ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕನ್ಯಾಕುಮಾರಿ ಸೀರಿಯಲ್ ಖ್ಯಾತ​ ನಟ ಯಶ್ವಂತ್ ಗೌಡ; ಏನದು?

author-image
Veena Gangani
Updated On
ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕನ್ಯಾಕುಮಾರಿ ಸೀರಿಯಲ್ ಖ್ಯಾತ​ ನಟ ಯಶ್ವಂತ್ ಗೌಡ; ಏನದು?
Advertisment
  • ಹೊಸ ಧಾರಾವಾಹಿಗಳು ಲಾಂಚ್​ ಆಗೋಕೆ ಸಾಲುಗಟ್ಟಿವೆ
  • ಕನ್ಯಾಕುಮಾರಿ ಧಾರಾವಾಹಿ ಮೂಲಕ ಫೇಮಸ್​ ಆಗಿದ್ದ ನಟ
  • ನಟಿ ನಿಶಾ ಜೊತೆ ಲೀಡ್​ ಪಾತ್ರದಲ್ಲಿ ಅಭಿನಯಿಸಿದ ಯಶ್ವಂತ್ ಗೌಡ

ನವೆಂಬರ್​ನಲ್ಲಿ ಹೊಸ ಹೊಸ ಧಾರಾವಾಹಿಗಳು ಲಾಂಚ್​ ಆಗೋಕೆ ಸಾಲುಗಟ್ಟಿವೆ. ಈ ಸಾಲಿಗೆ ಮತ್ತೊಂದು ಬ್ಯೂಟಿಫುಲ್​ ಲವ್​ ಸ್ಟೋರಿ ಸೇರ್ಪಡೆ ಆಗ್ತಿದೆ. ಕನ್ಯಾಕುಮಾರಿ ಧಾರಾವಾಹಿಯಲ್ಲಿ ಚರಣ್​ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟ ಯಶ್ವಂತ್ ಗೌಡ​ ಮತ್ತೆ ಹೀರೋ ಆಗಿ ಕನ್ನಡದಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ.

ಇದನ್ನೂ ಓದಿ:ಒಂದೇ ಕಲ್ಲಿನಲ್ಲಿ 3 ಹಕ್ಕಿ ಹೊಡೆಯೋ ಪ್ಲಾನ್​​.. ಪಂತ್​ಗೆ ಆರ್​​ಸಿಬಿಯಿಂದ ಬಿಗ್​ ಆಫರ್

publive-image

ಹೌದು, ಕನ್ಯಾಕುಮಾರಿ ಧಾರಾವಾಹಿ ನಂತರ ಪರಭಾಷೆಯ ಅವಕಾಶ ಯಶವಂತ್​ ಅವರಿಗೆ ಅರಸಿ ಬಂದಿತ್ತು. "ಅಮ್ಮಯ್ಯಗಾರು" ಧಾರಾವಾಹಿ ಮೂಲಕ ತೆಲುಗಿಗೆ ಕಾಲಿಟ್ಟಿದ್ರು. ನಿಶಾ ಹಾಗೂ ಯಶ್ವಂತ್ ಗೌಡ​ ಲೀಡ್​ ಪಾತ್ರದಲ್ಲಿ ಅಭಿನಯಿಸಿದ್ರು. ಸದ್ಯ ಯಶ್ವಂತ್ ಗೌಡ ‘ನಾತಿಚರಾಮಿ’ ಎಂಬ ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು,​ ಕನ್ನಡಕ್ಕೆ ಮರಳಿದ್ದಾರೆ.

publive-image

‘ನಾತಿಚರಾಮಿ’ ಪ್ರೋಮೋ ರಿಲೀಸ್​ ಆಗಿದ್ದು, ಇಂಟ್ರಸ್ಟಿಂಗ್​ ಆಗಿದೆ. ನಾಯಕ ಅಗಸ್ತ್ಯನಿಗೆ ದೇವರ ಮೇಲೆ ಕೋಪ. ತನ್ನ ತಾಯಿಯನ್ನ ಉಳಿಸಿಕೊಡಲಿಲ್ಲ. ಆ ದೇವಿ ಎಂಬ ಹತಾಶೆ. ಹೀಗಾಗಿ ದೇವರು, ದೇವಿ ಅಂದ್ರೆ ನಂಬಿಕೆಯಿಲ್ಲ.  ಆದರೆ ಹೆಸರಲ್ಲೇ ಭಕ್ತಿ ತುಂಬಿಕೊಂಡಿರೋ ನಾಯಕಿಗೆ ದೇವಿನೇ ಎಲ್ಲಾ. ಇಬ್ಬರ ತದ್ವಿರುದ್ಧದ ಸ್ವಭಾವ ಹೇಗೆ ಒಂದಾಗುತ್ತೆ ಅನ್ನೋದೇ ‘ನಾತಿಚರಾಮಿ’ ಕತಾಹಂದರ. ಇನ್ನೂ ಯಶ್ವಂತ್ ಗೌಡ​ಗೆ ಜೋಡಿಯಾಗಿ ನಟಿ ಮನಸ್ವಿ ಅಭಿನಯಸುತ್ತಿದ್ದಾರೆ. ಮನಸ್ವಿಗೆ ಇದು ಮೊದಲ ಧಾರಾವಾಹಿಯಾಗಿದೆ. ಉದಯ ವಾಹಿನಿಯಲ್ಲಿ ಇದೇ ನವೆಂಬರ್ 4ರಿಂದ, ಸಂಜೆ 6.30ಕ್ಕೆ‌ ‘ನಾತಿಚರಾಮಿ’ ವೀಕ್ಷಕರ ಮನೆಗೆ ಕಾಲಿಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment