/newsfirstlive-kannada/media/post_attachments/wp-content/uploads/2024/02/TEAM-INDIA-24.jpg)
ಟೀಮ್ ಇಂಡಿಯಾ ಉಪನಾಯಕ ಶುಭ್ಮನ್ ಗಿಲ್ ಶ್ರೀಲಂಕಾ ಎದುರಿನ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ ಕಾಣಿಸಿಕೊಂಡ್ರು. 19ರ ಎವರೇಜ್ನಲ್ಲಿ ಜಸ್ಟ್ 57 ರನ್ ಗಳಿಸಿ ಟೀಕಾಕಾರರ ಬಾಯಿಗೆ ಆಹಾರವಾದ್ರು. ಒಂದೆಡೆ ಗಿಲ್ ಹೀಗೆ ಲಂಕಾ ಸರಣಿಯಲ್ಲಿ ಮುಗ್ಗರಿಸ್ತಿದ್ರೆ ಜೈಸ್ವಾಲ್ ಸಿಕ್ಕ ಅವಕಾಶಗಳಲ್ಲಿ ಲೀಲಾಜಾಲವಾಗಿ ರನ್ ಗಳಿಸ್ತಿದ್ದಾರೆ. ಫೈರಿ ಲೆಫ್ಟಿ ಬ್ಯಾಟರ್ಗೆ ಏಕದಿನದಲ್ಲಿ ಕಣಕ್ಕಿಳಿಯುವ ಭಾಗ್ಯ ಸಿಕ್ಕಿಲ್ಲ ನಿಜ. ಆದರೆ ಟೆಸ್ಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ಇಂಪ್ರೆಸ್ಸಿವ್ ಆಟವಾಡಿದ್ದಾರೆ.
ಯಶಸ್ವಿ ಜೈಸ್ವಾಲ್ ಈವರೆಗೆ 9 ಟೆಸ್ಟ್ ಪಂದ್ಯಗಳನ್ನಾಡಿದ್ದು, 1028 ರನ್ ಚಚ್ಚಿದ್ದಾರೆ. ಇದ್ರಲ್ಲಿ ಅಮೋಘ 3 ಶತಕ ಹಾಗೂ 4 ಅರ್ಧಶತಕ ಸೇರಿಕೊಂಡಿವೆ. ಇನ್ನೂ ಟಿ20 ಕ್ರಿಕೆಟ್ನಲ್ಲಿ ಜೈಸ್ವಾಲ್ ರನ್ ಭರಾಟೆ ಜೋರಾಗಿದೆ. ಆಡಿದ 23 ಪಂದ್ಯಗಳಿಂದ 723 ರನ್ ಗಳಿಸಿದ್ದಾರೆ. 5 ಅರ್ಧಶತಕದ ಜೊತೆ 1 ಸೆಂಚುರಿ ಮೂಡಿ ಬಂದಿದೆ. ಬರೀ ಈ ಇಂಪ್ರೆಸ್ಸಿವ್ ಟ್ರ್ಯಾಕ್ ರೆಕಾರ್ಡ್ ಅಷ್ಟೇ ಅಲ್ಲ. ಮುಂಬರೋ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಿಲ್ ಬದಲು ಜೈಸ್ವಾಲ್ ಆರಂಭಿಕನಾಗಿ ಆಡಿದ್ರೆ ತಂಡಕ್ಕೆ ಹೆಚ್ಚು ಲಾಭವಾಗಲಿದೆ.
ಜೈಸ್ವಾಲ್ ಉತ್ತಮ ಆಯ್ಕೆ ಏಕೆ..?
ಯಶಸ್ವಿ ಜೈಸ್ವಾಲ್ ಬೇಸಿಕಲಿ ಅಗ್ರೆಸ್ಸಿವ್ ಬ್ಯಾಟರ್. ಬಿರುಸಿನ ಆಟವಾಡಿ ಪವರ್ ಪ್ಲೇ ಅನ್ನ ಸದುಪಯೋಗ ಮಾಡಿಕೊಳ್ಳಬಲ್ಲರು. ಅಲ್ಲದೇ ಕ್ಯಾಪ್ಟನ್ ರೊಹಿತ್ ಜೊತೆ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ರೆ ಲೆಫ್ಟ್-ರೈಟ್ ಕಾಂಬಿನೇಷನ್ನಿಂದ ಎದುರಾಳಿ ಮೇಲೆ ಒತ್ತಡ ಹೇರಲು ಸಹಕಾರಿ ಆಗಲಿದೆ. ಜೈಸ್ವಾಲ್ ವೇಗದ ಆಟಕ್ಕೆ ಹೆಚ್ಚು ಒತ್ತು ನೀಡುವುದರಿಂದ ರೋಹಿತ್ ಮೇಲಿನ ಒತ್ತಡ ಸಹ ಕಮ್ಮಿ ಆಗಲಿದೆ. ದಂಡಂ ದಶಗುಣಂ ಆಟವಾಡುವ ಜೈಸ್ವಾಲ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿ ಕೊಡಬಲ್ಲರು. ಅಲ್ಲದೇ ಫಿಯರ್ಲೆಸ್ ಆಟವಾಡಿ ಯಾವುದೇ ಕ್ಷಣದಲ್ಲಿ ಪಂದ್ಯದ ಮೂಮೆಂಟ್ ಅನ್ನ ಬದಲಿಸುವ ಕೆಪಾಸಿಟಿ ಹೊಂದಿದ್ದಾರೆ.
ಈ ಎಲ್ಲಾ ಕಾರಣಗಳಿಂದ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ಯಾಪ್ಟನ್ ರೋಹಿತ್ ಜೊತೆ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದ್ರೆ ತಂಡಕ್ಕೆ ಹೆಚ್ಚು ಲಾಭವಿದೆ. ಈ ಸತ್ಯವನ್ನ ಟೀಮ್ ಮ್ಯಾನೇಜ್ಮೆಂಟ್ ಅರ್ಥ ಮಾಡಿಕೊಳ್ಳುತ್ತಾ ? ಗಿಲ್ಗೆ ಕೊಕ್ ಕೊಟ್ಟು ಜೈಸ್ವಾಲ್ಗೆ ಬಹುಪರಾಕ್ ಅನ್ನುತ್ತಾ? ಎಂಬ ಚರ್ಚೆ ಜೋರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ