ಚಾಂಪಿಯನ್ಸ್ ಟ್ರೋಫಿಗೆ ಯಾರು ಬೆಸ್ಟ್ ಆಪ್ಷನ್..?
ಕ್ಯಾಪ್ಟನ್-ಹೆಡ್ಕೋಚ್ಗೆ ಯಾರ ಮೇಲಿದೆ ಒಲವು..?
ಗಿಲ್ರನ್ನ ಓವರ್ಟೇಕ್ ಮಾಡ್ತಾರಾ ಈ ಆಟಗಾರ..?
ಶ್ರೀಲಂಕಾ ಸರಣಿ ಕೈಚೆಲ್ಲಿದ ಟೀಮ್ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್ ಚಾಂಪಿಯನ್ಸ್ ಟ್ರೋಫಿ. ಈ ಗ್ಲೋಬಲ್ ಇವೆಂಟ್ನಲ್ಲಿ ರೋಹಿತ್ ಶರ್ಮಾ ಜೊತೆಗಾರ ಆಗಲು ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ನಡುವೆ ಫೈಟ್ ಏರ್ಪಟ್ಟಿದೆ.
ಸರಣಿ ಸೋಲಿನೊಂದಿಗೆ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸಕ್ಕೆ ಗುಡ್ಬೈ ಹೇಳಿದೆ. ಸರಣಿಯುದ್ದಕ್ಕೂ ಬ್ಯಾಟ್ಸ್ಮನ್ಗಳು ತೋರಿದ ಕಳಪೆ ಪ್ರದರ್ಶನ ಆತಂಕಕ್ಕೆ ಕಾರಣವಾಗಿದೆ. ಇದೇ ಸೈನ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದ್ರೆ ತಂಡದ ಕಥೆ ಏನು? ಅಪ್ರೋಚ್ ಜೊತೆ ಆಯ್ಕೆಯಲ್ಲಿ ಬದಲಾವಣೆ ಆಗಬೇಕು ಅನ್ನೋ ಕೂಗು ಕ್ರಿಕೆಟ್ ವಲಯದಲ್ಲಿ ಕೇಳಿ ಬರ್ತಿದೆ. ಎಸ್ಪೆಷಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆಗಾರ ಯಾರು ಆಗ್ಬೇಕು ಅನ್ನೋದು ಹಾಟ್ ಟಾಫಿಕ್ ಆಗಿದೆ.
ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!
ಜೈಸ್ವಾಲ್ V/S ಗಿಲ್..!
ಯಶಸ್ವಿ ಜೈಸ್ವಾಲ್ ವರ್ಸಸ್ ಶುಭ್ಮನ್ ಗಿಲ್. ಟೀಮ್ ಇಂಡಿಯಾ ಸೆನ್ಷೆಷನಲ್ ಯಂಗ್ಸ್ಟರ್ಸ್. ಆರಂಭಿಕರಾಗಿ ಈ ಜೋಡಿ ಕ್ರಿಕೆಟ್ ಪ್ರೇಮಿಗಳ ದಿಲ್ ಗೆದ್ದಿದೆ. ಲೆಫ್ಟಿ ಬ್ಯಾಟರ್ ಜೈಸ್ವಾಲ್ ಅಗ್ರೆಸ್ಸಿವ್ ಆಟದಿಂದ, ಗಿಲ್ ಕ್ಲಾಸ್ ಅಂಡ್ ಮಾಸ್ ಆಟದಿಂದ ಸಖತ್ ಸದ್ದು ಮಾಡ್ತಿದ್ದಾರೆ. ಇದೀಗ ಈ ಯಂಗ್ ಜೋಡಿಗಳ ನಡುವೆ ಫೈಟ್ ಏರ್ಪಟ್ಟಿದೆ. ಚಾಂಪಿಯನ್ಸ್ ಟ್ರೋಫಿಗೆ ಯಾರು ಬೆಸ್ಟ್ ಅನ್ನೋ ಡಿಬೇಟ್ ನಡೀತಿದೆ.
ಪಂಜಾಬ್ ಪುತ್ತರ್ಗಿಂತ ಯಶಸ್ವಿ ಜೈಸ್ವಾಲ್ ಬೆಸ್ಟ್
ಗಿಲ್ ಇತ್ತೀಚೆಗೆ ಮುಗಿದ ಶ್ರೀಲಂಕಾ ಒನ್ಡೆ ಸರಣಿಯಲ್ಲಿ ಅಟ್ಟರ್ ಪ್ಲಾಫ್ ಶೋ ನೀಡಿದ್ರು. ಸಿಂಹಳೀಯರ ಸ್ಪಿನ್ ಜಾಲಕ್ಕೆ ಸಿಲುಕಿ ಗಿಲ್ ವಿಲ ವಿಲ ಒದ್ದಾಡಿದ್ರು. ಇದ್ರ ಬೆನಲ್ಲೇ ಪಂಜಾಬ್ ಪುತ್ತರ್ ಬದಲು ಜೈಸ್ವಾಲ್ಗೆ ತಂಡದಲ್ಲಿ ಚಾನ್ಸ್ ನೀಡ್ಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ.
ಇದನ್ನೂ ಓದಿ:ದ್ರಾವಿಡ್ ಯಾವತ್ತೂ ಇವರನ್ನು ಬೇಸರಗೊಳಿಸಿಲ್ಲ.. ಮತ್ತೊಮ್ಮೆ ಹೃದಯಗೆದ್ದ ಸಿಂಪಲ್ ಮ್ಯಾನ್..!
ಗಿಲ್ ಪ್ರದರ್ಶನ..!
ಶುಭ್ಮನ್ ಗಿಲ್ ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ ಕಾಣಿಸಿಕೊಂಡ್ರು. 19ರ ಎವರೇಜ್ನಲ್ಲಿ ಜಸ್ಟ್ 57 ರನ್ ಗಳಿಸಿ ಟೀಕಾಕಾರರ ಬಾಯಿಗೆ ಆಹಾರವಾದ್ರು. ಒಂದೆಡೆ ಗಿಲ್ ಹೀಗೆ ಲಂಕಾ ಸರಣಿಯಲ್ಲಿ ಮುಗ್ಗರಿಸ್ತಿದ್ರೆ ಜೈಸ್ವಾಲ್ ಸಿಕ್ಕ ಅವಕಾಶಗಳಲ್ಲಿ ಲೀಲಾಜಾಲವಾಗಿ ರನ್ ಗಳಿಸ್ತಿದ್ದಾರೆ. ಫೈರಿ ಲೆಫ್ಟಿ ಬ್ಯಾಟರ್ಗೆ ಏಕದಿನದಲ್ಲಿ ಕಣಕ್ಕಿಳಿಯುವ ಭಾಗ್ಯ ಸಿಕ್ಕಿಲ್ಲ ನಿಜ. ಟೆಸ್ಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ಇಂಪ್ರೆಸ್ಸಿವ್ ಆಟವಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಜೈಸ್ವಾಲ್..!
ಯಶಸ್ವಿ ಜೈಸ್ವಾಲ್ ಇವರೆಗೆ 9 ಟೆಸ್ಟ್ ಪಂದ್ಯಗಳನ್ನಾಡಿದ್ದು, 1028 ರನ್ ಚಚ್ಚಿದ್ದಾರೆ. ಇದ್ರಲ್ಲಿ ಅಮೋಘ 3 ಶತಕ ಹಾಗೂ 4 ಅರ್ಧಶತಕ ಸೇರಿಕೊಂಡಿವೆ. ಇನ್ನೂ ಟಿ20 ಕ್ರಿಕೆಟ್ನಲ್ಲಿ ಜೈಸ್ವಾಲ್ ರನ್ ಭರಾಟೆ ಜೋರಾಗಿದೆ. ಆಡಿದ 23 ಪಂದ್ಯಗಳಿಂದ 723 ರನ್ ಗಳಿಸಿದ್ದಾರೆ. 5 ಅರ್ಧಶತಕದ ಜೊತೆ 1 ಸೆಂಚುರಿ ಮೂಡಿ ಬಂದಿದೆ. ಈ ಇಂಪ್ರೆಸ್ಸಿವ್ ಟ್ರ್ಯಾಕ್ ರೆಕಾರ್ಡ್ ಅಷ್ಟೇ ಅಲ್ಲ. ಮುಂಬರೋ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಿಲ್ ಬದಲು ಜೈಸ್ವಾಲ್ ಆರಂಭಿಕನಾಗಿ ಆಡಿದ್ರೆ ತಂಡಕ್ಕೆ ಹೆಚ್ಚು ಲಾಭವಾಗಲಿದೆ.
ಇದನ್ನೂ ಓದಿ:ನೀರಜ್ ಚೋಪ್ರಾ ಕೋಟಿ ಕೋಟಿ ಆಸ್ತಿ ಒಡೆಯ.. ಚಿನ್ನ ಗೆದ್ದ ನದೀಮ್ ಬಳಿ ಎಷ್ಟು ಕೋಟಿ ಆಸ್ತಿ ಇದೆ..?
ಜೈಸ್ವಾಲ್ ಉತ್ತಮ ಆಯ್ಕೆ ಏಕೆ..?
ಈ ಎಲ್ಲಾ ಕಾರಣಗಳಿಂದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ಯಾಪ್ಟನ್ ರೋಹಿತ್ ಜೊತೆ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ರೆ ತಂಡಕ್ಕೆ ಹೆಚ್ಚು ಲಾಭವಿದೆ. ಈ ಸತ್ಯವನ್ನ ಟೀಮ್ ಮ್ಯಾನೇಜ್ಮೆಂಟ್ ಅರ್ಥ ಮಾಡಿಕೊಳ್ಳುತ್ತಾ? ಗಿಲ್ಗೆ ಕೊಕ್ ಕೊಟ್ಟು ಜೈಸ್ವಾಲ್ಗೆ ಬಹುಪರಾಕ್ ಅನ್ನುತ್ತಾ.? ಅನ್ನೋದನ್ನ ಕಾದು ನೋಡೋಣ.
ಇದನ್ನೂ ಓದಿ:ಬೂಮ್ರಾ ಮೇಲೆ ಪ್ರೀತಿಯ ಬಾಣ ಎಸೆದ ಬಾಲಿವುಡ್ ಬ್ಯೂಟಿ.. ಯಾರ್ಕರ್ ಕಿಂಗ್ಗೆ ಈಕೆ ಬೋಲ್ಡ್ ಆಗಿದ್ದೇಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ