/newsfirstlive-kannada/media/post_attachments/wp-content/uploads/2024/12/Yashasvi_Jaiswal-1.jpg)
ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ 5ನೇ ದಿನದಂದು ವಿವಾದಾತ್ಮಕ ಡಿಆರ್‌ಎಸ್ ತೀರ್ಪಿಗೆ ಓಪನರ್ ಯಶಸ್ವಿ ಜೈಸ್ವಾಲ್ ಬಲಿಯಾಗಿದ್ದಾರೆ. ಸದ್ಯ ಈ ಸಂಬಂಧ ಅಭಿಮಾನಿಗಳು 3ನೇ ಅಂಪೈರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಸಿಸಿಐ
ಟೀಮ್ ಇಂಡಿಯಾದಲ್ಲಿ ರೋಹಿತ್, ಕೊಹ್ಲಿಯಂತ ಘಟಾನುಘಟಿಗಳು ಔಟ್ ಆದರು ಕ್ರೀಸ್ ಕಚ್ಚಿಕೊಂಡು ನಿಂತಿದ್ದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ತೀರ್ಪಿನಿಂದ ಔಟ್ ಆಗಿದ್ದಾರೆ. ಈ ಬಗ್ಗೆ ಯಶಸ್ವಿ ಜೈಸ್ವಾಲ್ ಕೂಡ ಅಂಪೈರ್ ಬಳಿ ಚರ್ಚೆ ಮಾಡಿದರೂ ಏನು ಪ್ರಯೋಜನವಾಗಲಿಲ್ಲ. 3ನೇ ಅಂಪೈರ್ ಕೊಟ್ಟ ನಿರ್ಧಾರದಿಂದ ಯಶಸ್ವಿ ಜೈಸ್ವಾಲ್ ಬೇಸರದಲ್ಲೇ ಪೆವಿಲಿಯನ್ ಕಡೆ ನಡೆದರು.
ಯಶಸ್ವಿ ಜೈಸ್ವಾಲ್ 208 ಎಸೆತಗಳಲ್ಲಿ 8 ಬೌಂಡರಿ ಸಮೇತ 84 ರನ್ ಗಳಿಸಿ ಸಖತ್ ಆಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. ಇನ್ನೇನು ಶತಕದ ಹಾದಿಯಲ್ಲಿದ್ದರು. ಆದರೆ 71ನೇ ಓವರ್ ಮಾಡುತ್ತಿದ್ದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಹಾಕಿದ ಬಾಲ್ ಅನ್ನು ಲೆಗ್ಸೈಡ್ನಲ್ಲಿ ಜೈಸ್ವಾಲ್ ಫುಲ್ ಶಾರ್ಟ್ ಮಾಡಿದರು. ಬಾಲ್ ನೇರ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು. ತಕ್ಷಣ ಆಸಿಸ್ ಪ್ಲೇಯರ್ಸ್ ಎಲ್ಲ ಔಟ್ಗಾಗಿ ಅಫೀಲ್ ಮಾಡಿದರೂ ಅಂಪೈರ್ ಅದನ್ನು ಔಟ್ ಕೊಡಲಿಲ್ಲ. ತಕ್ಷಣ ಪ್ಯಾಟ್ ಕಮಿನ್ಸ್ ಕೈ ಸನ್ನೆ ಮಾಡಿ ಥರ್ಡ್ ಅಂಪೈರ್ಗೆ ಮನವಿ ಮಾಡಿದರು.
ಇದನ್ನೂ ಓದಿ:IND vs AUS; ಟೀಮ್ ಇಂಡಿಯಾಕ್ಕೆ ಕೈಕೊಟ್ಟ KL ರಾಹುಲ್.. ಕನ್ನಡಿಗ ಕ್ಲೀನ್ ಬೋಲ್ಡ್
ಥರ್ಡ್ ಅಂಪೈರ್ ಇದನ್ನು ಸರಿಯಾಗಿ ಪರಿಶೀಲನೆ ಮಾಡದೆ, ಪರೀಕ್ಷಿಸದೇ ಗ್ಲೌಸ್ಗೆ ಬಾಲ್ ಟಚ್ ಆಗಿದೆ. ಇದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಯಶಸ್ವಿ ಜೈಸ್ವಾಲ್ರನ್ನು ಔಟ್ ಕೊಟ್ಟಿದ್ದಾರೆ. ಪ್ಯಾಟ್ ಕಮಿನ್ಸ್ ಹಾಕಿದ ಆ ಬಾಲ್, ಯಶಸ್ವಿ ಜೈಸ್ವಾಲ್ ಬ್ಯಾಟ್ಗೆ ಒಂದು ಸ್ವಲ್ಪನೂ ಟಚ್ ಆಗಿಯೇ ಇಲ್ಲ. ಇದು ವಿಡಿಯೋದಲ್ಲಿ ನಿಖರವಾಗಿ, ಸ್ಪಷ್ಟವಾಗಿ ಕಾಣುತ್ತದೆ. ಆದರೆ ಇದನ್ನು ಥರ್ಡ್ ಅಂಪೈರ್ ಔಟ್ ಎಂದು ಹೇಳುವ ಮೂಲಕ ಟೀಮ್ ಇಂಡಿಯಾ ಪಾಲಿಗೆ ಯಮನಾಗಿ ವರ್ತನೆ ಮಾಡಿದ್ದಾನೆ ಎನ್ನಬಹುದು.
ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯ ಟೆಸ್ಟ್‌ನ 5ನೇ ದಿನದಂದು ಯಶಸ್ವಿ ಜೈಸ್ವಾಲ್ ಔಟ್ ಆಗಿಲ್ಲದಿರುವುದು ಸ್ಪಷ್ಟವಾಗಿದೆ. ಆದರೂ ಔಟ್ ಕೊಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ 3ನೇ ಅಂಪೈರ್ ನಿರ್ಧಾರಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಂದ್ಯ ನಡೆಯುವಾಗ ಕಾಮೆಂಟರಿ ಮಾಡುತ್ತಿದ್ದ ಭಾರತದ ಮಾಜಿ ಆಟಗಾರರಾದ ಸುನಿಲ್ ಗವಾಸ್ಕರ್, ದೀಪ್ ದಾಸ್ ಗುಪ್ತಾ ಹಾಗೂ ಇರ್ಫಾನ್ ಪಠಾಣ್ ನಿರ್ಧಾರವನ್ನು ಬಲವಾಗಿ ಖಂಡಿಸಿದ್ದಾರೆ. ಥರ್ಡ್ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ರಿಕಿ ಪಾಂಟಿಂಗ್ ತಮ್ಮ ದೇಶದ ಪರ ನಿಂತು ಯಶಸ್ವಿ ಜೈಸ್ವಾಲ್ ಔಟ್ ಅನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ