newsfirstkannada.com

ಸುಪ್ರೀಂಕೋರ್ಟ್‌ಗೆ ಕ್ಷಮೆಯಾಚಿಸಿದ ಬಾಬಾ ರಾಮ್‌ದೇವ್‌; Sorry ಕೇಳಿದರೂ ಹಿಗ್ಗಾಮುಗ್ಗ ತರಾಟೆ; ಯಾಕೆ?

Share :

Published April 2, 2024 at 12:01pm

Update April 2, 2024 at 8:03pm

    ಪತಂಜಲಿ ಉತ್ಪನ್ನಗಳಲ್ಲಿ ಔಷಧೀಯ ಗುಣ ಇರುವ ಬಗ್ಗೆ ತಪ್ಪು ಮಾಹಿತಿ

    ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದ ಬಾಬಾ ರಾಮ್‌ದೇವ್ ಕ್ಷಮೆಯಾಚನೆ

    ಕೇಂದ್ರ ಸರ್ಕಾರ ಈ ಬಗ್ಗೆ ಕಣ್ಣು ಮುಚ್ಚಿಕೊಂಡಿದ್ದು ಆಶ್ಟರ್ಯ ಎಂದ ಸುಪ್ರೀಂಕೋರ್ಟ್

ನವದೆಹಲಿ: ಪತಂಜಲಿ ಔಷಧಿ ಉತ್ಪನ್ನಗಳ ಜಾಹೀರಾತುಗಳಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ನಲ್ಲಿ ಯೋಗ ಗುರು ಬಾಬಾ ರಾಮ್‌ದೇವ್‌ ಕ್ಷಮೆಯಾಚಿಸಿದ್ದಾರೆ. ತಪ್ಪು ದಾರಿಗೆಳೆಯುವ ಜಾಹೀರಾತುಗಳಿಗಾಗಿ ಸುಪ್ರೀಂಕೋರ್ಟ್‌ನ ಆದೇಶವನ್ನು ಬಾಬಾ ರಾಮ್‌ದೇವ್ ಅವರು ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದ ಬಾಬಾ ರಾಮ್‌ದೇವ್ ಅವರು ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಪತಂಜಲಿ ಉತ್ಪನ್ನಗಳಲ್ಲಿ ಔಷಧೀಯ ಗುಣ ಇರುವ ಬಗ್ಗೆ ತಪ್ಪು ದಾರಿಗೆಳೆಯುವ ಜಾಹೀರಾತು ಪ್ರಸಾರ ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ವೈದ್ಯಕೀಯ ಸಂಘ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸುಳ್ಳು, ತಪ್ಪು ದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೂ ಗರಂ ಆಗಿತ್ತು. ಇಂಥ ಜಾಹೀರಾತುಗಳಿಂದ ಇಡೀ ದೇಶವನ್ನು ತಪ್ಪು ದಾರಿಗೆಳೆಯಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ಮೇಲೂ ಸುಪ್ರೀಂಕೋರ್ಟ್ ಗರಂ ಆಗಿತ್ತು.

ಇದನ್ನೂ ಓದಿ: ಬಾಬಾ ರಾಮ್‌ದೇವ್ ಪತಂಜಲಿಗೆ ಸುಪ್ರೀಂಕೋರ್ಟ್ ಶಾಕ್! ಕೇಂದ್ರ ಸರ್ಕಾರಕ್ಕೂ ತರಾಟೆ 

ಪತಂಜಲಿ ಉತ್ಪನ್ನಗಳ ಜಾಹೀರಾತಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ಗೆ ಹಾಜರಾಗಿದ್ದ ಬಾಬಾ ರಾಮ್‌ದೇವ್ ಅವರು ನಾವು ಬೇಷರತ್‌ ಕ್ಷಮೆ ಕೇಳುತ್ತೇವೆ ಎಂದ್ದಿದ್ದಾರೆ. ಕ್ಷಮೆ ಕೇಳಿದ್ದಕ್ಕೆ ಗರಂ ಆದ ಸುಪ್ರೀಂಕೋರ್ಟ್, ನೀವು ಇಡೀ ದೇಶದ ಜನರ ಕ್ಷಮೆ ಕೇಳಬೇಕು. ನೀವು ಇಡೀ ದೇಶದ ನಂಬಿಕೆಗೆ ಧಕ್ಕೆ ತಂದಿದ್ದೀರಿ. ಕೇಂದ್ರ ಸರ್ಕಾರ ಈ ಬಗ್ಗೆ ಕಣ್ಣು ಮುಚ್ಚಿಕೊಂಡಿದ್ದು, ಆಶ್ಟರ್ಯಕ್ಕೆ ಕಾರಣವಾಗಿದೆ. ಈ ಬಗ್ಗೆ ಮುಂದಿನ ಕ್ರಮ ಎದುರಿಸಲು ಸಿದ್ಧರಾಗಿರಿ ಎಂದು ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಬಾಬಾ ರಾಮ್‌ದೇವ್ ಕ್ಷಮೆ ಯಾಚಿಸಿರುವುದನ್ನ ಟ್ರೋಲ್ ಮಾಡಿರುವ ನೆಟ್ಟಿಗರು ಇದು Sorry ಆಸನ ಎಂದು ವ್ಯಂಗ್ಯವಾಡಿದ್ದಾರೆ.

ಪತಂಜಲಿ ಉತ್ಪನ್ನಗಳ ಜಾಹೀರಾತಿನಲ್ಲಿ ತಪ್ಪು ಹಾಗೂ ಸುಳ್ಳು ಮಾಹಿತಿಯ ಜಾಹೀರಾತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯಲ್ಲಿ ಏಪ್ರಿಲ್ 10ಕ್ಕೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ತೀರ್ಮಾನಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಪ್ರೀಂಕೋರ್ಟ್‌ಗೆ ಕ್ಷಮೆಯಾಚಿಸಿದ ಬಾಬಾ ರಾಮ್‌ದೇವ್‌; Sorry ಕೇಳಿದರೂ ಹಿಗ್ಗಾಮುಗ್ಗ ತರಾಟೆ; ಯಾಕೆ?

https://newsfirstlive.com/wp-content/uploads/2024/04/BABA_RAMDEV.jpg

Load More