newsfirstkannada.com

ಬೆಂಗಳೂರಲ್ಲಿ ಮಳೆ.. ಮಳೆ.. ಹವಾಮಾನ ಇಲಾಖೆಯಿಂದ ಮತ್ತೊಂದು ಎಚ್ಚರಿಕೆ..!

Share :

Published May 10, 2024 at 8:41am

Update May 10, 2024 at 8:42am

    ಭಾರೀ ಮಳೆಯಿಂದ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್..!

    ನಿನ್ನೆ ಸುರಿದ ಮಳೆಗೆ ಬೆಂಗಳೂರಲ್ಲಿ ಎಷ್ಟು ಮರಗಳು ಬಿದ್ದಿವೆ?

    ನಿಮ್ಮ ಏರಿಯಾದಲ್ಲಿ ಎಷ್ಟು ಮಿಲಿ ಮೀಟರ್ ಮಳೆ ಆಗಿದೆ ಗೊತ್ತಾ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಸಿಂಚನ ಮುಂದುವರೆದಿದೆ. ಚಾಮರಾಜಪೇಟೆ, ಶಾಂತಿನಗರ, ಬಸವನಗುಡಿ, ಪದ್ಮನಾಭನಗರ, ಹೆಬ್ಬಾಳ, ವಸಂತನಗರ, ಶಿವಾನಂದ ಸರ್ಕಲ್, ಜೆಸಿ ರೋಡ್​​​ ಸುತ್ತಾಮುತ್ತಾ ತುಂತುರು ಮಳೆಯಾಗಿದೆ.

ಒಂದ್ಕಡೆ ಮಳೆಯ ಕಾರಣ ವಾಹನ‌ ಸವಾರರ ಪರದಾಟ ನಡೆಸಿದ್ರೆ, ಮತ್ತೊಂದು ಕಡೆ ಕಂಟೋನ್ಮೆಂಟ್ ರೈಲ್ವೆ ಅಂಡರ್ ಪಾಸ್​ನಲ್ಲಿ ವಾಟರ್ ಲಾಗಿಂಗ್ ಆಗಿದ್ದು, ಸವಾರರು ಸರ್ಕಸ್​ ನಡೆಸುವಂತಾಯ್ತು. ಮುಂದಿನ 48 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಮೇ 15ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇನ್ನೂ ನಗರ ಜನರ ರಕ್ಷಣೆಗೆ ಅಂತಾ ಬಿಬಿಎಂಪಿಯಿಂದ ಉಚಿತ ಸಹಾಯವಾಣಿ ತೆರೆಯಲಾಗಿದೆ.. ಜೊತೆಗೆ ಪಾಲಿಕೆ ಸಿಬ್ಬಂದಿ 24/7 ಕಾರ್ಯನಿರ್ವಹಿಸಲಿದೆ.

ಆರ್.ಆರ್.ನಗರ ಜಂಕ್ಷನ್, ಏರ್ ಪೋರ್ಟ್ ರಸ್ತೆ ಸೇರಿ ಹಲವೆಡೆ ರಸ್ತೆಯಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಬಿಬಿಎಂಪಿ ಕಂಟ್ರೋಲ್ ರೂಂಗೆ 70 ಕಡೆಗಳಿಂದ ಮರಗಳು ಬಿದ್ದಿರುವ ಬಗ್ಗೆ ದೂರುಗಳು ಬಂದಿವೆ. ಮರಗಳ ರೆಂಬೆ ಬಿದ್ದಿದ್ದು, ರಸ್ತೆಗೆ ನೀರು ತುಂಬಿದ್ದರ ಬಗ್ಗೆಯೂ ದೂರು ನೀಡಲಾಗಿದೆ. 55 ಕಡೆ ಮರ, ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿದೆ.

ಎಲ್ಲೆಲ್ಲಿ ಎಷ್ಟು ಮಳೆ?

  • ಕೊಡಿಗೇಹಳ್ಳಿ 23 ಮಿ.ಮೀ.
  • ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ19 ಮಿ.ಮೀ.
  • ನಂದಿನಿ ಲೇಔಟ್‌ 47 ಮಿ.ಮೀ
  • ನಾಗಪುರ 43 ಮಿ.ಮೀ
  • ಕೊಟ್ಟಿಗೆಪಾಳ್ಯ 34 ಮಿ.ಮೀ
  • ಕಾಟನ್‌ಪೇಟೆ 19 ಮಿ.ಮೀ
  • ಹಂಪಿನಗರ 27 ಮಿ.ಮೀ
  • ಮಾರುತಿ ಮಂದಿರ ವಾರ್ಡ್‌ 49 ಮಿ.ಮೀ
  • ನಾಯಂಡಹಳ್ಳಿ 29 ಮಿ.ಮೀ
  • ಮಾರಪ್ಪನಪಾಳ್ಯ 40 ಮಿ.ಮೀ.

ನಿನ್ನೆ ಉರುಳಿದ ಮರಗಳೆಷ್ಟು?

  • ಸೌತ್ : 10
  • ಆರ್ ಆರ್ ನಗರ : 32
  • ಬೊಮ್ಮನಹಳ್ಳಿ : 6
  • ವೆಸ್ಟ್ : 10
  • ಮಹದೇವಪುರ : 1
  • ಯಲಹಂಕ : 3
  • ಈಸ್ಟ್ : 6
  • ದಾಸರಹಳ್ಳಿ : 2
  • ಒಟ್ಟು 70 ಮರಗಳು ನೆಲಕ್ಕೆ ಬಿದ್ದಿವೆ
  • 171ಕ್ಕೂ ಅಧಿಕ ಕಡೆ ಮರದ ಕೊಂಬೆಗಳು ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮಳೆ.. ಮಳೆ.. ಹವಾಮಾನ ಇಲಾಖೆಯಿಂದ ಮತ್ತೊಂದು ಎಚ್ಚರಿಕೆ..!

https://newsfirstlive.com/wp-content/uploads/2024/05/RAIN-13.jpg

Load More