/newsfirstlive-kannada/media/post_attachments/wp-content/uploads/2024/11/RCR_KIDNAP_CASE.jpg)
ರಾಯಚೂರು: ಚಿಕ್ಕಬಳ್ಳಾಪುರದ ಯೋಗ ಶಿಕ್ಷಕಿ ಅಪಹರಣ ಮಾಡಿ ಜೀವಂತ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. ಇದೀಗ ಈ ಕುರಿತು ಫೋಟೋಸ್ ಲಭ್ಯವಾಗಿವೆ.
ಇದನ್ನೂ ಓದಿ:ಬ್ಯಾಂಕ್ನಲ್ಲಿ ಕೋಟ್ಯಾಂತರ ಹಣ ಅವ್ಯವಹಾರ ಆರೋಪ.. ಮಾಜಿ MLA, ಬಿಜೆಪಿ ಶಾಸಕ ಮಧ್ಯೆ ವಾರ್
ಯೋಗ ಶಿಕ್ಷಕಿಯನ್ನ ಅಪಹರಣ ಮಾಡಿ, ಕೊಲೆ ಯತ್ನ ಮಾಡಿದ್ದ ಗ್ಯಾಂಗ್ನ ಮುಖ್ಯ ಆರೋಪಿಗಳಾದ ಸತೀಶ್ ರೆಡ್ಡಿ ಹಾಗೂ ರಮಣ ತಲೆಮರೆಸಿಕೊಂಡಿದ್ದರು. ಪೊಲೀಸರು ಈ ಇಬ್ಬರ ಬಗ್ಗೆ ಹುಡುಕಾಟ ನಡೆಸುತ್ತಲೇ ಇದ್ದರು. ಎಲ್ಲಿಯೂ ಸಿಕ್ಕಿರಲಿಲ್ಲ. ಆದರೆ ತಲೆ ಮರಿಸಿಕೊಂಡು ಓಡಾಡುತ್ತಿದ್ದ ಸತೀಶ್ ರೆಡ್ಡಿ, ರಮಣ ಇಬ್ಬರು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನ ಪಡೆದು ಹೊರ ಬರುವಾಗ ಪೊಲೀಸರು ಈ ಹಿಂದೆಯೇ ಅರೆಸ್ಟ್ ಮಾಡಿದ್ದರು. ಆದರೆ ಮಂತ್ರಾಲಯದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿರುವ ಫೋಟೋಗಳು ಇದೀಗ ಲಭ್ಯವಾಗಿದೆ.
ಯರಾಗೇರಾ ಸಿಪಿಐ ನಿಂಗಪ್ಪ ನೇತೃತ್ವದಲ್ಲಿ 5 ಜನರ ತಂಡದಿಂದ ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಇಬ್ಬರ ಬಳಿ ಇದ್ದಂತಹ 5 ಮೊಬೈಲ್ ಪೋನ್ಗಳನ್ನು ವಶಕ್ಕೆ ಪಡೆದು ಈ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಯೋಗ ಶಿಕ್ಷಕಿ ಅಪಹರಣ ಕೇಸ್ಗೆ ಬಿಗ್ ಟ್ವಿಸ್ಟ್; ಜೀವಂತ ಸಮಾಧಿಯಾಗಿದ್ದ ಅರ್ಚನಾ ಎದ್ದು ಬಂದಿದ್ದು ಹೇಗೆ? ಯಾವುದು ಆ ವಿದ್ಯೆ?
ಯೋಗ ಶಿಕ್ಷಕಿ ಸಂತೋಷ್ ಕುಮಾರ್ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ಈತನ (ಸಂತೋಷ್) ಪತ್ನಿ, ಸತೀಶ್‌ರೆಡ್ಡಿ ಗ್ಯಾಂಗ್ಗೆ ಸುಪಾರಿ ನೀಡಿದ್ದಳು ಎನ್ನಲಾಗಿದೆ. ಮಹಿಳೆ ಹೇಳಿದಂತೆ ಸತೀಶ್‌ರೆಡ್ಡಿ ಗ್ಯಾಂಗ್, ಕೊಪ್ಪಳದಲ್ಲಿ ಕಾರು ಕದ್ದು ಅ.23ರಂದು ಚಿಕ್ಕಬಳ್ಳಾಪುರದ ಡಿಎಸ್ ಮ್ಯಾಕ್ಸ್ ಸನ್ವರ್ತ್ ಅಪಾರ್ಟ್ಮೆಂಟ್ನಿಂದ ಯೋಗ ಶಿಕ್ಷಕಿಯನ್ನು ಅಪಹರಣ ಮಾಡಿದ್ದರು. ಬಳಿಕ ಯಾರು ಇಲ್ಲದ ಸ್ಥಳಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿ ಕೊಲೆಗೆ ಯತ್ನಿಸಿದ್ದರು. ಶಿಕ್ಷಕಿ ಸಾವನ್ನಪ್ಪಿದ್ದಾಳೆಂದು ಭಾವಿಸಿ ಗುಂಡಿ ತೋಡಿ ಅದರ ಮೇಲೆ ಮರದ ಕೊಂಬೆಗಳನ್ನ ಹಾಕಿದ್ದರು. ಈ ವೇಳೆ ಸತ್ತಂತೆ ನಟಿಸಿದ್ದ ಶಿಕ್ಷಕಿ ನಂತರ ಎದ್ದು ಬಂದು ಜೀವ ಉಳಿಸಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ