/newsfirstlive-kannada/media/post_attachments/wp-content/uploads/2023/06/YOGA_PRANITHA_2.jpg)
ಭಾರತದ ಋಷಿ ಮುನಿಗಳು ಮಾಡುತ್ತಿದ್ದ ಯೋಗಾಸನ ಇಂದು ಇಡೀ ವಿಶ್ವದದ್ಯಾಂತ ಪಸರಿಸಿದೆ. ಯೋಗಕ್ಕೆ ಇಷ್ಟೊಂದು ಡಿಮ್ಯಾಂಡ್ ಬರಲು ಹಲವಾರು ಕಾರಣಗಳಿವೆ. ಒಂದು ಯೋಗಸಾನ ಮಾಡುವುದರಿಂದ ಆರೋಗ್ಯದಲ್ಲಿ ತುಂಬಾ ಸುಧಾರಣೆಗಳು ಕಾಣಬಹುದು. ಬೊಜ್ಜು ಹೊಂದಿದವರು ನಿರಂತರ ಯೋಗದಿಂದ ಸ್ಲಿಮ್ ಆಗಿ ಆಕರ್ಷಣಕರವಾಗಿ ಕಾಣಬಹುದು. ಅಲ್ಲದೇ ಆಯಸ್ಸು ಕೂಡ ವೃದ್ಧಿಯಾಗುತ್ತದೆ.
ಇದನ್ನೂ ಓದಿ: ನಿಮಗಿದು ಗೊತ್ತೇ..! ಐ ಡ್ರಾಪ್ ತಪ್ಪಾಗಿ ಹಾಕಿಕೊಳ್ಳೋದು ಅಪಾಯಕಾರಿ; ಹೇಗೆ ಗೊತ್ತಾ?
ನಿತ್ಯ ಮನೆಯಲ್ಲಿ ಅಥವಾ ನಿಮಗೆ ನಿರ್ಧಿಷ್ಟ ಪಡಿಸಿದ ಸ್ಥಳಗಳಲ್ಲಿ ಆಸನಗಳನ್ನು ಮಾಡುವುದರಿಂದ ದೇಹದ ನರನಾಡಿಗಳಲ್ಲಿ ರಕ್ತ ಪರಿಚಲನೆ ಸುಲಭಗೊಳ್ಳುತ್ತದೆ. ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಯೋಗ ಒಳ್ಳೆಯ ಉಪಾಯ ಜೊತೆಗೆ ಯೋಗದಿಂದ ನಿಮ್ಮ ಮನಸ್ಸು ಮತ್ತು ದೇಹ ಆರೋಗ್ಯವಾಗಿರುತ್ತಾವೆ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ತಿನ್ನೋದ್ರಿಂದ ತುಂಬಾ ಪ್ರಯೋಜನ.. ಎಷ್ಟೊಂದು ಲಾಭ ಗೊತ್ತಾ..?
- ಒತ್ತಡದಲ್ಲಿರುವ ಮನಸನ್ನು ಶಾಂತ ರೀತಿಗೆ ತರುವಂತಹ ಕೆಲಸ ಯೋಗ ಮಾಡುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾಗಿದ್ದರೆ ನಿತ್ಯ ಯೋಗಾಸನ ಮಾಡುವುದರಿಂದ ದೇಹವು ತೂಕವನ್ನು ಕಳೆದುಕೊಂಡು ಸುಂದರ ಮತ್ತು ದೃಢವಾಗಿರುತ್ತದೆ. ರಕ್ತದ ಒತ್ತಡ, ಕಡಿಮೆ ತೂಕ, ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಕೊಲೆಸ್ಟ್ರಾಲ್ ಅನ್ನು ಹತೋಟಿಗೆ ತರುವುದರಿಂದ ಯೋಗ ಸಕಾರಾತ್ಮಕವಾದ ಪರಿಣಾಮ ನೀಡುತ್ತದೆ. ಹೀಗಾಗಿಯೇ ಇಂದು ಜಗತ್ತಿನಾದ್ಯಂತ ಎಲ್ಲರೂ ಯೋಗವನ್ನು ಇಷ್ಟಪಡುತ್ತಾರೆ.
- ಯೋಗ ಮಾಡುವುದರಿಂದ ಉಸಿರಾಟ, ದೇಹದ ರಕ್ತ ಸಂಚಲನ ಸರಾಗವಾಗುತ್ತದೆ. ಇದರಿಂದ ಆಮ್ಲಜನಕ, ಜೀವಸತ್ವಗಳು ದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ಸಂಚಲನ ಆಗುತ್ತಾವೆ. ಹೀಗಾಗಿ ಅಂಗಗಳು ಆರೋಗ್ಯಯುತ ಆಗುವುದರ ಜೊತೆ ಸ್ಕಿನ್ ಕಾಂತಿಮಯ ಆಗುತ್ತದೆ.
- ಕೆಲವೊಬ್ಬರಿಗೆ ಹೊಟ್ಟೆ ಮುಂದೆ ಬಂದು ಕಿರಿಕಿರಿ ಅನಿಸುತ್ತಿರುತ್ತೆ. ಇಂತಹವರು ಹೊಟ್ಟೆ ಕರಗಿಸಬೇಕೆಂದರೆ ನೌಕಾಸನ, ಉಷ್ಟ್ರಾಸನದ ಜೊತೆ ಜೊತೆಗೆ ಇನ್ನು ಕೆಲ ಆಸನಗಳನ್ನು ನಿತ್ಯ ಮಾಡಿದ್ರೆ ಹೊಟ್ಟೆ ತೆಳ್ಳಗಾಗುತ್ತದೆ. ಹಾಗೂ ನೀವು ನೋಡಲು ಅಂದವಾಗಿ ಕಾಣುತ್ತೀರಿ.
ಇದನ್ನೂ ಓದಿ: ಐಬ್ರೋ ಶೇಪ್ ಮಾಡಿಸೋ ಮಹಿಳೆಯರೇ ಎಚ್ಚರ.. ವೈದ್ಯರಿಂದ ಶಾಕಿಂಗ್ ಅಂಶ ಬೆಳಕಿಗೆ!
- ಯೋಗದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಕೆಲ ಆಸನಗಳಿವೆ. ಅವುಗಳನ್ನು ಮಾಡುವುದರಿಂದ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಬಹುದು. ಈ ಆಸನಗಳು ರಕ್ತ ಹೆಪ್ಪುಗಟ್ಟುವಿಕೆಯ ಕ್ರಿಯೆಯಿಂದ ರಕ್ಷಣೆ ನೀಡಿ ಹೃದಯದಲ್ಲಿ ರಕ್ತ ಸರಾಗವಾಗಿ ಸಂಚಲನ ಮಾಡುತ್ತದೆ.
- ಯೋಗಾಸನ ಮಾಡುವಾಗ ಶ್ವಾಸ (ಉಸಿರಾಟದ ಅಂಗ) ಬಹಳ ಮುಖ್ಯ. ಪ್ರಾಣಾಯಾಮ, ಅನುಲೋಮ, ವಿಲೋಮಗಳನ್ನು ಸಹಜವಾಗಿ ಮಾಡುವುದರಿಂದ ಆರೋಗ್ಯಯುತ ಶ್ವಾಸ ಪಡೆಯಬಹುದು.
- ಯೋಗದಲ್ಲಿ ಬರುವ ಧೀರ್ಘ ಉಸಿರಾಟ ಮತ್ತು ನಿಧಾನ ಉಸಿರಾಟದ ಆಸನಗಳಿಂದ ಶ್ವಾಸಕೋಶ ಮತ್ತು ಹೊಟ್ಟೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಧೀರ್ಘ ಉಸಿರಾಟದ ಯೋಗವು ವಿಶ್ರಾಂತಿ ನೀಡಿ ಮನಸ್ಸಿನ ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಮನುಷ್ಯ ಆರೋಗ್ಯಕರವಾಗಿ ಇರುತ್ತಾನೆ.
- ಯೋಗದಿಂದ ಮತ್ತೊಂದು ಬಹಳ ಮುಖ್ಯವಾದ ಕೆಲಸ ಆಗುತ್ತೆ. ಅದೇ ಸ್ನಾಯು ಸೆಳೆತ, ಕೀಲು ನೋವುಗಳು ಮಾಯಾವಾಗಿ ಸದೃಢ ಸ್ನಾಯುಗಳನ್ನು ಹೊಂದಬಹುದು.
ಇದನ್ನೂ ಓದಿ: ಇವತ್ತು 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ.. ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ ಭಾಗಿ | VIDEO
ಭಾರತದ ಇತಿಹಾಸದ ಪ್ರಕಾರ ಸುಮಾರು 4,000 ವರ್ಷಗಳ ಹಿಂದಿನ ಪದ್ಧತಿಯಾದ ಯೋಗವನ್ನು ಋಷಿ, ಮುನಿಗಳು ಮಾಡುತ್ತಿದ್ದರು. ಇದರಿಂದ ಅವರು ನೂರಾರು ವರ್ಷಗಳ ಕಾಲ ಯಾವುದೇ ಕಾಯಿಲೆ ಇಲ್ಲದೇ ಜೀವನವನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತದೆ. ಮುನಿಗಳು ಯೋಗದ ಜೊತೆ ಧ್ಯಾನ ಮಾಡುತ್ತಿದ್ದರಂತೆ. ಹೀಗಾಗಿ ಅವರ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತಿತ್ತು. ದೈಹಿಕವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರ ಆಗಬಲ್ಲದು ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ