ಮುಂಬೈಗೆ ಬಿಗ್ ಶಾಕ್ ಕೊಟ್ಟ ಜೈಸ್ವಾಲ್.. ಬೇರೆ ತಂಡ ಕೂಡಿಕೊಂಡ ಸ್ಟಾರ್ ಓಪನರ್​..!

author-image
Ganesh
Updated On
ಮುಂಬೈಗೆ ಬಿಗ್ ಶಾಕ್ ಕೊಟ್ಟ ಜೈಸ್ವಾಲ್.. ಬೇರೆ ತಂಡ ಕೂಡಿಕೊಂಡ ಸ್ಟಾರ್ ಓಪನರ್​..!
Advertisment
  • ಅಚ್ಚರಿ ಮೂಡಿಸಿದ ಜೈಸ್ವಾಲ್ ದಿಢೀರ್ ನಿರ್ಧಾರ್
  • ಯಶಸ್ವಿಗೆ ಜಾಕ್​ಪಾಟ್​, ಇನ್ಮೇಲೆ ಕ್ಯಾಪ್ಟನ್ ಜೈಸ್ವಾಲ್
  • ಜೈಸ್ವಾಲ್ ಇನ್ಮೇಲೆ ಯಾವತ ತಂಡದ ಜೊತೆ ಆಡ್ತಾರೆ?

ದೇಸಿಯ ಕ್ರಿಕೆಟ್​ನಲ್ಲಿ ಮುಂಬೈ ತಂಡದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಶಾಕಿಂಗ್​ ನಿರ್ಧಾರ ಮಾಡಿದ್ದಾರೆ. ಮುಂಬೈ ತಂಡವನ್ನ ತೊರೆದು ಗೋವಾದತ್ತ ಮುಖ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಗೋವಾ ಕ್ರಿಕೆಟ್ ಅಸೋಸಿಯೇಷನ್​​​​ ಜೈಸ್ವಾಲ್​ಗೆ ನಾಯಕತ್ವದ ಆಫರ್ ನೀಡಿದೆ.

ಈ ಕಾರಣಕ್ಕೆ ದೇಶಿ ಕ್ರಿಕೆಟ್​ನಲ್ಲಿ ತವರು ಮುಂಬೈ ತಂಡವನ್ನು ತೊರೆಯಲು ಮುಂದಾಗಿರುವ ಜೈಸ್ವಾಲ್, ಮುಂದಿನ ಸೀಸನ್​ನಲ್ಲಿ ಗೋವಾ ಸೇರಲು ಮುಂದಾಗಿದ್ದಾರೆ. ಈಗಾಗಲೇ ಮುಂಬೈ ಕ್ರಿಕೆಟ್​ ಅಸೋಸಿಯೇಶನ್​ನಿಂದ NOC ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಆರ್​​ಸಿಬಿ ವಿರುದ್ಧ ಕಣಕ್ಕೆ ಇಳಿಯುತ್ತಿದ್ದಂತೆ ಸಿರಾಜ್​ ಭಾವುಕ.. ಪಂದ್ಯ ಮುಗಿದ ಮೇಲೆ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಯಶಸ್ವಿ ಜೈಸ್ವಾಲ್, ಗೋವಾ ನನ್ನನ್ನು ಕೈಬೀಸಿ ಕರೆಯಿತು. ನಾನು ತುಂಬಾ ಯೋಚಿಸಿ ನಿರ್ಧಾರ ಮಾಡಿದೆ. ನಾನು ಇವತ್ತು ಏನೇ ಆದರೂ ಅದಕ್ಕೆ ಕಾರಣ ಮುಂಬೈ ತಂಡ. ಮುಂಬೈ ಸಿಟಿ ನನಗೆ ಬದುಕು ನೀಡಿದೆ. ನಾನು ಮುಂಬೈನ ಎಂಸಿಎಗೆ ಸದಾ ಋಣಿ ಆಗಿರುತ್ತೇನೆ.

ಗೋವಾ ನನಗೆ ಹೊಸ ಅವಕಾಶಕ್ಕಾಗಿ ಕೈಬೀಸಿ ಕರೆದಿದೆ. ಅದು ನಾಯಕತ್ವದ ಹೊಣೆ ನೀಡುವಾಗಿದೆ ಹೇಳಿದೆ. ನನ್ನ ಮೊದಲ ಗುರಿ ಭಾರತ ತಂಡಕ್ಕಾಗಿ ಆಡುವುದು. ಯಾವಾಗ ಭಾರತ ತಂಡದಲ್ಲಿ ಆಡುವುದರ ಜೊತೆಗೆ ಗೋವಾ ತಂಡದ ಪರವಾಗಿ ಆಡಲಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಓಲಾ, ಉಬರ್​ಗೆ ಬಿಗ್​ ಶಾಕ್.. ಬೈಕ್ ಟ್ಯಾಕ್ಸಿ ಸೇವೆಗೆ ಹೈಕೋರ್ಟ್​ ಬ್ರೇಕ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment