newsfirstkannada.com

ಕೆಣಕಿದ್ರೆ ಕಥೆ ಮುಗೀತು ಯಾರನ್ನೂ ಬಿಡಲ್ಲ.. ಕಾಲ್ಕೆದರಿ ಬಂದಿದ್ದ ಬಶೀರ್​​ನ ಚಳಿ ಬಿಡಿಸಿದ ಜೈಸ್ವಾಲ್..!

Share :

Published March 8, 2024 at 3:02pm

    ಧರ್ಮಶಾಲಾ ಟೆಸ್ಟ್​ನಲ್ಲಿ ರೊಚ್ಚಿಗೆದ್ದ ಜೈಸ್ವಾಲ್

    ಕಾಲು ಕೆರೆದುಕೊಂಡು ಬಂದ ಶೋಯೆಬ್​ ಬಶೀರ್​ ​

    ಸರಿಯಾಗಿ ತಿರುಗೇಟು ಕೊಟ್ಟ ಯಶಸ್ವಿ ಜೈಸ್ವಾಲ್​

ಇದು ಹಳೆ ಟೀಮ್​ ಇಂಡಿಯಾ ಅಲ್ಲ. ಈಗ ತಂಡ ಮೊದಲಿದ್ದಂಗೂ ಇಲ್ಲ. ಮೊದಲಿದ್ದ ಆಟಗಾರರೂ ಇಲ್ಲ. ಕೆಣಕಿದ್ರೆ ಕಥೆ ಮುಗೀತು, ಸ್ಪಾಟ್​​ನಲ್ಲೇ ತಿರುಗೇಟು ಕೊಡೋದು ಪಕ್ಕಾ. ಧರ್ಮಶಾಲಾ ಟೆಸ್ಟ್​ ಮೊದಲ ದಿನ ಆಗಿದ್ದು ಇದೇ ನೋಡಿ. ಕಾಲು ಕೆರೆದುಕೊಂಡು ಬಂದ ಇಂಗ್ಲೆಂಡ್​ನ ಶೊಯೇಬ್​​ ಬಶೀರ್​ಗೆ ಯಶಸ್ವಿ ಜೈಸ್ವಾಲ್​ ಲೈಫ್​ ಅಲ್ಲೇ ಮರೆಯಲಾಗದ ಲೆಸೆನ್​ ಕಲಿಸಿದ್ದಾರೆ.

ಧರ್ಮಶಾಲಾ ಟೆಸ್ಟ್​ನಲ್ಲೂ ಟೀಮ್​ ಇಂಡಿಯಾ ಯಂಗ್​​ಸ್ಟರ್​​​ ಯಶಸ್ವಿ ಜೈಸ್ವಾಲ್​ ಬ್ಯಾಟ್​​​ ಸಖತ್​ ಸೌಂಡ್​ ಮಾಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಜೈಸ್ವಾಲ್​ ಅರ್ಧಶತಕ ಸಿಡಿಸಿ ಔಟಾಗಿರಬಹುದು. ಆದ್ರೂ, ಆಂಗ್ಲರಿಗೆ ಆ ಅರ್ಧಶತಕವನ್ನೇ ಇನ್ನೂ ಸುಧಾರಿಸಿಕೊಳ್ಳೋಕೆ ಆಗ್ತಿಲ್ಲ. ಜೈಸ್ವಾಲ್​ ಕಟ್ಟಿದ್ದು ಅಂತಾ ಇನ್ನಿಂಗ್ಸ್.

ಒಂದು ಕಣ್ಣೋಟ, ಮೂರು ಸಿಕ್ಸರ್​..!
ಅಸಲಿಗೆ ಇನ್ನಿಂಗ್ಸ್​ ಆರಂಭದಲ್ಲಿ ಯಶಸ್ವಿ ಜೈಸ್ವಾಲ್​​ ತುಂಬಾ ತಾಳ್ಮೆಯ ಆಟವಾಡ್ತಿದ್ರು. ಬಿಗ್ ಶಾಟ್​ ಹೊಡೆಯೋ ರಿಸ್ಕ್​ ತೆಗೆದುಕೊಳ್ಳದೆ, ಡಿಫೆನ್ಸಿವ್​ ಆಟದ ಮೊರೆ ಹೋಗಿದ್ರು. ಮೊದಲ 26 ಎಸೆತಗಳಲ್ಲಿ ಜೈಸ್ವಾಲ್​ಗಳಿಸಿದ್ದು ಕೇವಲ 6 ರನ್​​ ಮಾತ್ರ. ಆದ್ರೆ, 9ನೇ ಓವರ್​ನಲ್ಲಾದ ಆ ಒಂದು ಘಟನೆ ಸೈಲೆಂಟ್​​ ಆಗಿದ್ದ ಜೈಸ್ವಾಲ್,​ ವೈಲೆಂಟ್​ ಆಗುವಂತೆ ಮಾಡಿಬಿಡ್ತು.

ಬೌಲರ್-ಶೊಯೆಬ್​ ಬಶೀರ್​​
9ನೇ ಓವರ್​ ಬೌಲಿಂಗ್​ ಮಾಡಲು ಬಂದ ಶೋಯೇಬ್ ಬಶೀರ್, 2ನೇ ಎಸೆತ ಹಾಕಿದ ಬಳಿಕ ಒಂದು ತಪ್ಪು ಮಾಡಿಬಿಡ್ರು. ಎಸೆತವನ್ನ ಜೈಸ್ವಾಲ್​ ಸಿಂಪಲ್​ ಆಗಿ ಡಿಫೆಂಡ್​ ಮಾಡಿದ್ರು. ಬಾಲ್ ವಾಪಾಸ್​ ಬಶೀರ್​ ಬಳಿ ಹೋಯ್ತು. ಬಾಲ್​ನ ಸುಮ್ಮನೆ ತೆಗೆದುಕೊಂಡಿದ್ರೆ ಎಲ್ಲಾ ಸರಿಯಾಗೇ ಇರ್ತಾ ಇತ್ತು. ಬಶೀರ್​ ಬಾಲ್​ ತೆಗೆದುಕೊಂಡ ಬಳಿಕ ಜೈಸ್ವಾಲ್​​ರನ್ನ ಸುಖಾ ಸುಮ್ಮನೇ ಗುರಾಯಿಸಿದ್ರು. ನಮ್ಮ ಜಾಗ, ನಮ್ಮ ನೆಲದಲ್ಲಿ ಬಶೀರ್ ಸುಖಾಸುಮ್ಮನೇ​​​ ಕಾಲು ಕರೆದುಕೊಂಡು ಬಂದ್ರೆ ಜೈಸ್ವಾಲ್​ ಸುಮ್ಮನಿರ್ತಾರಾ? ಇದಾದ ನೆಕ್ಸ್ಟ್​​ ಎಸೆತದಲ್ಲೇ ಜೈಸ್ವಾಲ್, ಬ್ಯಾಟ್​​ನಿಂದ ಮುಟ್ಟಿ ನೋಡಿಕೊಳ್ಳುವಂತೆ​ ಆನ್ಸರ್​ ಕೊಟ್ರು. ಒಂದು ಸಿಕ್ಸ್​ ಹೊಡೆದು ಜೈಸ್ವಾಲ್​ ಸುಮ್ಮನಾದ್ರು ಅಂದುಕೊಂಡ್ರಾ. ನೋ ವೇ ಚಾನ್ಸ್​​ ಇಲ್ಲಾ.. ಇದೇ ಓವರ್​ನಲ್ಲಿ ಮತ್ತೆರಡು ಸಿಕ್ಸರ್​​ ಚಚ್ಚೇ ಬಿಟ್ರು.

ಕೆಣಕಿದ್ರೆ ಕಥೆ ಮುಗೀತು.. ಯಾರನ್ನೂ ಬಿಡಲ್ಲ..
ಇನ್ನಿಂಗ್ಸ್​ನ ಮೊದಲ 22 ಎಸೆತಗಳಲ್ಲಿ ಒಂದೂ ಬೌಂಡರಿ ಜೈಸ್ವಾಲ್​ ಬ್ಯಾಟ್​ನಿಂದ ಬಂದಿರಲಿಲ್ಲ. ಈ ಬಶೀರ್​ ಕೆಣಕಿದ ಮೇಲೆ 5 ಬೌಂಡರಿ, 3 ಸಿಕ್ಸರ್​ ಚಚ್ಚಿದ್ರು. ಅಂತಿಮವಾಗಿ ಬಶೀರ್​ ಬೌಲಿಂಗ್​ನಲ್ಲಿ ಔಟ್​ ಆದ್ರು. ಔಟ್​​ ಆಗೋಕೂ ಮುನ್ನ ಬಶೀರ್​ಗೆ ನರಕ ದರ್ಶನ ಮಾಡಿಸಿದ್ದಂತೂ ಸತ್ಯ.

ಲೆಜೆಂಡ್​​​ ಆ್ಯಂಡರ್ಸನ್​ಗೆ ಗುಮ್ಮಿದ್ದ ಯಂಗ್​ ಜೈಸ್ವಾಲ್​
ಜೇಮ್​​ ಆ್ಯಂಡರ್ಸ​ನ್​ ಬೌಲಿಂಗ್​ನಲ್ಲಿ ಬ್ಯಾಟಿಂಗ್​ ನಡೆಸೋಕೆ ದಿಗ್ಗಜರೇ ಹೆದರ್ತಾರೆ. ಅಂತಾ ಆ್ಯಂಡರ್ಸನ್​​ಗೆ ರಾಜ್​ಕೋಟ್​​​ ಟೆಸ್ಟ್​​ನಲ್ಲಿ ಈ ಯಂಗ್​​ ಯಶಸ್ವಿ ಜೈಸ್ವಾಲ್​ ಹ್ಯಾಟ್ರಿಕ್ ಸಿಕ್ಸರ್​ ಬಾರಿಸಿದ್ರು. 21 ವರ್ಷದ ಸುದೀರ್ಘ ಕರಿಯರ್​ನಲ್ಲಿ ಫಸ್ಟ್​ ಟೈ ಆ್ಯಂಡರ್ಸನ್​ ಹ್ಯಾಟ್ರಿಕ್​ ಸಿಕ್ಸ್​​ ಹೊಡೆಸಿಕೊಂಡಿದ್ದು ಗೊತ್ತಾ?

ಏ ಆಜ್​​​ ಕಲ್​ ಕಾ ಬಚ್ಚಾ ಹೈ
ಇದೇ ಸರಣಿಯ ರಾಜ್​ಕೋಟ್​​ ಟೆಸ್ಟ್​ ಗೆದ್ದ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ ಹೇಳಿದ್ದ ಈ ಮಾತು ಜೈಸ್ವಾಲ್​ಗಂತೂ ಪರ್ಫೆಕ್ಟ್​ ಆಗಿ ಸೂಟ್​ ಆಗುತ್ತೆ. ಬ್ಯಾಟ್​​ ಎಂಬ ಅಸ್ತ್ರ ಹಿಡಿದ ಮೇಲೆ ಬೌಲರ್​​ನ ದಂಡಿಸೋಕೆ ಹಿಂದೆ ಮುಂದೆ ನೋಡಲ್ಲ. ಅಂತದ್ರಲ್ಲಿ ಕೆಣಕಿದ್ರೆ ಬಿಡ್ತಾರಾ? ಈ ರೈಸಿಂಗ್​​ ಸ್ಟಾರ್​​ ಅಬ್ಬರ ಮುಂದೆಯೂ ಹೀಗೆ ಇರಲಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೆಣಕಿದ್ರೆ ಕಥೆ ಮುಗೀತು ಯಾರನ್ನೂ ಬಿಡಲ್ಲ.. ಕಾಲ್ಕೆದರಿ ಬಂದಿದ್ದ ಬಶೀರ್​​ನ ಚಳಿ ಬಿಡಿಸಿದ ಜೈಸ್ವಾಲ್..!

https://newsfirstlive.com/wp-content/uploads/2024/03/JAISWAL.jpg

Load More