ಎಚ್ಚರ ಯಶಸ್ವಿ ಜೈಸ್ವಾಲ್​..! ಯುವ ಬ್ಯಾಟರ್​ ಎದೆಯಲ್ಲಿ ಶುರುವಾಗಿದೆ ನಡುಕ..!

author-image
Ganesh
Updated On
ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಜೈಸ್ವಾಲ್ ಪ್ಲಾನ್.. ಏನದು..?
Advertisment
  • ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯವೇ ಅಗ್ನಿ ಪರೀಕ್ಷೆ
  • ಅನಧಿಕೃತ ಟೆಸ್ಟ್​ನಲ್ಲಿ ಯಶಸ್ವಿ ಜೈಸ್ವಾಲ್​ ಫ್ಲಾಫ್
  • 4 ಇನ್ನಿಂಗ್ಸ್​.. 110 ರನ್​​ಗೆ ಜೈಸ್ವಾಲ್​ ಸುಸ್ತು

ಇಂಡೋ-ಇಂಗ್ಲೆಂಡ್​​​ ಮೆಗಾ ಫೈಟ್​ಗೆ ಕೌಂಟ್​​ಡೌನ್​ ಶುರುವಾಗಿದೆ. ಈ ಟೆಸ್ಟ್​ ಸರಣಿ ಟೀಮ್ ಇಂಡಿಯಾದ ಸೆನ್ಸೇಷನಲ್ ಓಪನರ್ ಜೈಸ್ವಾಲ್​​ಗೆ ಅಗ್ನಿಪರೀಕ್ಷೆಯ ಕಣವಾಗಿ ಮಾರ್ಪಟ್ಟಿದೆ. ಈ ಸರಣಿಯಲ್ಲಿ ಜೈಸ್ವಾಲ್ ಸೈ ಎನ್ನುವಂತ ಪರ್ಫಾಮೆನ್ಸ್​ ನೀಡದಿದ್ರೆ ಭವಿಷ್ಯವೇ ಆತಂತ್ರಕ್ಕೆ ಸಿಲುಕುವ ಚಾನ್ಸ್​ ಹೆಚ್ಚಿದೆ.

ಎಚ್ಚರ ಜೈಸ್ವಾಲ್..!

ಯಶಸ್ವಿ ಜೈಸ್ವಾಲ್​.. ಟೀಮ್ ಇಂಡಿಯಾದ ಸೆನ್ಸೇಷನ್ ಓಪನರ್. ಟೀಮ್ ಇಂಡಿಯಾಗೆ ಎಂಟ್ರಿ ನೀಡಿದ ಕೆಲ ದಿನಗಳಲ್ಲೇ ಸ್ಟಾರ್ ಆಟಗಾರರ ಪಟ್ಟಿಗೆ ಸೇರಿದ ಆಟಗಾರ. ಡೆಡ್ಲಿ ಬ್ಯಾಟಿಂಗ್​ ಮೂಲಕ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಜೈಸ್ವಾಲ್​, ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ರು. ಆದ್ರೀಗ ಈ ಸ್ಟಾರ್ ಆಟಗಾರನ ಎದೆಯಲ್ಲೇ ನಡುಕ ಶುರುವಾಗಿದೆ. ಸ್ಥಾನ ಉಳಿಸಿಕೊಳ್ಳೋ ಬಿಗ್​ ಚಾಲೆಂಜ್​ ಎದುರಾಗಿದೆ.

ಅನಧಿಕೃತ ಟೆಸ್ಟ್​ನಲ್ಲಿ ಜೈಸ್ವಾಲ್ ಫ್ಲಾಫ್

ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ಸಿದ್ಧತೆಯ ಭಾಗವಾಗಿ ಭಾರತ ಎ ಪರ ಇಂಗ್ಲೆಂಡ್ ಲಯನ್ಸ್ ಎದುರು ಆಡಿದ ಜೈಸ್ವಾಲ್, ಹೇಳಿಕೊಳ್ಳುವಂತಹ ಆಟವಾಡಿಲ್ಲ. ಮೊದಲ ಟೆಸ್ಟ್​ನಲ್ಲಿ ಕ್ರಮವಾಗಿ 24, 64 ರನ್ ಗಳಿಸಿದ್ದ ಜೈಸ್ವಾಲ್​, 2ನೇ ಅನಧಿಕೃತ ಟೆಸ್ಟ್​ನಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 17 ರನ್​ಗಳಿಸಿದ್ರೆ, 2ನೇ ಇನ್ನಿಂಗ್ಸ್​ನಲ್ಲಿ 5 ರನ್​ಗಳಿಸುವಷ್ಟರಲ್ಲೇ ಸುಸ್ತಾದ್ರು. ​4 ಇನ್ನಿಂಗ್ಸ್​ಗಳಿಂದ ಜಸ್ಟ್​ 110 ಗಳಿಸಿದ್ರು. ಜೈಸ್ವಾಲ್​ಗೆ ಹೋಲಿಸಿದ್ರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಬೌಲಿಂಗ್ ಆಲ್​ರೌಂಡರ್ ತನುಷ್ ಕೋಟ್ಯಾನ್​ ಆಡಿದ 2 ಇನ್ನಿಂಗ್ಸ್​ಗಳಲ್ಲೇ 105 ರನ್​ ಗಳಿಸಿದ್ದಾರೆ.

ಇದನ್ನೂ ಓದಿ: RCB ಗೆದ್ದರೆ ಪತಿಗೆ ಇನ್ನೊಂದು ಮದುವೆ ಮಾಡಿಸ್ತೀನಿ ಎಂದಿದ್ದ ಪತ್ನಿಗೆ ಫಜೀತಿ; ಈಗ ಆಗಿದ್ದೇನು..?

publive-image

ಜೈಸ್ವಾಲ್​​ಗೆ ಅಗ್ನಿಪರೀಕ್ಷೆ

2023 ಜುಲೈನಲ್ಲಿ ಡೆಬ್ಯು ಮಾಡಿದ್ದ ಜೈಸ್ವಾಲ್, ಆರಂಭದಲ್ಲಿ ಪ್ರತಿ ಸಿರೀಸ್​​ನಲ್ಲೂ ಸಿಡಿಲಮರಿಯಂತೆ ಘರ್ಜಿಸಿದ್ರು. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್​ ಗವಾಸ್ಕರ್ ಟೆಸ್ಟ್​ ಸರಣಿಗೂ ಮುನ್ನ ನಯಾ ಕಿಂಗ್ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಕೊಂಡಾಡಿದ್ದವು. ಆ ಸರಣಿಯ 10 ಇನ್ನಿಂಗ್ಸ್​ಗಳ ಪೈಕಿ 3 ಇನ್ನಿಂಗ್ಸ್​ಗಳಲ್ಲಿ ಆಡಿದ್ದು ಬಿಟ್ರೆ, ಉಳಿದೆಲ್ಲ ಇನ್ನಿಂಗ್ಸ್​ಗಳಲ್ಲಿ ಜೈಸ್ವಾಲ್​​ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು.

ಜೈಸ್ವಾಲ್ ಸ್ಥಾನದ ಮೇಲೆ ಇಬ್ಬರ ಕಣ್ಣು

ಆಸ್ಟ್ರೇಲಿಯಾದಲ್ಲಿ ವೈಫಲ್ಯ ಕಂಡಿದ್ದ ಜೈಸ್ವಾಲ್​, ಇಂಡಿಯಾ ಎ ಪರವೂ ಫೇಲ್​ ಆಗಿದ್ದೆ ತಡ, ಅಭಿಮನ್ಯು ಈಶ್ವರನ್ ಹಾಗೂ ಸಾಯಿ ಸುದರ್ಶನ್​ರ ಕನಸು ಚಿಗರೊಡೆದಿದೆ. ಒಂದೇ ಒಂದು ಅವಕಾಶ ಸಿಕ್ಕರೂ, ಆ ಅವಕಾಶ ಸದ್ಭಳಕೆ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ ತಕ್ಕಂತೆಯೇ ಅನಧಿಕೃತ ಟೆಸ್ಟ್​ನಲ್ಲಿ ಈಶ್ವರನ್​​ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಡೊಮೆಸ್ಟಿಕ್ ಸರ್ಕ್ಯೂಟ್​ನಲ್ಲಿ ರನ್ ಗಳಿಸಿರೋ ಸಾಯಿ ಸುದರ್ಶನ್, ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ.

ಫಸ್ಟ್​ ಕ್ಲಾಸ್​​ ಕ್ರಿಕೆಟ್​ನಲ್ಲಿ ಈಶ್ವರನ್, ಸುದರ್ಶನ್

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 103 ಪಂದ್ಯಗಳ 177 ಇನ್ನಿಂಗ್ಸ್​ಗಳಿಂದ 7841 ರನ್ ಗಳಿಸಿರುವ ಅಭಿಮನ್ಯು ಈಶ್ವರನ್, 48.70 ಬ್ಯಾಟಿಂಗ್ ಅವರೇಜ್​​ ಹೊಂದಿದ್ದಾರೆ. 27 ಶತಕ, 31 ಅರ್ಧಶತಕ ಸಿಡಿಸಿದ್ದಾರೆ. ಸಾಯಿ ಸುದರ್ಶನ್, 29 ಪಂದ್ಯಗಳ 49 ಇನ್ನಿಂಗ್ಸ್​ಗಳಿಂದ 39.93ರ ಬ್ಯಾಟಿಂಗ್ ಅವರೇಜ್​ನಲ್ಲಿ 1957 ರನ್ ಗಳಿಸಿದ್ದಾರೆ. 7 ಶತಕ, 5 ಅರ್ಧಶತಕ ಗಳಿಸಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್.. ಜೂನ್ 20 ದ್ರಾವಿಡ್, ಗಂಗೂಲಿ, ಕೊಹ್ಲಿಗೆ ಮರೆಯಲಾಗದ ದಿನ..! ಏನದು?

publive-image

ಇಂಗ್ಲೆಂಡ್​ನ ಕೌಂಟಿಯಲ್ಲಿ ಆಡಿರುವ ಅನುಭವವೂ ಹೊಂದಿರುವ ಸಾಯಿ ಸುದರ್ಶನ್, ಅಲ್ಲೂ ರನ್ ಗಳಿಸಿದ್ದಾರೆ. ಹೀಗಾಗಿ ಸಿಗೋ ಒಂದೊಂದು ಅವಕಾಶ ಎನ್​ಕ್ಯಾಶ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ ವೈಫಲ್ಯ ಮುಂದುವರೆದ್ರೆ ಮ್ಯಾನೇಜ್​ಮೆಂಟ್​​​ ಈಶ್ವರನ್​ ಅಥವಾ ಸುದರ್ಶನ್​ಗೆ ಚಾನ್ಸ್​ ನೀಡೋ ಸಾಧ್ಯತೆಯಿದೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಯಶಸ್ವಿ ಜೈಸ್ವಾಲ್​ ರನ್ ಹೊಳೆ ಹರಿಸಿದ್ದಾರೆ ನಿಜ. ಭಾರತ ಬಿಟ್ಟು, ಸೌತ್​ ಆಫ್ರಿಕಾ, ಆಸ್ಟ್ರೇಲಿಯಾದಂತ ಟಫ್​ ಕಂಡೀಷನ್ಸ್​ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಇದೀಗ ಇಂಗ್ಲೆಂಡ್​ನಲ್ಲಿ ಎದುರಾಗಲಿರುವ ಕಠಿಣ ಸವಾಲನ್ನ ಹೇಗೆ ಮೆಟ್ಟಿ ನಿಲ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ಇದನ್ನೂ ಓದಿಟೀಮ್ ಇಂಡಿಯಾಗೆ ಬಿಗ್ ಚಾಲೆಂಜ್.. ಕ್ಯುರೇಟರ್‌ ಬಿಚ್ಚಿಟ್ರು ಪಿಚ್​​ನ ಸೀಕ್ರೆಟ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment