Yash ಫ್ಯಾನ್ಸ್​ಗೆ ಮತ್ತೊಂದು ಗುಡ್​ನ್ಯೂಸ್​; ಸಿಂಗರ್​ ಹನಿಸಿಂಗ್​ಗೆ ರಾಕಿಂಗ್ ಸ್ಟಾರ್​ ಹೇಳಿದ್ದೇನು?

author-image
Veena Gangani
Updated On
Yash ಫ್ಯಾನ್ಸ್​ಗೆ ಮತ್ತೊಂದು ಗುಡ್​ನ್ಯೂಸ್​; ಸಿಂಗರ್​ ಹನಿಸಿಂಗ್​ಗೆ ರಾಕಿಂಗ್ ಸ್ಟಾರ್​ ಹೇಳಿದ್ದೇನು?
Advertisment
  • ರಾಕಿ ಭಾಯ್​ ಅನ್ನು ನೋಡುತ್ತಿದ್ದಂತೆ ರಾಕಿಂಗ್ ರಾಕಿಂಗ್​ ಎಂದ ಫ್ಯಾನ್ಸ್​
  • ಎಲ್ಲರ ಮುಂದೆಯೇ ಹನಿಸಿಂಗ್​ಗೆ ಕಂಡೀಷನ್ ಹಾಕಿದ ಸ್ಟಾರ್ ನಟ ಯಶ್​
  • ಒಂದೇ ವೇದಿಕೆ ಮೇಲೆ ಇಬ್ಬರು ಸ್ಟಾರ್ಸ್​​, ಫ್ಯಾನ್ಸ್​ ಆದ್ರೂ ಫುಲ್​ ಖುಷ್​​

ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳು ಸಖತ್​ ಖುಷಿಯಲ್ಲಿದ್ದಾರೆ. ನಿನ್ನೆಯಷ್ಟೇ ನಟ ಯಶ್​​ ಅವರು ತಮ್ಮ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ಇದೀಗ ವೇದಿಕೆ ಮೇಲೆ ಹಾಡು ಪ್ರಿಯರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ:  ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. ಟಾಕ್ಸಿಕ್ ಸಿನಿಮಾ ಬಿಡುಗಡೆಯ ಡೇಟ್ ಫಿಕ್ಸ್! ಯಾವಾಗ?

publive-image

ಹೌದು, ನಿನ್ನೆ ನಟ ಯಶ್​ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಬಿಡುಗಡೆಯ ಡೇಟ್ ಅನೌನ್ಸ್ ಮಾಡಿದ್ದರು. ಟಾಕ್ಸಿಕ್ ಸಿನಿಮಾ ಮುಂದಿನ ವರ್ಷ ಮಾರ್ಚ್ 19, 2026ರಂದು ಬಿಡುಗಡೆಯಾಗಲಿದೆ. ಕೆ.ವಿ.ಎನ್ ಪ್ರೊಡಕ್ಷನ್ಸ್ 19-03-2026ರಂದು ಟಾಕ್ಸಿಕ್ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಅಧಿಕೃತ ದಿನಾಂಕವನ್ನು ಅನಾವರಣಗೊಳಿಸಿತ್ತು.

publive-image

ನಿನ್ನೆ ಬಾಲಿವುಡ್ ಸ್ಟಾರ್​ ಗಾಯಕ ಯೋ ಯೋ ಹನಿಸಿಂಗ್ ಅವರು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವಿಶೇಷ ಎಂದರೆ ಗಾಯಕ ಯೋ ಯೋ ಹನಿಸಿಂಗ್ ಅವರು ನಿಂತಿದ್ದ ವೇದಿಕೆ ಮೇಲೆ ರಾಕಿಂಗ್​ ಸ್ಟಾರ್​ ಆಗಮನವಾಗಿತ್ತು. ನಟ ಯಶ್​ ಅವರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಜೋರಾಗಿ ರಾಕಿಂಗ್​.. ರಾಕಿಂಗ್​ ಕೂಗಿದ್ದಾರೆ.

publive-image

ಆಗ ವೇದಿಕೆ ಮೇಲೆ ಮಾತಾಡಿದ ನಟ ಯಶ್​, ನಮಸ್ಕಾರ ಹೇಗೆ ಇದ್ದೀರಿ, ತುಂಬಾ ಖುಷಿ ಆಗುತ್ತಿದೆ ನಿಮ್ಮನ್ನು ನೋಡಿ. ನಮ್ಮ ಊರಿಗೆ ಬಂದ ಇವರಿಗೆ ಪ್ರೀತಿಯ ಸ್ವಾಗತ ಹೇಳೋಣ.. ವೆಲ್​ ಕಮ್​ ಟು ಬ್ರದರ್. ವಿ ಆಲ್​ ಲವ್​ ಯೂ ಎಂದು ಹೇಳಿದ್ದಾರೆ.

ಇದಾದ ಬಳಿಕ ಅಭಿಮಾನಿಗಳಿಗೆ ಹನಿಸಿಂಗ್ ಅವರು ನನ್ನ ಜೊತೆಗೆ ಒಂದು ಹಾಡು ಮಾಡೋದಕ್ಕೆ ಹೇಳಿದ್ದಾರೆ. ಆಗ ಯಶ್​ ಅವರು, ಆಯ್ತು ಬ್ರದರ್ ಮಾಡ್ತೀನಿ ಅಂತ ಹೇಳಿದ್ದಾರೆ. ಮತ್ತೆ ಆದ್ರೆ, ನೀವು ಕನ್ನಡದಲ್ಲೂ ಕೂಡ ಹಾಡು ಹಾಡಬೇಕು ಎಂದು ಕಂಡೀಷನ್ ಹಾಕಿದ್ದಾರೆ. ಇದಕ್ಕೆ ಆ ಕೂಡಲೇ ಹನಿಸಿಂಗ್​ ಖಂಡಿತವಾಗಿಯೂ ನಿಮಗಾಗಿ ಕನ್ನಡದಲ್ಲಿ ಹಾಡು ಹಾಡುತ್ತೇನೆ ಎಂದಿದ್ದಾರೆ.

publive-image

ಸದ್ಯ ನಟ ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗೆ ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ, ನಟ ಯಶ್​ ‘ರಾಮಾಯಣ’ ಚಿತ್ರದ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕನೂ ಕೂಡ ಅವರೇ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment