6, 6, 6; ಯಶಸ್ವಿ ಜೈಸ್ವಾಲ್ ಘರ್ಜನೆ ಆರಂಭ.. ಸ್ಫೋಟಕ ಅರ್ಧಶತಕ

author-image
Bheemappa
Updated On
6, 6, 6; ಯಶಸ್ವಿ ಜೈಸ್ವಾಲ್ ಘರ್ಜನೆ ಆರಂಭ.. ಸ್ಫೋಟಕ  ಅರ್ಧಶತಕ
Advertisment
  • ಅಂತೂ ಬ್ಯಾಟಿಂಗ್​ ಟ್ರ್ಯಾಕ್​ಗೆ ಮರಳಿರುವ ಯಶಸ್ವಿ ಜೈಸ್ವಾಲ್​
  • ಈ ಮೊದಲು ನಡೆದ ಪಂದ್ಯಗಳಲ್ಲಿ ಜೈಸ್ವಾಲ್ ವಿಫಲ ಬ್ಯಾಟಿಂಗ್
  • ಒಳ್ಳೆಯ ಆರಂಭಿಕ ಬ್ಯಾಟಿಂಗ್ ಪಡೆದಿದ್ದ ಯಶಸ್ವಿ- ಸ್ಯಾಮ್ಸನ್

ಮೊದಲ 3 ಪಂದ್ಯಗಳಿಂದ ವಿಫಲ ಬ್ಯಾಟಿಂಗ್ ಮಾಡಿದ್ದ ಯಂಗ್ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್, ಪಂಜಾಬ್ ಕಿಂಗ್ಸ್ ವಿರುದ್ಧ ಹಾಫ್​ಸೆಂಚುರಿ ಸಿಡಿಸಿದ್ದಾರೆ. ಈ ಟೂರ್ನಿಯಲ್ಲಿ ಇದು ಜೈಸ್ವಾಲ್ ಅವರ ಮೊದಲ ಅರ್ಧಶತಕವಾಗಿದೆ.

ಚಂಡೀಗಢದ ಮುಲ್ಲನ್ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ರಾಜಸ್ಥಾನ ಪರ ಸಂಜು ಸ್ಯಾಮ್ಸನ್​ ಹಾಗೂ ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿ ಭರ್ಜರಿ ಆರಂಭ ಪಡೆದರು. ಆದರೆ ಸಂಜು 38 ರನ್​ ಗಳಿಸಿ ಆಡುವಾಗ ಶ್ರೇಯಸ್ ಅಯ್ಯರ್​ಗೆ ಕ್ಯಾಚ್ ನೀಡಿ, ಕ್ರೀಸ್​ನಲ್ಲೇ ಬ್ಯಾಟ್ ಬಿಸಾಕಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:CSKಗೆ ಮತ್ತೊಂದು ಹೀನಾಯ ಸೋಲು.. ಕನ್ನಡಿಗ KL ರಾಹುಲ್ ಆರ್ಭಟ, ಡೆಲ್ಲಿ ಜಯಭೇರಿ

publive-image

ಇನ್ನೊಂದು ಕಡೆ ಕ್ರೀಸ್​ ಕಾಯ್ದುಕೊಂಡಿದ್ದ ಯಂಗ್ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್ ಈ ಟೂರ್ನಿಯಲ್ಲಿ ಮೊದಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಬ್ಯಾಟಿಂಗ್ ಹಳಿ ತಪ್ಪಿದ್ದ ಜೈಸ್ವಾಲ್ ಕೊನೆಗೂ ಟ್ರ್ಯಾಕ್​ಗೆ ಮರಳಿದಂತೆ ಆಗಿದೆ. 40 ಬಾಲ್​ಗಳನ್ನು ಎದುರಿಸಿದ ಜೈಸ್ವಾಲ್ 2 ಫೋರ್, 3 ದೊಡ್ಡ ಸಿಕ್ಸರ್​ಗಳಿಂದ 50 ರನ್​ಗಳನ್ನು ಪೂರೈಸಿದರು. 67 ರನ್​ ಗಳಿಸಿ ಆಡುವಾಗ ಲಾಕಿ ಫರ್ಗುಸನ್​ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆಗಿ ಹೊರ ನಡೆದರು

ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಟೀಮ್ ಈ ಬಾರಿ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತಿದೆ. 2025ರ ಟೂರ್ನಿಯಲ್ಲಿ 2 ಮ್ಯಾಚ್​ಗೆ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ರಾಜಸ್ಥಾನ್ ಮಾತ್ರ ಮೂರು ಪಂದ್ಯಗಳಲ್ಲಿ ಕೇವಲ ಒಂದು ಮ್ಯಾಚ್ ಮಾತ್ರ ಗೆದ್ದು ಸಂಕಷ್ಟದಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment