/newsfirstlive-kannada/media/post_attachments/wp-content/uploads/2025/06/GILL_JAISWAL-1.jpg)
ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಓಪನರ್​ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭ್​ಮನ್ ಗಿಲ್ ಅವರು ಅದ್ಭುತವಾದ ಸೆಂಚುರಿ ಬಾರಿಸಿದ್ದಾರೆ.
ಲೀಡ್ಸ್​​​ನ ಹೆಡಿಂಗ್ಲೆ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ನಾಯಕ ಬೆನ್​​ ಸ್ಟೋಕ್ಸ್​ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡುತ್ತಿದೆ. ಪಂದ್ಯದಲ್ಲಿ ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್ ರಾಹುಲ್ ಅವರು ಉತ್ತಮ ಆರಂಭ ಪಡೆದರು. ಆದರೆ ಹಾಫ್​ಸೆಂಚುರಿ ಸಮೀಪದಲ್ಲಿ ಕೆ.ಎಲ್ ರಾಹುಲ್ ಅವರು 42 ರನ್​ ಗಳಿಸಿ ಆಡುವಾಗ ರೂಟ್​ಗೆ ಕ್ಯಾಚ್ ಕೊಟ್ಟು ಕೈಸುಟ್ಟುಕೊಂಡರು.
ಆದರೆ ಇನ್ನೊಂದೆಡೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್, ಬಿಟಿಷ್​ ಬೌಲರ್​ಗಳಿಗೆ ಹಿಗ್ಗಾಮುಗ್ಗಾ ಬಾರಿಸಿದರು. ರಾಹುಲ್​ ಔಟ್ ಆದ ಬಳಿಕ ತಾಳ್ಮೆಯ ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದರು. ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 150 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 1 ಸಿಕ್ಸರ್​, 16 ಬೌಂಡರಿಗಳಿಂದ ಅದ್ಭುತವಾದ ಸೆಂಚುರಿ ಬಾರಿಸಿ ಸಂಭ್ರಮಿಸಿದರು. ಆದರೆ 101 ರನ್​ ಗಳಿಸಿ ಆಡುವಾಗ ಬೆನ್​ ಸ್ಟೋಕ್ಸ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.
ಸಾಯಿ ಸುದರ್ಶನ್ ಔಟ್​ ಆದ ಬಳಿಕ 4ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಆಗಮಿಸಿದ್ದ ನಾಯಕ ಶುಭ್​ಮನ್ ಗಿಲ್ ಅವರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಐಪಿಎಲ್​​ನಿಂದಲೂ ಉತ್ತಮ ಫಾರ್ಮ್​ನಲ್ಲಿರುವ ಗಿಲ್​ ಟೆಸ್ಟ್​ ಪಂದ್ಯದಲ್ಲೂ ಶತಕ ಬಾರಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. 140 ಎಸೆತಗಳನ್ನು ಆಡಿದ ಗಿಲ್ ಅವರು 14 ಬೌಂಡರಿಗಳಿಂದ 102 ರನ್​ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಸದ್ಯ ಟೀಮ್ ಇಂಡಿಯಾ ಮೊದಲ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ 3 ವಿಕೆಟ್​ಗೆ 331 ರನ್​ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ