newsfirstkannada.com

ಕೋಟಿ ಕೋಟಿ ಬಂದ ಮೇಲೂ ದೊಡ್ಡಸ್ಥಿಕೆ ತೋರಿಸಲಿಲ್ಲ ರೋಹಿತ್.. ಹೆಜ್ಜೆ ಗುರುತು ಮರೆಯದ ಕ್ಯಾಪ್ಟನ್

Share :

Published July 12, 2024 at 2:54pm

Update July 13, 2024 at 1:10pm

    ಬೆಳೆದು ಬಂದ ಹಾದಿ ಮರೆಯದ ರೋಹಿತ್ ಶರ್ಮಾ

    275 ರೂಪಾಯಿಗೆ ಪರದಾಡಿದ್ದ ರೋಹಿತ್ ಶರ್ಮಾ..!​

    ಯೋಗೇಶ್​ ಪಟೇಲ್​​ ರೋಹಿತ್​ ಜೀವನ ಬದಲಿಸಿದ್ದೇಗೆ..?

ಇಂದು ಕೋಟ್ಯಾಧಿಪತಿಯಾಗಿರೋ ರೋಹಿತ್​ ಶರ್ಮಾ ಅಂದು ಕೇವಲ 275 ರೂಪಾಯಿಗಾಗಿ ಪರದಾಡಿದ್ದರು. ಅಂದು ಈ ವಿಶೇಷ ವ್ಯಕ್ತಿ ಸಹಾಯ ಮಾಡದಿದ್ದರೆ ರೋಹಿತ್​ ಶರ್ಮಾ ವರ್ಲ್ಡ್​​​​ ಫೇಮಸ್​ ಆಗೋದು ಅನುಮಾನವೇ ಆಗಿತ್ತು. ಅಷ್ಟಕ್ಕೂ ಈ ವಿಶೇಷ ವ್ಯಕ್ತಿ ಯಾರು? ಈ ವ್ಯಕ್ತಿ ರೋಹಿತ್ ಅವರ ಜೀವನ​ ಬದಲಿಸಿದ್ದು ಹೇಗೆ?

ಬಾರ್ಬಡೋಸ್​ನಲ್ಲಿ ವಿಶ್ವಕಪ್​ ಗೆದ್ದು ಟೀಮ್​ ಇಂಡಿಯಾ​ ಭಾರತಕ್ಕೆ ಬಂದಿಳಿದ ಮೇಲೆ ನಡೆದ ವಿಜಯೋತ್ಸವದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದರು. ಇದಕ್ಕೆ ಮುಂಬೈಕರ್​ ಅನ್ನೋದು ಪ್ರಮುಖ ಕಾರಣವಾಗಿತ್ತು. ಅಂದು ಮಾಡಿದ ಅದ್ಧೂರಿ ಸ್ವಾಗತದ ವಿಡಿಯೋಗಳು, ಫೋಟೋಗಳು ಸಖತ್​​ ಟ್ರೆಂಡಿಂಗ್​ನಲ್ಲಿವೆ. ಅದ್ರಲ್ಲಿ ರೋಹಿತ್​ರ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್​​ ಆಗಿದೆ. ಆ ಪೋಟೋದಲ್ಲಿರೋ ವ್ಯಕ್ತಿ ಯಾರು ಅನ್ನೋ ಪ್ರಶ್ನೆ ಎಲ್ಲರ ಕಾಡ್ತಿದೆ.

ಇದನ್ನೂ ಓದಿ:ಕನಿಷ್ಠ ಸೌಜನ್ಯಕ್ಕಾದರೂ ಒಂದು ಮಾತು ಕೇಳಲಿಲ್ಲ.. ಪಾಂಡ್ಯಗೆ ಕೊಟ್ಟ ಕಿಮ್ಮತ್ತು ಕೊಹ್ಲಿಗೆ ಕೊಡಲಿಲ್ಲ BCCI

ಬೆಳೆದು ಬಂದ ಹಾದಿ ಮರೆಯದ ರೋಹಿತ್..!
ರೋಹಿತ್​ ಶರ್ಮಾ ಜೊತೆಗಿರೋ ಈ ವ್ಯಕ್ತಿ ಸಾಮಾನ್ಯರಲ್ಲ. ಇಂದು ವಿಶ್ವ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾಗೆ ವಿಶೇಷವಾದ ಸ್ಥಾನವಿದೆ. ಹಿಟ್​ಮ್ಯಾನ್​, ಸಿಕ್ಸರ್​ ಕಿಂಗ್​, ವಿಶ್ವಕಪ್​ ವಿನ್ನರ್​​ ಎಂಬೆಲ್ಲಾ ಹೆಸರಿನಿಂದ ಕರೆಯಲಾಗ್ತಿದೆ. ರೋಹಿತ್​ ಮೊದಲ ಬಾರಿ ಕ್ರಿಕೆಟರ್​ ಆಗೋ ಕನಸನ್ನು ಕಂಡಾಗ ಬಡತನದ ಬೇಗೆಯಲ್ಲಿದ್ರು. ಆಗ ಕೈ ಹಿಡಿದಿದ್ದೇ ಈ ವಿಶೇಷ ವ್ಯಕ್ತಿ. ರೋಹಿತ್​ ಇಂದು ದೊಡ್ಡ ಸಾಧಕನಾಗಿ ಬೆಳೆದಿರೋದ್ರ ಹಿಂದಿನ ಶಕ್ತಿ ಯೋಗೇಶ್​ ಪಟೇಲ್ (Yogesh Patel).

ರೋಹಿತ್​ ಶರ್ಮಾ ಕ್ರಿಕೆಟ್​ ಕಂಡ ಒನ್​ ಆಫ್​ ಬೆಸ್ಟ್​ ಬ್ಯಾಟರ್​ ಆಗಿ ಗುರುತಿಸಿ ಕೊಂಡಿರಬಹುದು. ಕರಿಯರ್​ ಆರಂಭಿಸಿದ್ದು, ಆಫ್​ ಸ್ಪಿನ್ನರ್​ ಆಗಿ. ತನ್ನ ಸ್ಪಿನ್​ ಜಾದೂವಿನಿಂದ ರೋಹಿತ್​​ ಬ್ಯಾಟ್ಸ್​ಮನ್​ಗಳ ಕಾಡ್ತಿದ್ರು. ರೋಹಿತ್ ಈ ಟ್ಯಾಲೆಂಟ್​ ಮೊದಲು ಗುರುತಿಸಿದ್ದು, ಮುಂಬೈನ ಫೇಮಸ್​ ಕೋಚ್​ ದಿನೇಶ್​ ಲಾಡ್​. 1999ರಲ್ಲಿ ಸ್ವಾಮಿ ವಿವೇಕಾನಂದ ಇಂಟರ್​​​ ​ನ್ಯಾಷನಲ್​ ಸ್ಕೂಲ್​ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಸ್ಪಿನ್​ ಜಾದೂ ಮಾಡಿದ್ರು. ಆಗ ದಿನೇಶ್​ ಲಾಡ್​ ವಿವೇಕಾನಂದ ಸ್ಕೂಲ್​ನ ಕೋಚ್​ ಆಗಿದ್ರು. ಇಂಪ್ರೆಸ್​ ಆಗಿದ್ದ ದಿನೇಶ್​ ಲಾಡ್​ಗೆ ರೋಹಿತ್​ ಶರ್ಮಾರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳೋ ಆಸೆ ಹುಟ್ಟಿತ್ತು.

ಇದನ್ನೂ ಓದಿ:ಮಿಸ್ಟ್ರಿ ಗರ್ಲ್​ ಜೊತೆ ಹಾರ್ದಿಕ್​ ಪಾಂಡ್ಯ ಡೇಟಿಂಗ್​​​? ಮಾರ್ಮಿಕವಾಗಿ ಟಾಂಗ್ ಕೊಟ್ಟ ನಟಾಶಾ..!

ರೋಹಿತ್​ ಬಳಿ ಟ್ಯಾಲೆಂಟ್ ಇತ್ತು..!
ಕ್ರಿಕೆಟರ್​ ಆಗುವ ಕನಸು ಕಟ್ಟಿಕೊಂಡಿದ್ದ ರೋಹಿತ್​ ಬಳಿ ಟ್ಯಾಲೆಂಟ್​ ಇತ್ತು. ಆದರೆ ಕಾಸಿರಲಿಲ್ಲ. ರೋಹಿತ್​ರ ಅಂಕಲ್​ ಬಳಿ ದಿನೇಶ್​ ಲಾಡ್ ತಮ್ಮ ಶಾಲೆಗೆ ಸೇರಿಸುವಂತೆ ಕೇಳಿದಾಗ ಒಂದ ಉತ್ತರ ಸಾಧ್ಯನೇ ಇಲ್ಲ. ಅಂದು ರೋಹಿತ್​ ಕುಟುಂಬ ಅಷ್ಟು ಕಡು ಬಡತನದಲ್ಲಿತ್ತು. ಎಷ್ಟರ ಮಟ್ಟಿಗೆ ಬಡತನ ಇತ್ತೆಂದರೆ 275 ರೂಪಾಯಿ ಸ್ಕೂಲ್​ ಫೀಸ್​ ಕೂಡ ಕಟ್ಟಲಾಗದಷ್ಟು. ಆಗ ದಿನೇಶ್​ ಲಾಡ್​ ಹೋಗಿದ್ದೇ ಈ ಯೋಗೇಶ್​ ಪಟೇಲ್​ ಬಳಿ. ಈ ಯೋಗೇಶ್​ ಪಟೇಲ್ ಯಾರಂದರೆ ಬೋರಿವಲ್ಲಿಯಲ್ಲಿರೋ ಸ್ವಾಮಿ ವಿವೇಕಾನಂದ ಸ್ಕೂಲ್​​ನ ಒಡೆಯ.
ರೋಹಿತ್​ರನ್ನ ತಮ್ಮ ಸ್ಕೂಲ್​ ಟೀಮ್​ಗೆ ಸೇರಿಸಿಕೊಳ್ಳಲು ಒಡೆಯ ಯೋಗೇಶ್​ ಪಟೇಲ್​ ಜೊತೆಗೆ ದಿನೇಶ್​ ಲಾಡ್​ ಮಾತುಕತೆ ನಡೆಸಿದ್ರು.

ಇದನ್ನೂ ಓದಿ:ವೈದ್ಯರ ಗಡುವು ಮೀರಿ ಅಪರ್ಣಾ ಬದುಕಿದ್ದೇ ಚಮತ್ಕಾರ.. ಕೊನೆಗಾಲದಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ..

ರೋಹಿತ್​ ಶರ್ಮಾ ಟ್ಯಾಲೆಂಟ್​ ಬಗ್ಗೆ ತಿಳಿಸಿ, ಆತ ನಮ್ಮ ಸ್ಕೂಲ್​ ಟೀಮ್​ಗೆ ಬೇಕು. ಫೀಸ್​ ಕಟ್ಟಲು ಅವರಲ್ಲಿ ಹಣವಿಲ್ಲ ಎಂದು ತಿಳಿಸಿದ್ರು. ಇದಕ್ಕೆ ಒಪ್ಪಿದ ಯೋಗೇಶ್​ ಪಟೇಲ್,​ ರೋಹಿತ್​ಗೆ ಉಚಿತ ಶಿಕ್ಷಣ​ ನೀಡೋ ಉದಾರವಾದ ನಿಲುವು ತೋರಿಸಿದರು. ಯೋಗೇಶ್​ ಪಟೇಲ್​​ ಸ್ಕಾಲರ್ ​ಶಿಪ್​ ನೀಡೋ ಆ ಒಂದು ನಿರ್ಧಾರ ಮಾಡದಿದ್ದಿದ್ರೆ, ರೋಹಿತ್​ ಶರ್ಮಾ ಜೀವನ ಬೇರೆಯದ್ದೇ ದಿಕ್ಕಲ್ಲಿ ಸಾಗಿ ಬಿಡ್ತಿತ್ತೇನೋ?

ರೋಹಿತ್​ ಬಗ್ಗೆ ಖುಷಿ, ಹೆಮ್ಮೆಯಿದೆ
‘ರೋಹಿತ್​ ಶರ್ಮಾ ನಮ್ಮ ಜೀವನಕ್ಕೆ ಬಂದಿದ್ದಕ್ಕೆ ಖುಷಿ ಇದೆ. ನಾನು ಕೂಡ ಬಡ ಕುಟುಂಬದಿಂದ ಬಂದವನು. ರೋಹಿತ್​ ಬಳಿ ಟ್ಯಾಲೆಂಟ್​ ಇದೆ ಎಂದು ನಮ್ಮ ಕೋಚ್​ ಹೇಳಿದ್ರು. ಅವರ ಕುಟುಂಬಕ್ಕೆ 275 ರೂಪಾಯಿಗಳ ಫೀಸ್​ ಕಟ್ಟಲು ಆಗ್ತಿರಲಿಲ್ಲ. ಅದಕ್ಕೆ ನಾನು ಆತನಿಗೆ ಉಚಿತ ಶಿಕ್ಷಣ ನೀಡುವ ನಿರ್ಧಾರ ಮಾಡಿದೆ. ನಮ್ಮ ಶಾಲೆಯಲ್ಲಿ ಓದಿದ ರೋಹಿತ್​ ಟೀಮ್​ ಇಂಡಿಯಾ ಕ್ಯಾಪ್ಟನ್​ ಅಂದಾಗ ಹೆಮ್ಮೆಯಾಗುತ್ತೆ. ಈಗ ನಮ್ಮ ಶಾಲೆಯ ಕೀರ್ತಿಯೂ ಹೆಚ್ಚಾಗಿದೆ’ ಯೋಗೇಶ್​ ಪಟೇಲ್​, ಶಾಲೆಯ ಮಾಲೀಕ

ಉಚಿತ ಶಿಕ್ಷಣ ಸಿಕ್ಕ ಬಳಿಕ ರೋಹಿತ್​ ಜೀವನ ಬದಲಾದ ಕಥೆ ನಿಮಗೆ ಗೊತ್ತೇ ಇದೆ. ಅಂದು 275 ರೂಪಾಯಿ ಫೀಸ್​ ಕಟ್ಟಲಾಗದ ರೋಹಿತ್​ ಈಗ ಕೋಟ್ಯಧಿಪತಿಯಾಗಿದ್ದಾರೆ. ನೇಮ್​, ಫೇಮ್​ ಎಲ್ಲಾ ಹುಡುಕಿಕೊಂಡು ಬಂದಿದೆ. ಈಗಲೂ ಬೆಳೆದು ಬಂದ ಹಾದಿಯನ್ನ ಹಿಟ್​ಮ್ಯಾನ್​ ಮರೆತಿಲ್ಲ. ವಿವೇಕಾನಂದ ಸ್ಕೂಲ್​ನಲ್ಲಿ ಏನೇ ಕಾರ್ಯಕ್ರಮ ನಡೆದ್ರೂ ಬಿಡುವಿದ್ರೆ ರೋಹಿತ್​ ಪಕ್ಕಾ ಹಾಜಾರಾಗ್ತಾರೆ. ಕೋಚ್ ದಿನೇಶ್​ ಲಾಡ್​ ಹಾಗೂ ಯೋಗೇಶ್​ ಪಟೇಲ್​​ರನ್ನು ಅಷ್ಟೇ ವಿನಯದಿಂದ ಕಾಣ್ತಾರೆ. ರೋಹಿತ್​ರ ಈ ಹಂಬಲ್​ ವ್ಯಕ್ತಿತ್ವ, ಪ್ರತಿಯೊಬ್ಬರಿಗೂ ಸ್ಫೂರ್ತಿ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೋಟಿ ಕೋಟಿ ಬಂದ ಮೇಲೂ ದೊಡ್ಡಸ್ಥಿಕೆ ತೋರಿಸಲಿಲ್ಲ ರೋಹಿತ್.. ಹೆಜ್ಜೆ ಗುರುತು ಮರೆಯದ ಕ್ಯಾಪ್ಟನ್

https://newsfirstlive.com/wp-content/uploads/2024/07/YOGESH.jpg

Load More