/newsfirstlive-kannada/media/post_attachments/wp-content/uploads/2025/07/VACHANANDA-SWAMIJI-BROTHER.jpg)
ಚಿಕ್ಕೋಡಿ: ಯೋಗ ಗುರು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರ ಅಶೋಕ ಗೌರಗೊಂಡ ಅಪಘಾತದಲ್ಲಿ ನಿಧನರಾಗಿದ್ದಾರೆ.
ನಿನ್ನೆ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಅಶೋಕ ಗೌರಗೊಂಡ ಸ್ಥಳದಲ್ಲೇ ನಿಧನರಾಗಿದ್ದಾರೆ. ಅಶೋಕ ಗೌರಗೊಂಡ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಸಿ ಮೂಲದವರು. ತಾವಂಶಿ ಗ್ರಾಮದಿಂದ ಅಥಣಿ ಕಡೆಗೆ ತೆರಳುವಾಗ ಭರಮೋಕೋಡಿ ಹತ್ತಿರ ಅಪಘಾತ ಸಂಭವಿಸಿತ್ತು.
ಬೈಕ್ ಮೇಲೆ ಹೋಗುತ್ತಿದ್ದಾಗ ನಾಯಿ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ದುರ್ಘಟನೆಯಲ್ಲಿ ಅಶೋಕ ಅವರು ಜೀವಕಳೆದುಕೊಂಡಿದ್ದಾರೆ. ಮೃತ ಅಶೋಕ ತಾಯಿ, ಮಡದಿ ಮೂವರು ಹೆಣ್ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾವಂಶಿ ಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ಓದಿ: ಒಳ ಮೀಸಲಾತಿ ಸಮೀಕ್ಷೆಯಲ್ಲಿ ಕಳ್ಳಾಟ ಆರೋಪ; ಸಂಪುಟ ಸಭೆಯಲ್ಲಿ ಸಚಿವ ಬೇಸರ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ