ರಚನಾ ಇನ್ನು ಸಿಂಗಲ್ ಅಲ್ಲ.. ಸಪ್ತಪದಿ ತುಳಿದಿರೋದು ಯಾರ ಜೊತೆ..?

author-image
admin
Updated On
ರಚನಾ ಇನ್ನು ಸಿಂಗಲ್ ಅಲ್ಲ.. ಸಪ್ತಪದಿ ತುಳಿದಿರೋದು ಯಾರ ಜೊತೆ..?
Advertisment
  • ‘ಕಮಲಿ’ ಧಾರಾವಾಹಿ ಖ್ಯಾತಿಯ ರಚನಾಗೆ ಮದ್ವೆ ಭಾಗ್ಯ
  • ಪ್ರೀತಿಸಿದ ಹುಡುಗನನ್ನೇ ಮದುವೆಯಾದ ನಟಿ ಯಶಸ್ವಿನಿ ರವೀಂದ್ರಗೆ
  • ಯಶಸ್ವಿನಿ ರವೀಂದ್ರ ರಿಯಲ್ ಲೈಫ್​ನಲ್ಲಿ ಹೊಸತೊಂದು ಚಾಪ್ಟರ್

ಕನ್ನಡ ಕಿರುತೆರೆಯ ಕಲಾವಿದರು ಒಬ್ಬರಾದ ಮೇಲೆ ಒಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗ ಅದೇ ಸಾಲಿನಲ್ಲಿ ಮತ್ತೋರ್ವ ನಟಿ ಕೂಡ ಇದ್ದಾರೆ. ಕಮಲಿ ಧಾರಾವಾಹಿಯ ಖ್ಯಾತಿಯ ರಚನಾ ಪಾತ್ರದ ಯಶಸ್ವಿನಿ ರವೀಂದ್ರ ಅವ್ರು ಮೊನ್ನೆ ಮೊನ್ನೆಯಷ್ಟೇ ಸಪ್ತಪದಿ ತುಳಿದಿದ್ದಾರೆ.

publive-image

ಹೌದು, ನಟಿ ಯಶಸ್ವಿನಿ ರವೀಂದ್ರು ಕಮಲಿ ಧಾರಾವಾಹಿಯ ಮೂಲಕ ಒಳ್ಳೆ ಫೇಮ್ ಪಡೆದುಕೊಂಡಿದ್ದಾರೆ. ರಿಷಿಯ ತಂಗಿ ಪಾತ್ರದಲ್ಲಿ ಅದ್ಭತವಾಗಿ ನಟಿಸಿ ಎಲ್ಲರ ಕರುನಾಡ ಮನ ಗೆದಿದ್ದಾರೆ ಯಶು. ಈಗ ಅವ್ರ ರಿಯಲ್ ಲೈಫ್​ನಲ್ಲಿ ಹೊಸತೊಂದು ಚಾಪ್ಟರ್ ತೆಗೆದುಕೊಂಡಿದೆ. ಯಶು ತಾವು ಇಷ್ಟಪಟ್ಟ ಹುಡಗನ ಜೊತೆ ಮೊನ್ನೆಯಷ್ಟೆ ಸಪ್ತಪದಿ ತುಳಿದು ಪ್ರೀತಿ ಎಂಬ ಮೂರು ಗಂಟಿನಲ್ಲಿ ಬಂಧಿಯಾಗಿದ್ದಾರೆ.

publive-image

ಯಶಸ್ವಿನಿ ಅವರು ತಾನು ಮೆಚ್ಚಿದ ಚೇತನ್ ಎಂಬುವವರನ್ನು ಕೈಹಿಡಿದಿದ್ದಾರೆ. ತುಂಬಾ ಕ್ಲೋಸ್ ರಿಲೇಟಿವ್ಸ್​ ಹಾಗೂ ಗುರು ಹಿರಿಯರು ನಿಶ್ಚಯಿಸಿದ ಮಹೂರ್ತದಲ್ಲಿ ಇಬ್ಬರು ಬೆಸುಗೆಯಾಗಿದ್ದಾರೆ. ಒಂದೊಳ್ಳೆ ರೆಸಾರ್ಟ್​ನಲ್ಲಿ ತಮಗೆ ಇಷ್ಟ ಆಗೋ ರೀತಿಯೇ ಇಬ್ಬರು ಮದುವೆಯಾಗಿದ್ದಾರೆ. ಮದುವೆ ಹೆಣ್ಣು ಯಶಸ್ವಿನಿ ಅವ್ರ ಮುಖದಲ್ಲಿ ಮಂದಹಾಸ ಬೊಗಸೆಯಷ್ಟು ತುಂಬಿ ತುಳುಕಿದೆ. ತಾನು ಇಷ್ಟಪಟ್ಟ ಹುಡಗನ ಜೊತೆ ಮದುವೆ ಆದ ನಂತರ ನೆಮ್ಮದಿಯ ನಗೆ ಬೀರಿದ್ದಾರೆ.

publive-image

ಒಟ್ಟಿನಲ್ಲಿ, ಕನ್ನಡ ಕಿರುತೆರೆಯ ಕಲಾವಿದರು ತಾವು ಮೆಚ್ಚಿದ ಹುಡುಗ-ಹುಡುಗಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಈಗ ಅದ್ರಲ್ಲಿ ಯಶಸ್ವಿನಿ ಕೂಡ ಒಬ್ಬರು. ನಾವು ಕೂಡ ಇವರಿಬ್ಬರಿಗೆ ಮನಸಾರೆ ಹರಿಸೋಣ. ಹ್ಯಾಪಿ ಮ್ಯಾರೀಡ್ ಲೈಫ್ ಯಶಸ್ವಿನಿ ಹಾಗೂ ಚೇತನ್.

publive-image

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ಫಿಲ್ಮಿ ಫಸ್ಟ್​' ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

Advertisment