ಯೋಗ ಶಿಕ್ಷಕಿ ಅಪಹರಣ ಕೇಸ್​ಗೆ ಬಿಗ್​ ಟ್ವಿಸ್ಟ್​; ಜೀವಂತ ಸಮಾಧಿಯಾಗಿದ್ದ ಅರ್ಚನಾ ಎದ್ದು ಬಂದಿದ್ದು ಹೇಗೆ? ಯಾವುದು ಆ ವಿದ್ಯೆ?

author-image
Veena Gangani
Updated On
ಯೋಗ ಶಿಕ್ಷಕಿ ಅಪಹರಣ ಕೇಸ್​ಗೆ ಬಿಗ್​ ಟ್ವಿಸ್ಟ್​; ಜೀವಂತ ಸಮಾಧಿಯಾಗಿದ್ದ ಅರ್ಚನಾ ಎದ್ದು ಬಂದಿದ್ದು ಹೇಗೆ? ಯಾವುದು ಆ ವಿದ್ಯೆ?
Advertisment
  • ಒಂದು ಹೆಣ್ಣಿಗೆ ಸುಪಾರಿ ಕೊಟ್ಟಿದ್ದು ಮತ್ತೊಬ್ಬಳು ಹೆಣ್ಣು
  • ಕ್ರೈಂ ಕಂಡು ಹಿಡಿಯಬೇಕಿದ್ದವರೇ ಕೊಲೆಗಾರರಾದ ಸ್ಟೋರಿ
  • ಅರ್ಚನಾ ಸಾವು ಗೆದ್ದು ಬಂದಿದ್ದೇಗೆ ಗೊತ್ತಾ? ಈ ಸ್ಟೋರಿ ಓದಿ

ಚಿಕ್ಕಬಳ್ಳಾಪುರ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರೋ ಪ್ರಕರಣ ಇದು. ಕಿಡ್ನ್ಯಾಪ್ ಮಾಡಿ ಟಾರ್ಚರ್ ಮಾಡಿದ್ರು ಆ ದುರುಳರು. ಕಾಡಿನ ಮಧ್ಯೆ ಮಹಿಳೆಯನ್ನು ಹೂತು ಬಂದಿದ್ರು. ಮಣ್ಣಾಗಿದ್ದ ಆ ಹೆಣ್ಣು ಸಮಾಧಿ ಸೀಳಿಕೊಂಡು ಎದ್ದು ಬಂದಿದ್ದಾಳೆ. ಕ್ರೂರ ಕತ್ತಲಿನಲ್ಲಿ ಆ ಕಾಡಿನೊಳಗೆ ನಡೆದಿದ್ದು ಅಕ್ಷರಶಃ ದಾರುಣ. ಆ ಒಂದು ಸಿಸಿಟಿವಿ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸೋ ಸಾಕ್ಷಿ ಹೇಳ್ತಿದೆ.

ಇದನ್ನೂ ಓದಿ: ಅಪಘಾತದ ಬಳಿಕ ಸಂಧ್ಯಾ ಮೊಬೈಲ್ ಕಳವು.. ಸಾವಿನ ಭೀಕರತೆ ಬಯಲು; ಸಿಸಿಟಿವಿಯಲ್ಲಿ ಕೊನೆ ಕ್ಷಣದ ದೃಶ್ಯ!

publive-image

ಒತ್ತಾಯದಿಂದಲೇ ಆ ಹೆಣ್ಣು ಮಗಳು ಕಾರ್ ಹತ್ತುತ್ತಾಳೆ. ಇದು ಅಕ್ಷರಶಃ ಕಿಡ್ನಾಪ್ ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ. ಹೀಗೆ ಕಾರ್​​ನಲ್ಲಿ ಕಿಡ್ನ್ಯಾಪ್ ಮಾಡಿದ ದುರುಳರು ಇಡೀ ದಿನ ಬೆಂಗಳೂರು ಸುತ್ತಿದ್ದಾರೆ. ಕಾರಿನಲ್ಲಿದ್ದ ಆ ಹೆಣ್ಣು ಮಗಳಿಗೆ ಟಾರ್ಚರ್​ ಮಾಡಿದ್ದಾರೆ. ಅಸಹ್ಯವಾಗಿ ದೌರ್ಜನ್ಯ ಎಸಗೋದಕ್ಕೂ ಮುಂದಾಗಿದ್ದಾರೆ. ಈ ಸಂದರ್ಭ ವಿರೋಧಿಸಿದ್ದಕ್ಕೆ ಚಾರ್ಜರ್​ ವೈರ್​ನಿಂದ ಹೊಡೆದಿದ್ದಾರೆ. ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸೋ ಪ್ರಯತ್ನವನ್ನೂ ಮಾಡಿದ್ದಾರೆ. ಹೀಗೆ ಕಿಡ್ನಾಪ್ ಆದ ಹೆಣ್ಣು ಮಗಳ ಸ್ಥಿತಿ ಕೊನೆಗೆ ಏನಾಯ್ತು ಗೊತ್ತಾ? ಇದೇ ಕಾಡಿನ ಸನಿಹವೇ ಇದ್ದ ಮನೆ ಮಂದಿ ಆಡಿದ ಮಾತು ಕರುಳು ಹಿಂಡುವಂತಿದೆ.

ಬೆಳಗಿನ ಜಾವ ಬಂದು ಬಟ್ಟೆ ಕೇಳಿದ್ಳು. ತಲೆ, ಕುತ್ತಿಗೆ ಭಾಗದಲ್ಲಿ ಗಾಯ ಆಗಿತ್ತು. ಹೀಗೆ ಹೇಳುತ್ತಲೇ ಆ ಕ್ಷಣವನ್ನು ನೆನೆದು ಮರುಕ ಪಡ್ತಿರೋ ವ್ಯಕ್ತಿ ನಾಗೇಶ್​​. ಆ ನಾಲ್ವರು ದುರುಳರಿಂದಾಗಿ ದೈಹಿಕ ಹಲ್ಲೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಆ ಹೆಣ್ಣು ಮಗಳ ಸ್ಥಿತಿ ಕಂಡು ಕಂಗೆಟ್ಟಿಸಿತ್ತು. ಇದೇ ನಾಗೇಶ್​​ ಅಕ್ಕ ಕಣ್ಣೀರಿಟ್ಟುಕೊಂಡಿದ್ರು. ಹೌದು, ಬೆಂಗಳೂರಿನ ಯೋಗ ಟೀಚರ್​​ ಹೆಸರು ಅರ್ಚನಾ ಅಂತಾ. ಈಕೆಯನ್ನ ಮೊನ್ನೆ ಮೊನ್ನೆ ನಾಲ್ವರು ದುರುಳರು ಕಿಡ್ನಾಪ್ ಮಾಡಿದ್ರು. ರಾತ್ರಿ 10.30ರ ಹೊತ್ತಿಗೆ ಕೆಆರ್​​ ಪುರಂನಿಂದ ಕಿಡ್ನಾಪ್ ಮಾಡಿದ್ದ ಕಾರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಅರಣ್ಯ ಪ್ರದೇಶಕ್ಕೆ ಬಂದು ನಿಂತಿತ್ತು. ಕಿಡ್ನಾಪ್ ಮಾಡಿದಾಗಿನಿಂದ ಯೋಗ ಟೀಚರ್​ಗೆ ಪಾಯಿಂಟ್ ಬ್ಲಾಂಕ್​​ನಲ್ಲೇ ಇಟ್ಟಿದ ಗನ್ ಕದಲಿರಲಿಲ್ಲ. ಹಾಗಾಗಿಯೇ ಅರ್ಚನಾ ಬಂಧಿಯಾಗಿದ್ಳು. ಕಿಡ್ನ್ಯಾಪ್​ ಮಾಡಿದ್ಮೇಲೆ ಕಾರಿನುದ್ದಕ್ಕೂ ಯೋಗ ಟೀಚರ್​ ಅರ್ಚನಾಗೆ ಚೆನ್ನಾಗಿ ಹೊಡೆದಿದ್ದಾರೆ. ಬಾಯಿಗೆ ಬಂದಂತೆ ಬೈದಿದ್ದಾರೆ.

publive-image

ದೌರ್ಜನ್ಯಕ್ಕೂ ಮುಂದಾಗಿದ್ದಾರೆ. ನಿಜಕ್ಕೂ ಚಿತ್ರಹಿಂಸೆಯನ್ನೇ ನೀಡಿದ್ದಾರೆ. ಇದೇ ದಿಬ್ಬೂರಳ್ಳಿ ಕಾಡಿನಲ್ಲೇ ಆಕೆ ಸುಸ್ತಾಗಿ ಬಿದ್ದಾಗ ದುರುಳರು ಅರ್ಚನಾ ಸತ್ತಿದ್ದಾಳೆ ಅಂತಾ ತಿಳಿದು, ಗುಂಡಿಯೊಂದಕ್ಕೆ ಎಸೆದು, ಅರ್ಧಂಬರ್ಧ ಮಣ್ಣು ಎಳೆದು ಹೋಗಿದ್ರು. ಇಲ್ಲಿ ಈ ಕಿರಾತಕರು ಆಕೆಯ ಮೇಲೆ ಬಟ್ಟೆಯನ್ನೂ ಉಳಿಸದಂತೆ ಕಿತ್ತುಕೊಂಡು ಹೋಗಿದ್ರು. ಹಿಗ್ಗಾಮುಗ್ಗಾ ಥಳಿಸಿದ್ದರಿಂದಾಗಿ ಅರ್ಚನಾ ಪ್ರಜ್ಞೆ ತಪ್ಪಿದ್ದಳು. ಆಕೆಯನ್ನ ಅರೆಬೆತ್ತಲೆಗೊಳಿಸಿ ಜೀವಂತವಾಗಿಯೇ ಹೂತು ಹಾಕಿ ಎಸ್ಕೇಪ್ ಆಗಿದ್ರು. ಇಂಥಹ ಹೊತ್ತಿನಲ್ಲೇ ಆಕೆಯ ಜೀವ ಉಳಿಸಿದ್ದು ಪ್ರಾಣವಿದ್ಯೆ.

publive-image

ಸತೀಶ್​​ ರೆಡ್ಡಿ ಬೆಂಗಳೂರಿನಲ್ಲಿ ಡಿಟೆಕ್ಟೀವ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕ್ರೈಮ್ ಕಂಡು ಹಿಡಿಯೋ ಕೆಲಸ ಮಾಡಬೇಕಿದ್ದ ಡಿಟೆಕ್ಟೀವ್ ಕ್ರೈಮ್ ಮಾಡಿ ಪೊಲೀಸರ ಮುಂದೆ ನಿಂತಿದ್ದಾನೆ. ಇವನೊಂದಿಗೆ ಅರ್ಚನಾ ಕಿಡ್ನಾಪ್ ಕೇಸ್​​ನಲ್ಲಿ ಕೈ ಜೋಡಿಸಿದ್ದು ಇವನ ಸಹಚರರಾದ ನಾಗೇಂದ್ರ ರೆಡ್ಡಿ, ರಮಣಾ ರೆಡ್ಡಿ ಹಾಗೂ ರವಿ. ಅಚ್ಚರಿಯ ಸಂಗತಿ ಏನಂದ್ರೆ ಅರ್ಚನಾ ಕಿಡ್ನಾಪ್​​​ ಮಾಡೋಕೆ ಸುಪಾರಿ ಕೊಟ್ಟಿದ್ದೇ ಬಿಂದು. ಇದೇ ಅರ್ಚನಾರ ಪತಿಯ ಗೆಳೆಯ ಸಂತೋಷ್​ ಪತ್ನಿ. ಅರ್ಚನಾ ವಿಶ್ವನಾಥ್​ ಅನ್ನೋರೊಂದಿಗೆ ಮದುವೆ ಆಗಿದ್ರು. ಇಬ್ಬರು ಮಕ್ಕಳೂ ಇದ್ದಾರೆ. ಹೆಚ್​ಎಎಲ್​ನಲ್ಲಿ ಕೆಲಸ ಮಾಡೋ ಗಂಡನೊಂದಿಗೆ ಸಂಸಾರ ಸರಿ ಬಾರದ ಕಾರಣ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಹೌದು, ಅರ್ಚನಾ ತನ್ನ ಪತಿ ವಿಶ್ವನಾಥ್​​ರ ಸ್ನೇಹಿತ ಸಂತೋಷ್‌‌ ಜೊತೆ ಸಂತೋಷವಾಗಿದ್ರಂತೆ. ದಿನ ಕಳೆದಂತೆ ಇಬ್ಬರ ಮಧ್ಯೆ ಇನ್ನಿಲ್ಲದ ಸಲುಗೆ ಬೆಳೆದಿತ್ತು. ಇದು ಸಂತೋಷ್‌‌ ಪತ್ನಿ ಬಿಂದುಶ್ರೀ ಕೆರಳುವಂತೆ ಮಾಡಿತ್ತು. ಹೀಗಾಗಿ ಬಿಂದುಶ್ರೀ ಸತೀಶ್‌‌ ರೆಡ್ಡಿಗೆ ಕೊಲೆ ಸುಪಾರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವಿಚಾರವನ್ನೇ ಚಿಕ್ಕಬಳ್ಳಾಪುರ ಎಸ್​ಪಿ ಕುಶಾಲ್ ಚೌಕ್ಸೆ ಹೇಳ್ತಿದ್ದಾರೆ.

ಇದನ್ನೂ ಓದಿ: ಮೊಳಕೆಯೊಡೆದ ಆಲೂಗಡ್ಡೆ ತುಂಬಾನೇ ಡೇಂಜರ್​; ಅಡುಗೆ ಮಾಡುವ ಮೊದಲು ಯೋಚಿಸಿ..

publive-image

ಅರ್ಚನಾ ಪತಿಯನ್ನು ಬಿಟ್ಟು ಬಿಂದುಶ್ರೀ ಗಂಡನೊಂದಿಗೆ ಇದ್ಳು ಅನ್ನೋ ಆರೋಪವಿದೆ. ಹಾಗಾಗಿಯೇ ತನ್ನ ಸಂಸಾರ ಉಳಿಸಿಕೊಳ್ಳೋದಕ್ಕೆ ಬಿಂದುಶ್ರೀ ಡಿಟೆಕ್ಟೀವ್​ ಅನ್ನೇ ಕಿಡ್ನಾಪ್ ಮಾಡೋಕೆ ಸುಪಾರಿ ಕೊಟ್ಟಿದ್ಳು. ಸತತ 3 ತಿಂಗಳ ಕಾಲ ಅರ್ಚನಾ ನಡೆಸುತ್ತಿದ್ದ ಯೋಗ ಕ್ಲಾಸ್​​ಗೆ ಸತೀಶ್​​ ಹೋಗ್ತಿದ್ದ. ಇದೇ ವೇಳೆಯೇ ವಿಶ್ವಾಸ ಗಳಿಸಿದ್ದ. ತಾನು ಗನ್ ಶೂಟಿಂಗ್ ಕ್ಲಾಸ್ ಮಾಡ್ತೀನಿ ಅಂತ ಹೇಳಿದ್ದ. ಅದನ್ನ ಕಲಿಸುತ್ತೇನೆ ಅಂತ ಹೇಳಿ ಅರ್ಚನಾರನ್ನು ಕಿಡ್ನಾಪ್ ಮಾಡಿದ್ದ. ಆ ಸಂದರ್ಭದ ಸಾಕ್ಷಿ ನುಡಿಯುತ್ತಿರುವುದು ಇದೇ ಸಿಸಿಟಿವಿ ದೃಶ್ಯಾವಳಿಗಳು. ಮೋಸ್ಟ್ ಖತರ್ನಾಕ್ ಹಾಗೂ ನಟೋರಿಯಸ್​ ಆಗಿದ್ದ ಸತೀಶ್​ ರೆಡ್ಡಿ ಗ್ಯಾಂಗ್ ಮೇಲೆ ಸಾಕಷ್ಟು ಕೇಸ್​​ಗಳಿವೆ. ಹಲವು ಸಂದರ್ಭದಲ್ಲಿ ಪೊಲೀಸರ ಅತಿಥಿಯೂ ಆಗಿದ್ದಾನೆ. ಇಂಥ ಕಟುಕರ ಕೈಗೆ ಸಿಕ್ಕಿಯೂ ಸಮಾಧಿ ಆದ್ಮೇಲೂ ಅರ್ಚನಾ ಸಾವು ಗೆದ್ದು ಬಂದಿದ್ದೇಗೆ ಗೊತ್ತಾ? ಅದುವೇ ಪ್ರಾಣ ವಿದ್ಯೆ ಪವರ್.

ಕರಾಟೆ ಕಿಂಗ್ ಶಂಕರ್​ ನಾಗ್ ಅಭಿನಯದ ಸಿಬಿಐ ಶಂಕರ್​ ಸಿನಿಮಾದಲ್ಲಿ ದೇವರಾಜ್ ಪ್ರಾಣಯಾಮ ವಿದ್ಯೆಯನ್ನ ಬಳಸಿಕೊಂಡು ಮೂಲಕ ಸತ್ತಂತೆ ನಟಿಸಿ ಪರಾರಿ ಆಗ್ತಾರೆ. ಇದೇ ರೀತಿಯಲ್ಲೇ ಯೋಗ ಟೀಚರ್​ ಅರ್ಚನಾ ಸಾವು ಗೆದ್ದು ಸಮಾಧಿ ಸೀಳಿಕೊಂಡು ಬಂದಿದ್ದಾರೆ. ಸಾವು ಗೆದ್ದು ಬರೋದಕ್ಕೆ ಆಕೆ ಕಲಿತಿದ್ದ ಯೋಗ ಕೂಡ ಮುಖ್ಯ ಕಾರಣ ಎನ್ನುವ ಮಾತುಗಳೂ ಕೇಳಿಬರ್ತಿದೆ. ಆದರೆ, ಆ ಕಾಡಿನಲ್ಲಿ ರಾತ್ರಿ ನಡೆದಿದ್ದು ದಾರುಣವಾದ್ರೆ, ಮುಂಜಾನೆ ಕಂಡ ದೃಶ್ಯ ಮನಕಲಕುವಂತಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment