/newsfirstlive-kannada/media/post_attachments/wp-content/uploads/2024/07/yashasvi-jaiswal.jpg)
ಹರಾರೆ ಸ್ಫೋರ್ಟ್ಸ್​​ ಕ್ಲಬ್​ನಲ್ಲಿ ಏರ್ಪಟ್ಟ ನಾಲ್ಕನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್​ ಅದ್ಭುತವಾಗಿ ಬ್ಯಾಟ್​​ ಬೀಸಿದ್ದಾರೆ. ನಾಯಕ ಶುಭ್ಮನ್​ ಗಿಲ್​ ಜೊತೆಗೂಡಿ ತಂಡಕ್ಕೆ ಜಯವನ್ನು ತಂದುಕೊಟ್ಟಿದ್ದಾರೆ.
ಇಂದಿನ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಜಿಂಬಾಬ್ವೆ ನೀಡಿದ 152 ರನ್​ಗಳನ್ನು ಹೊಡೆದುರುಳಿಸುವ ಮೂಲಕ 10 ವಿಕೆಟ್​ಗಳ ಜಯವನ್ನು ಸಂಭ್ರಮಿಸಿದೆ. ಅದರಲ್ಲೂ ಓಪನಿಂಗ್​ ಬಂದ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್​​ ತನ್ನ ವಿಕೆಟನ್ನು ಯಾರಿಗೂ ಒಪ್ಪಿಸದೆ ಅದ್ಭುತವಾಗಿ ಆಟವಾಡಿದ್ದಾರೆ.
For his opening brilliance of 9⃣3⃣* off just 5⃣3⃣ deliveries, @ybj_19 is named the Player of the Match ??
Scorecard ▶️ https://t.co/AaZlvFY7x7#TeamIndia | #ZIMvINDpic.twitter.com/yqiiMsFAgF
— BCCI (@BCCI)
For his opening brilliance of 9⃣3⃣* off just 5⃣3⃣ deliveries, @ybj_19 is named the Player of the Match 👏👏
Scorecard ▶️ https://t.co/AaZlvFY7x7#TeamIndia | #ZIMvINDpic.twitter.com/yqiiMsFAgF— BCCI (@BCCI) July 13, 2024
">July 13, 2024
ಯಶಸ್ವಿ ಜೈಸ್ವಾಲ್​​ 53 ಎಸೆತಕ್ಕೆ 13 ಬೌಂಡರಿ ಮತ್ತು 2 ಸಿಕ್ಸ್​ ಬಾರಿಸುವ ಮೂಲಕ 93 ರನ್​ ಬಾರಿಸಿದರು. ಕೊನೆಯ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಟೀಂ ಇಂಡಿಯಾಗೆ ಜಯವನ್ನು ತಂದುಕೊಟ್ಟಿದ್ದಾರೆ. ಆ ಮೂಲಕ ಇಂದಿನ ಪಂದ್ಯದಲ್ಲಿ ಹೀರೋ ಎಂದೆನಿಸಿಕೊಂಡಿದ್ದಾರೆ.
ಸದ್ಯ ಟೀಂ ಇಂಡಿಯಾ ಫ್ಯಾನ್ಸ್​​ಗೆ ಯಶಸ್ವಿ ಆಟ ಮಾತ್ರ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಅದ್ಭುತ ಬೌಂಡರಿ, ಅತ್ಯದ್ಭುತ ಸಿಕ್ಸ್​ ನೋಡಿ ಯಶಸ್ವಿ ಜೈಸ್ವಾಲ್ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us