Advertisment

ODI ಕ್ರಿಕೆಟ್​​ಗೆ ಮರಿ ಸೆಹ್ವಾಗ್ ಎಂಟ್ರಿ.. ಟೀಂ ಇಂಡಿಯಾಗೆ ಬಂತು ಆನೆಬಲ

author-image
Ganesh
Updated On
ಟೀಂ ಇಂಡಿಯಾಗೆ ಸಿಕ್ಕಿದ್ದಾನೆ ನಯಾ ಮ್ಯಾಚ್ ಫಿನಿಷರ್.. ಇವರು ಇದ್ದರೆ ಚಿಂತೆ ಬೇಡ!
Advertisment
  • ಟೆಸ್ಟ್​ ಆಯ್ತು.. ಟಿ20 ಆಯ್ತು... ಏಕದಿನಕ್ಕೆ ಸಿಡಿಲಮರಿ
  • ಚಾಂಪಿಯನ್ಸ್​ ಟ್ರೋಫಿ, ಇಂಗ್ಲೆಂಡ್ ಸರಣಿಯಲ್ಲಿ ಸ್ಥಾನ..?
  • ಈ ಆಟಗಾರನ ಆಯ್ಕೆ ಹಿಂದಿನ ಲೆಕ್ಕಾಚಾರ ಏನು?

ಯಶಸ್ವಿ ಜೈಸ್ವಾಲ್.. ಟೀಮ್ ಇಂಡಿಯಾದ ಸೆನ್ಸೇಷನಲ್ ಓಪನರ್.. ಟಿ20, ಟೆಸ್ಟ್ ತಂಡಗಳಲ್ಲಿ ಕಮಾಲ್ ಮಾಡಿರುವ ಜೈಸ್ವಾಲ್​ಗೆ ಏಕದಿನ ತಂಡದ ಬಾಗಿಲು ಇವರೆಗೆ ತೆರೆದಿರಲಿಲ್ಲ. ಟೀಮ್​ ಇಂಡಿಯಾಗೆ ಕಾಲಿಟ್ಟ ಒಂದೂವರೆ ವರ್ಷಗಳ ಬಳಿಕ ಮುಂಬೈಕರ್​ಗೆ ಅದೃಷ್ಟ ಖುಲಾಯಿಸ್ತಿದೆ.

Advertisment

ಬಾರ್ಡರ್ ಗವಾಸ್ಕರ್ ಟೆಸ್ಟ್​ನಲ್ಲಿ ಬೊಂಬಾಟ್ ಆಟವಾಡಿದ್ದ ಜೈಸ್ವಾಲ್​ಗೆ, ಬಿಸಿಸಿಐ ಬಂಪರ್ ಗಿಫ್ಟ್ ನೀಡಲು ರೆಡಿಯಾಗಿದೆ. ಮುಂದಿನ ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಹಾಗೂ ಚಾಂಪಿಯನ್ಸ್​ ಟ್ರೋಫಿ ತಂಡದಲ್ಲಿ ಜೈಸ್ವಾಲ್​ಗೆ ಚಾನ್ಸ್​ ನೀಡಲು ಬಿಸಿಸಿಐ ಮುಂದಾಗಿದೆ. ವರ್ಷಾರಂಭದಲ್ಲೇ ಮರಿ ಸೆಹ್ವಾಗ್​​​​​ಗೆ ಗುಡ್​ನ್ಯೂಸ್ ನೀಡಲು ರೆಡಿಯಾಗಿರೋ ಸೆಲೆಕ್ಷನ್​ ಕಮಿಟಿ, ಬ್ಯಾಕ್ ಆಪ್​ ಓಪನರ್ ಆಗಿ ಚೊಚ್ಚಲ ಕರೆ ನೀಡಲು ಚಿಂತಿಸಿದೆ. ಟೀಮ್ ಇಂಡಿಯಾದ ಏಕದಿನ ಫಾರ್ಮೆಟ್​ಗೆ ನಯಾ ಓಪನರ್​ನ ಪರಿಚಯಿಸಲು ಸಜ್ಜಾಗಿದೆ.

ಇದನ್ನೂ ಓದಿ:ಚಿನ್ನದ ಬೆಲೆಯಲ್ಲಿ ಸತತ ಕುಸಿತ; ಬಂಗಾರ ಖರೀದಿಗೆ ಇದು ಸೂಕ್ತ ಸಮಯ

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಈವರೆಗೆ 19 ಟೆಸ್ಟ್​​ ಪಂದ್ಯಗಳನ್ನಾಡಿದ್ದು, 1798 ರನ್​ ಚಚ್ಚಿದ್ದಾರೆ. ಇದ್ರಲ್ಲಿ ಅಮೋಘ 4 ಶತಕ ಹಾಗೂ 10 ಅರ್ಧಶತಕ ಸೇರಿಕೊಂಡಿವೆ. ಟಿ20 ಕ್ರಿಕೆಟ್​ನಲ್ಲಿ ಜೈಸ್ವಾಲ್​ ರನ್ ಭರಾಟೆ ಜೋರಾಗಿದೆ. ಆಡಿದ 23 ಪಂದ್ಯಗಳಿಂದ 723 ರನ್​ ಗಳಿಸಿದ್ದಾರೆ. 5 ಅರ್ಧಶತಕದ ಜೊತೆ 1 ಸೆಂಚುರಿ ಮೂಡಿ ಬಂದಿದೆ.

ಜೈಸ್ವಾಲ್​ ಬೆಸ್ಟ್​ ಏಕೆ..?

  • ಅಗ್ರೆಸ್ಸಿವ್​ ಬ್ಯಾಟರ್​​, ಪವರ್​​ ಪ್ಲೇ ಸದುಪಯೋಗ
  • ಲೆಫ್ಟ್​-ರೈಟ್​ ಕಾಂಬಿನೇಷನ್​​ನಿಂದ ಒತ್ತಡ ಹೇರಬಹುದು
  • ಜೈಸ್ವಾಲ್​​ ಆಡಿದ್ರೆ ರೋಹಿತ್ ಒತ್ತಡ ಕಮ್ಮಿ ಆಗಲಿದೆ
  • ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯವಿದೆ
  • ನಿರ್ಭೀತಿಯಿಂದ ಆಡಿ ಪಂದ್ಯ ಗತಿ ಬದಲಿಸಬಲ್ಲರು
Advertisment

ಈ ಕಾರಣಗಳಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ಯಾಪ್ಟನ್ ರೋಹಿತ್ ಜೊತೆ ಜೈಸ್ವಾಲ್​​ ಇನ್ನಿಂಗ್ಸ್ ಆರಂಭಿಸಿದ್ರೆ ತಂಡಕ್ಕೆ ಹೆಚ್ಚು ಲಾಭವಿದೆ. ಈ ಸತ್ಯವನ್ನ ಟೀಮ್ ಮ್ಯಾನೇಜ್​ಮೆಂಟ್​​​​​​ ಅರ್ಥ ಮಾಡಿಕೊಂಡು ಮಣೆಹಾಕಲು ಮುಂದಾಗ್ತಿದೆ. ಜೊತೆಗೆ ಯಶಸ್ವಿ ಜೈಸ್ವಾಲ್​ ಬುಲಾವ್ ಹಿಂದೆ ಭವಿಷ್ಯದ ಲೆಕ್ಕಾಚಾರವೂ ಇದೆ. 37 ವರ್ಷದ ರೋಹಿತ್​​ ಶರ್ಮಾ, ಚಾಂಪಿಯನ್ಸ್​ ಟ್ರೋಪಿ ಬಳಿಕ ತೆರೆಮರೆಗೆ ಸರಿಯೋ ಸಾಧ್ಯತೆ ದಟ್ಟವಾಗಿದೆ. ಈ ಕಾರಣಕ್ಕಾಗಿಯೇ ಜೈಸ್ವಾಲ್​ನ ಬೆಳೆಸುವ ಲೆಕ್ಕಾಚಾರ ಬಿಗ್​ಬಾಸ್​ಗಳದ್ದಾಗಿದೆ.

ಇದನ್ನೂ ಓದಿ:BBK11; ಧನರಾಜ್​​ಗೆ ಬಿಗ್ ಶಾಕ್ ಕೊಟ್ಟ ಮಂಜು, ಗೌತಮಿ.. ಫಿನಾಲೆ ಟಿಕೆಟ್​​ನಿಂದ ಔಟ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment