‘ಮಜಾ ಟಾಕೀಸ್​​’ನಲ್ಲಿ ಯೋಗರಾಜ್ ಭಟ್, ಪ್ರಿಯಾಂಕ.. ಇನ್ನೂ ಯಾರ್ ಯಾರು ಇರ್ತಾರೆ..?

author-image
Ganesh
Updated On
‘ಮಜಾ ಟಾಕೀಸ್​​’ನಲ್ಲಿ ಯೋಗರಾಜ್ ಭಟ್, ಪ್ರಿಯಾಂಕ.. ಇನ್ನೂ ಯಾರ್ ಯಾರು ಇರ್ತಾರೆ..?
Advertisment
  • ಬಿಗ್​ಬಾಸ್​ ಮುಗಿದ ಬೆನ್ನಲ್ಲೇ ಮತ್ತೊಂದು ಶೋ
  • ಮಜಾ ಮಾಂಜಾ ಕೊಡಲು ಬರ್ತಿದೆ ಮಜಾ ಟಾಕೀಸ್
  • ಫೆಬ್ರವರಿ 1 ರಂದು ಮೊದಲ ಎಪಿಸೋಡ್ ಪ್ರಸಾರ

ಬಿಗ್​​​ಬಾಸ್​ ಮುಗಿದ ಬಳಿಕ ಕಲರ್ಸ್​ ಕನ್ನಡದಲ್ಲಿ ಏನು ಬರುತ್ತೆ ಎಂಬ ವೀಕ್ಷಕರ ಎಕ್ಸೈಟ್​​ಮೆಂಟ್​ಗೆ ಕೆಲವು ದಿನಗಳ ಹಿಂದೆ ತೆರೆಬಿದ್ದಿದೆ. ಸೃಜನ್ ಲೋಕೇಶ್​ ನೇತೃತ್ವದ ‘ಮಜಾ ಟಾಕೀಸ್’ ಮಜಾ ಮಾಂಜಾ ನೀಡಲು ಬರ್ತಿದೆ ಎಂದು ಕಲರ್ಸ್​ ಕನ್ನಡ ಅನೌನ್ಸ್ ಮಾಡಿತ್ತು.

ಇದೀಗ ಮಜಾ ಟಾಕೀಸ್​ಗೆ ಸಂಬಂಧಿಸಿದಂತೆ ಬಿಗ್​ ಅಪ್​​ಡೇಟ್​ ಸಿಕ್ಕಿದೆ. ವಿಶೇಷ ಅಂದರೆ ಈ ಬಾರಿಯ ಮಜಾ ಟಾಕೀಸ್​ನಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೂಡ ಇರಲಿದ್ದಾರೆ. ಆ ಮೂಲಕ ಮಜಾ ಟಾಕೀಸ್​ಗೆ ಮತ್ತಷ್ಟು ರಂಗು ಸಿಗಲಿದೆ. ಕಲರ್ಸ್​​ ಕನ್ನಡ ಪ್ರೊಮೋ ಶೇರ್ ಮಾಡಿದ್ದು, ಅದರಲ್ಲಿ ಪಾತ್ರಧಾರಿಗಳು ಯಾರೆಲ್ಲ ಇರಲಿದ್ದಾರೆ ಅನ್ನೋದನ್ನು ಅನಾವಣರ ಮಾಡಲಾಗಿದೆ.

ಇದನ್ನೂ ಓದಿ:BBK11: ಧನರಾಜ್‌ಗೆ ಹೊಡೀತು ಜಾಕ್‌ಪಾಟ್‌.. ವಾರದ ಮಧ್ಯೆ ಎಲಿಮಿನೇಟ್ ಯಾರ್ ಆಗ್ತಾರೆ?

ಯಾರೆಲ್ಲ ಇದ್ದಾರೆ..?

ಈ ಬಾರಿಯ ಮಜಾ ಟಾಕೀಸ್​ನಲ್ಲಿ ಬಿಗ್​ಬಾಸ್ ಖ್ಯಾತಿಯ ತುಕಾಲಿ ಸಂತೋಷ್, ವಿನೋದ್ ಗೊಬ್ರಗಾಲ, ಪ್ರಿಯಾಂಕ, ಕುರಿ ಪ್ರತಾಪ್, ಪಿಕೆ, ಶಿವು, ವಿಶ್ವಾಸ್, ಚಂದ್ರಪ್ರಭ ಮೊದಲಾದ ಕಲಾವಿದರಿದ್ದಾರೆ. ವಿಶೇಷ ಅಂದ್ರೆ ಚಂದ್ರಿಕಾ ಖ್ಯಾತಿಯ ಪ್ರಿಯಾಂಕ ಕೂಡ ಮಜಾ ಟಾಕೀಸ್​​ಗೆ ಎಂಟ್ರಿಯಾಗಿದ್ದಾರೆ. ಸೀರಿಯಲ್​​ಗಳಲ್ಲಿ ವಿಲನ್​​ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಪ್ರಿಯಾಂಕ, ಇನ್ಮೇಲೆ ಕಾಮಿಡಿ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಕುರಿ ಪ್ರತಾಪ್ ಕೂಡ ಶೋನಲ್ಲಿ ಇದ್ದಾರೆ. ಈ ಹಿಂದೆ ಬಿಗ್​ಬಾಸ್ ಶೋನಲ್ಲಿ ಪ್ರಿಯಾಂಕ ಹಾಗೂ ಕುರಿ ಪ್ರತಾಪ್ ಜೋಡಿಯ ಕೆಮೆಸ್ಟ್ರಿ ವೀಕ್ಷಕರ ಮನಗೆದ್ದಿತ್ತು. ಇದೀಗ ಮತ್ತೊಮ್ಮೆ ನಗಿಸಲು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯಾವಾಗಿಂದ ಮಜಾ ಟಾಕೀಸ್​..!

ಬಿಗ್​ಬಾಸ್​ ಶೋ ಮುಗಿಯುತ್ತಿದ್ದಂತೆಯೇ ಮಜಾ ಟಾಕೀಸ್ ಪ್ರಾರಂಭವಾಗಲಿದೆ. ಫೆಬ್ರವರಿಂದ 1 ರಿಂದ ಕಾಮಿಡಿ ಶೋ ಆರಂಭವಾಗಲಿದೆ ಎಂದು ಪ್ರೊಮೋದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: BBK11 ತಾರಮ್ಮನ ಮುಂದೆ ಮೋಕ್ಷಿತಾಗೆ ಕ್ಷಮೆ ಕೇಳಿ ಮಂಜು ಕಣ್ಣೀರು.. ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment