/newsfirstlive-kannada/media/post_attachments/wp-content/uploads/2024/12/Yashasvi_Jaiswal_KOHLI.jpg)
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಹಿನ್ನಡೆಯಲ್ಲಿದೆ. 474 ರನ್​ಗಳ ಬೃಹತ್ ಮೊತ್ತ ಪೇರಿಸಿರುವ ಆಸಿಸ್ ಬೌಲಿಂಗ್​ನಲ್ಲೂ ಪರಾಕ್ರಮ ಮೆರೆದಿದೆ. ಪಂದ್ಯ ನಡೆಯುವಾಗ ಯಶಸ್ವಿ ಜೈಸ್ವಾಲ್ ರನೌಟ್ ಆಗಿರುವುದು ಭಾರತೀಯರಿಗೆ ಭಾರೀ ನಿರಾಸೆ ಮೂಡಿಸಿದೆ.
ಇಂದು ಭಾರತದ ಪರ ಓಪನರ್ ಬ್ಯಾಟರ್ ಆಗಿ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಕ್ರೀಸ್​ಗೆ ಆಗಮಿಸಿದರು. ಅರ್ಧ ಶತಕ ಸಿಡಿಸಿದ ಜೈಸ್ವಾಲ್ ಉತ್ತಮವಾದ ಬ್ಯಾಟಿಂಗ್ ಮಾಡುತ್ತಿದ್ದರು. 11 ಬೌಂಡರಿ, 1 ಸಿಕ್ಸರ್ ಸಮೇತ 82 ರನ್​ಗಳಿಂದ ಆಡುವಾಗ ಸಿಂಗಲ್ ರನ್​ಗಾಗಿ ಓಡುವಾಗ ರನೌಟ್ ಆಗಿದ್ದಾರೆ. ಈ ವೇಳೆ ಇನ್ನೊಂದು ಬದಿಯಲ್ಲಿದ್ದ ವಿರಾಟ್ ಕೊಹ್ಲಿ ಓಡದಿರುವುದಕ್ಕೆ ಜೈಸ್ವಾಲ್ ಸೆಂಚುರಿ ಹೊಸ್ತಿಲಿನಲ್ಲಿ ಎಡವಿದರು ಎಂದು ಹೇಳಲಾಗುತ್ತಿದೆ.
ಸ್ಕಾಟ್ ಬೋಲ್ಯಾಂಡ್ ಓವರ್​​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್​ ಕ್ರೀಸ್​ನಲ್ಲಿದ್ದರು. ಈ ವೇಳೆ ಒಂದು ಬದಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಜೈಸ್ವಾಲ್ ಬಾಲ್ ಅನ್ನು ಹೊಡೆದು ಓಡಿದರು. ಆದರೆ ಇನ್ನೊಂದು ಬದಿಯಲ್ಲಿದ್ದ​ ಕೊಹ್ಲಿ ಅವರು ಓಡದೇ ಕ್ರೀಸ್​ನಲ್ಲಿ ನಿಂತು ಬಿಟ್ಟರು. ಆಗ ಆಸಿಸ್​ ನಾಯಕ ಪ್ಯಾಟ್ ಕಮಿನ್ಸ್ ಬಾಲ್ ಅನ್ನು ಕೀಪರ್ ಅಲೆಕ್ಸ್​ ಕ್ಯಾರಿಗೆ ನೇರವಾಗಿ ಎಸೆದರು. ಜೈಸ್ವಾಲ್ ಕ್ರೀಸ್​​ನ ಅರ್ಧ ಭಾಗಕ್ಕೆ ಬಂದಿದ್ದರಿಂದ ವಾಪಸ್ ಓಡಲು ಆಗಲಿಲ್ಲ. ಹೀಗಾಗಿ ಅಲೆಕ್ಸ್​ ಕ್ಯಾರಿ ಬಾಲ್ ಅನ್ನು ಸ್ಟಂಪ್​ಗೆ ಮುಟ್ಟಿಸಿದ್ದರಿಂದ ಜೈಸ್ವಾಲ್​ ಔಟ್ ಆದರು.
/newsfirstlive-kannada/media/post_attachments/wp-content/uploads/2024/12/Yashasvi_Jaiswal.jpg)
ಇದನ್ನೂ ಓದಿ: ವಿರಾಟ್​ ಕೊಹ್ಲಿ ವಿರುದ್ಧ ಚಿತ್ರ ವಿಚಿತ್ರವಾಗಿ ವರ್ತನೆ ಮಾಡಿದ ಆಸ್ಟ್ರೇಲಿಯಾದ ಜನ.. ಹೀಗೆ ಮಾಡೋದಾ?
82 ರನ್​ಗಳನ್ನ ಗಳಿಸಿದ್ದ ಯಶಸ್ವಿ ಜೈಸ್ವಾಲ್ ಶತಕ ಮಾಡುವ ನಿರೀಕ್ಷೆಯಲ್ಲಿದ್ದರು. ಇಡೀ ತಂಡದಲ್ಲಿ ಇಂದು ಜೈಸ್ವಾಲ್ ಒಬ್ಬರೇ ಅರ್ಧಶತಕ ಪೂರೈಸಿ ಬ್ಯಾಟಿಂಗ್ ಮಾಡುವಾಗ ರನೌಟ್​ಗೆ ಬಲಿಯಾಗಿದ್ದಾರೆ. ಕ್ರೀಸ್​ನಲ್ಲಿ ಇನ್ನೊಂದು ಬದಿಯಲ್ಲಿದ್ದ ವಿರಾಟ್​ ಕೊಹ್ಲಿ ರನ್​ಗೆ ಓಡದಿದ್ದಕ್ಕೆ ಹೀಗಾಗಿದೆ ಎಂದು ಹೇಳಲಾಗಿದೆ. ಇನ್ನು ಔಟ್ ಆಗುತ್ತಿದ್ದಂತೆ ನಿರಾಸೆಯಿಂದ ಯಶಸ್ವಿ ಜೈಸ್ವಾಲ್ ಪೆವಿಲಿಯನ್​ಗೆ ನಡೆದರು.
ಸದ್ಯ ಟೀಮ್ ಇಂಡಿಯಾ 5 ವಿಕೆಟ್​ಗೆ 164 ರನ್​ಗಳನ್ನು ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಕ್ರೀಸ್​ನಲ್ಲಿ ರಿಷಬ್ ಪಂತ್ 6, ರವೀಂದ್ರ ಜಡೇಜಾ 4 ನಾಳೆ ಬ್ಯಾಟಿಂಗ್ ಮುಂದುವರೆಸಲಿದ್ದಾರೆ. ಭಾರತ ಇನ್ನು 310 ರನ್​ಗಳನ್ನು ಗಳಿಸಬೇಕಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us