/newsfirstlive-kannada/media/post_attachments/wp-content/uploads/2024/10/ROHIT_BUNRHA_KOHLI.jpg)
ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ಯಾರು? ಈ ಪ್ರಶ್ನೆಗೆ ಸರ್ಪ್ರೈಸ್ ಉತ್ತರ ಬಂದಿದೆ. ಚಾಂಪಿಯನ್ಸ್ ಟ್ರೋಫಿ ಅಂತ್ಯದೊಂದಿಗೆ ರೋಹಿತ್ ಶರ್ಮಾ ಯುಗ ಟೀಮ್ ಇಂಡಿಯಾದಲ್ಲಿ ಅಂತ್ಯವಾಗಲಿದ್ದು, ನೂತನ ನಾಯಕನ ನೇಮಕಕ್ಕೆ ಸಿದ್ಧತೆ ಆರಂಭವಾಗಿದೆ. ಅಚ್ಚರಿಯೆಂಬಂತೆ ಯಂಗ್ಗನ್ ಯಶಸ್ವಿ ಜೈಸ್ವಾಲ್ ಹೆಸ್ರು ಈ ರೇಸ್ನಲ್ಲೂ ಮುಂಚೂಣಿಯಲ್ಲಿ ಕೇಳಿ ಬಂದಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಪೋಸ್ಟ್ ಮಾರ್ಟಂ ಪ್ರಕ್ರಿಯೆ ಅಂತ್ಯಕಂಡಿದೆ. ಇತ್ತೀಚೆಗೆ ನಡೆದ ಬಿಸಿಸಿಐ ಸಭೆಯಲ್ಲಿ ಹಲವು ಬಿಸಿಬಿಸಿ ಚರ್ಚೆಗಳು ನಡೆದಿವೆ. ಇದೇ ಮೀಟಿಂಗ್ನಲ್ಲಿ ನೂತನ ನಾಯಕನ ಹುಡುಕಾಟಕ್ಕೂ ಮುನ್ನುಡಿ ಬರೆದಿದೆ. ಇಷ್ಟು ದಿನ ಜಸ್ಪ್ರಿತ್ ಬೂಮ್ರಾ, ಕೆ.ಎಲ್ ರಾಹುಲ್, ರಿಷಭ್ ಪಂತ್, ಶುಭ್ಮನ್ ಗಿಲ್ ಹೆಸರು ಭವಿಷ್ಯದ ನಾಯಕನ ರೇಸ್ನಲ್ಲಿದ್ದವು. ಆದ್ರೀಗ, ಅಚ್ಚರಿ ಎಂಬಂತೆ ಯಾರೂ ನಿರೀಕ್ಷೆ ಮಾಡಿರದ ಹೆಸರು, ಇದೀಗ ನಾಯಕನ ರೇಸ್ನಲ್ಲಿ ಮುಂಚೂಣಿಗೆ ಬಂದಿದೆ.
ಆಸಿಸ್ ಪ್ರವಾಸದ ಸೋಲಿನೊಂದಿಗೆ ಟೆಸ್ಟ್ ಸರಣಿ ಅಂತ್ಯದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ನಾಯಕತ್ವ ಯುಗ ಅಂತ್ಯವಾಗಿದೆ. ಜೂನ್ನಲ್ಲಿ ನಡೆಯೋ ಇಂಗ್ಲೆಂಡ್ ಸರಣಿ ವೇಳೆಗೆ ಟೆಸ್ಟ್ ಫಾರ್ಮೆಟ್ಗೆ ಹೊಸ ನಾಯಕನನ್ನ ನೇಮಿಸಲು ಬಿಸಿಸಿಐ ವಲಯದಲ್ಲಿ ಚರ್ಚೆ ನಡೀತಿದೆ. ಬಹುತೇಕ ವೇಗಿ ಜಸ್ಪ್ರಿತ್ ಬೂಮ್ರಾಗೆ ಪಟ್ಟ ಕಟ್ತಾರೆ ಅನ್ನೋ ನಿರೀಕ್ಷೆ ಎಲ್ಲರದ್ದಾಗಿದೆ. ಆದ್ರೆ, ಇಂಜುರಿ ಸಮಸ್ಯೆ ಎದುರಾಗಿರೋದ್ರಿಂದ ಬೂಮ್ರಾಗೆ ನಾಯಕತ್ವ ನೀಡಲು ಬಿಸಿಸಿಐ ವಲಯದಲ್ಲೇ ವಿರೋಧ ವ್ಯಕ್ತವಾಗ್ತಿದೆ. ಬೂಮ್ರಾ ಬದಲು ಯುವ ಆಟಗಾರರ ಹೆಗಲಿದೆ ಜವಾಬ್ದಾರಿ ನೀಡಲು ಚಿಂತನೆ ನಡೆದಿದೆ.
ಭವಿಷ್ಯದ ನಾಯಕನ ರೇಸ್ನಲ್ಲಿ 23 ವರ್ಷದ ಯಂಗ್ಗನ್.!
ಯಶಸ್ವಿ ಜೈಸ್ವಾಲ್, ಟೀಮ್ ಇಂಡಿಯಾದ ನಯಾ ಸೆನ್ಸೇಷನ್.! ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯೂ ಮಾಡಿದ ಒಂದೇ ವರ್ಷಕ್ಕೆ ವಿಶ್ವ ಕ್ರಿಕೆಟ್ ಲೋಕದ ಸಖತ್ ಸೌಂಡ್ ಮಾಡಿದ ಹೆಸರಿದು. ಭಾರತದಲ್ಲಿ ಮಾತ್ರವಲ್ಲ.. ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾದಲ್ಲೂ ತನ್ನ ಫಿಯರ್ಲೆಸ್ ಬ್ಯಾಟಿಂಗ್ನಿಂದ ಯಶಸ್ವಿ ಜೈಸ್ವಾಲ್ ಮಿಂಚಿದ್ದಾರೆ. ಜೈಸ್ವಾಲ್ ಜಬರ್ದಸ್ತ್ ಆಟಕ್ಕೆ ಕ್ರಿಕೆಟ್ ಫ್ಯಾನ್ಸ್ ಮಾತ್ರವಲ್ಲ.. ಟೀಮ್ ಮ್ಯಾನೇಜ್ಮೆಂಟ್, ಸೆಲೆಕ್ಟರ್ಸ್ ಕೂಡ ಕ್ಲೀನ್ಬೋಲ್ಡ್ ಆಗಿದ್ದಾರೆ. ಸಾಲಿಡ್ ಆಟದಿಂದ ಇಂಪ್ರೆಸ್ ಮಾಡಿರೋ ಜೈಸ್ವಾಲ್, ಇದೀಗ ನಾಯಕನ ರೇಸ್ಗೂ ಎಂಟ್ರಿ ಕೊಟ್ಟಿದ್ದಾರೆ.
ಯಶಸ್ವಿ ಜೈಸ್ವಾಲ್ ಬೆನ್ನಿಗೆ ನಿಂತ ಕೋಚ್ ಗಂಭೀರ್.!
ರೋಹಿತ್ ಶರ್ಮಾ ಬಳಿಕ ಮುಂದಿನ ನಾಯಕ ಯಾರಾಗಬೇಕು ಎಂಬ ಚರ್ಚೆ ಬಿಸಿಸಿಐ ಸಭೆಯಲ್ಲಿ ನಡೆದಿದೆ. ಈ ಪ್ರಶ್ನೆ ಎದುರಾದಾಗ ಹೆಡ್ ಕೋಚ್ ಗೌತಮ್ ಗಂಭೀರ್, ಯಶಸ್ವಿ ಜೈಸ್ವಾಲ್ ಎಂಬ ಆನ್ಸರ್ ಕೊಟ್ಟಿದ್ದಾರೆ. 23 ವರ್ಷದ ಜೈಸ್ವಾಲ್ಗೆ ನಾಯಕತ್ವ ನೀಡಿದ್ರೆ, ಲಾಂಗ್ ಟೈನ್ ರನ್ ಮಾಡಬಹುದು ಅನ್ನೋದು ಗಂಭೀರ್ ಅಭಿಪ್ರಾಯವಾಗಿದೆ. ಬ್ಯಾಟಿಂಗ್ನಲ್ಲಿ ಈಗಾಗಲೇ ಜೈಸ್ವಾಲ್ ಸಾಮರ್ಥ್ಯ ನಿರೂಪಿಸಿದ್ದಾರೆ. ಗೈಡ್ ಮಾಡಲು ತಂಡದಲ್ಲಿ ಸೀನಿಯರ್ಸ್ ಇರೊದ್ರಿಂದ ನಾಯಕತ್ವ ಜವಾಬ್ದಾರಿ ಜೈಸ್ವಾಲ್ಗೆ ಹೊರೆಯಾಗಲ್ಲ ಅನ್ನೋದು ಗಂಭೀರ್ ಅಭಿಪ್ರಾಯವಾಗಿದೆ.
ಜೈಸ್ವಾಲ್ ಮಾತ್ರವಲ್ಲ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಹೆಸರು ಕೂಡ ಭವಿಷ್ಯದ ನಾಯಕನ ಹುದ್ದೆಗೆ ಚರ್ಚೆಯಾಗಿದೆ. ಬಹಳ ಹಿಂದೇ ರಿಷಭ್ ಪಂತ್ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿದ್ರು. ಆದ್ರೆ, ಆ್ಯಕ್ಸಿಡೆಂಟ್ಗೆ ತುತ್ತಾಗಿ ತಂಡದಿಂದ ಹೊರಬಿದ್ದ ಬಳಿಕ ಬೇರೆಲ್ಲಾ ಆಟಗಾರರು ರೇಸ್ಗೆ ಬಂದಿದ್ರು. ಇದೀಗ ಸಾಲಿಡ್ ಕಮ್ಬ್ಯಾಕ್ ಮಾಡಿ ಮಿಂಚಿರುವ ರಿಷಭ್ ಪಂತ್ ಮತ್ತೆ ಕ್ಯಾಪ್ಟನ್ಸಿ ಪಟ್ಟದ ಆಂಕಾಕ್ಷಿಗಳ ಲಿಸ್ಟ್ಗೆ ಎಂಟ್ರಿ ಕೊಟ್ಟಿದ್ದಾರೆ.
ಜೈಸ್ವಾಲ್ಗೆ ಹೋಲಿಸಿದ್ರೆ, ರಿಷಭ್ ಪಂತ್ ನಾಯಕತ್ವದ ಅನುಭವ ಹೆಚ್ಚಿದೆ. ಈಗಾಗಲೇ ಐಪಿಎಲ್ನಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಹಂಗಾಮಿ ನಾಯಕನಾಗಿ ಟೀಮ್ ಇಂಡಿಯಾವನ್ನೂ ಮನ್ನಡೆಸಿದ್ದಾರೆ. ಆಟದ ಸಾಮರ್ಥ್ಯದ ಜೊತೆಗೆ ನಾಯಕತ್ವದ ಅನುಭವವಿರೋ ಪಂತ್, ಬಗ್ಗೆಯೂ ಹೆಚ್ಚು ಚರ್ಚೆಯಾಗಿದೆ.
ಇದನ್ನೂ ಓದಿ:ತುಂಡಾಗಿ ಬೇರ್ಪಟ್ಟಿದ್ದ ತಲೆಯ ಮರು ಜೋಡಣೆ; ಇಸ್ರೇಲ್ ವೈದ್ಯರ ಯಶಸ್ವಿ ಶಸ್ತ್ರ ಚಿಕಿತ್ಸೆಯೇ ‘ಮಿರಾಕಲ್’
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ