತಗುಲಿ ಸ್ಲಿಪ್ ಆಗಿದೆ. ಸ್ಲಿಪ್​​ನಲ್ಲಿದ್ದ ಯಶಸ್ವಿ ಜೈಸ್ವಾಲ್ ಬಳಿ ಬಾಲ್ ಬಂದಿತ್ತು. ಸುಲಭವಾಗಿ ತೆಗೆದುಕೊಳ್ಳಬಹುದಾಗಿದ್ದ ಕ್ಯಾಚ್ ಅನ್ನು ಜೈಸ್ವಾಲ್ ಬಿಟ್ಟರು. ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಜೈಸ್ವಾಲ್ ಅಷ್ಟೊಂದು ಚೆನ್ನಾಗಿ ಬ್ಯಾಟ್ ಮಾಡಲಿಲ್ಲ. ಮಾರ್ನಸ್ ಕ್ಯಾಚ್ ಬಿಡುವುದಕ್ಕೂ ಮೊದಲು ಉಸ್ಮಾನ್ ಖವಾಜಾ ಅವರ ಕ್ಯಾಚ್​ ಬಿಟ್ಟಿದ್ದರು.
Rohit Sharma is furious after Jaiswal dropped the catch of Labuschagne.
He has captained exceptionally so far to turn around the match! pic.twitter.com/6R2zej5o51— Keh Ke Peheno (@coolfunnytshirt) December 29, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us