/newsfirstlive-kannada/media/post_attachments/wp-content/uploads/2025/03/HOLI-CELEBRATION.jpg)
ಈ ಬಾರಿ ಹೋಳಿ ಹುಣ್ಣಿಮೆ ಹಾಗೂ ರಂಜಾನ್ ಒಂದೇ ದಿನಾಂಕದಂದು ಬಂದಿದೆ. ಮಾರ್ಚ್​ 14 ರಂದೆ ಹಿಂದೂಗಳ ಹಬ್ಬ ಮತ್ತು ಮುಸ್ಲಿಂರ ಹಬ್ಬ ಏಕಕಾಲಕ್ಕೆ ಬಂದಿದೆ. ಉತ್ತರ ಭಾರತದಲ್ಲಿ ಒಂದು ರೀತಿಯ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಅಲ್ಲಿ ಒಂದೊಂದು ರಾಜ್ಯದ ನಾಯಕರು ಹೇಳುತ್ತಿರುವ ಹೇಳಿಕೆಗಳು ಈಗ ವಿವಾದದ ಜೊತೆಗೆ ಬಿಗುವಿನ ವಾತಾವರಣ ಉಂಟಾಗುವ ಸೂಚನೆಯನ್ನು ಕೂಡ ನೀಡುತ್ತವೆ. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​, ಹೋಳಿ ದಿನದಂದು ಮಸೀದಿಗೆ ಹೋಗುವ ಅವಶ್ಯಕತೆ ಇಲ್ಲ ಮನೆಯಲ್ಲಿಯೇ ಪ್ರಾರ್ಥನೆ ಮಾಡಿ ಎಂದು ಮುಸ್ಲಿಂ ಸಮುದಾಯಕ್ಕೆ ಹೇಳುವ ಮೂಲಕ ದೊಡ್ಡದೊಂದು ಕಿಡಿ ಹೊತ್ತಿಸಿದ್ದಾರೆ.
ಒಂದು ವೇಳೆ ಶುಕ್ರವಾರ ಯಾರಾದರೂ ಪ್ರಾರ್ಥನೆಯನ್ನು ಮಾಡುವುದೇ ಇದ್ದಲ್ಲಿ ಅದನ್ನು ಮನೆಯಲ್ಲಿಯೇ ಮಾಡಿ ಮಸೀದಿಗೆ ಬರುವ ಅವಶ್ಯಕತೆ ಇಲ್ಲ. ಒಂದು ವೇಳೆ ಬಂದಿದ್ದೇ ಆದಲ್ಲಿ ನಿಮ್ಮ ಮೇಲೆ ಬಣ್ಣಗಳನ್ನು ಎರಚಿದಲ್ಲಿ ಅದನ್ನು ದೂರುವಂತಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದು ಮಾತ್ರವಲ್ಲ, ನಮ್ಮ ಹೋಳಿ ವರ್ಷಕ್ಕೊಮ್ಮೆ ಬರುತ್ತದೆ. ನೀವು ನಿತ್ಯ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡುತ್ತೀರಿ. ಇದೊಂದು ದಿನ ಮನೆಯಲ್ಲಿಯೇ ಇದ್ದು ಮಾಡಿ ಹೋಳಿ ಆಚರಣೆಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ:ಶ್ರೀರಾಮ ಆಯ್ತು ಈಗ ಸೀತೆಗೊಂದು ಬೃಹತ್ ಮಂದಿರ; ಸಂಚಲನ ಸೃಷ್ಟಿಸಿದ ಬಿಜೆಪಿ ಘೋಷಣೆ! ಕಾರಣವೇನು?
/newsfirstlive-kannada/media/post_attachments/wp-content/uploads/2025/03/HOLI-CELEBRATION-1.jpg)
ಇತ್ತ ಬಿಹಾರದಲ್ಲಿಯೂ ಕೂಡ ಇಂತಹುದೇ ಹೇಳಿಕೆಯೊಂದು ಬಿಜೆಪಿ ನಾಯಕರಿಂದ ಬಂದಿದೆ. ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಕೂಡ ಯೋಗಿ ಆದಿತ್ಯನಾಥ್ ಹೇಳಿಕೆಯನ್ನೇ ಹೇಳಿದ್ದಾರೆ. ನೀವು ಮುಸ್ಲಿಂಮರು ವರ್ಷಕ್ಕೆ 52 ಶುಕ್ರವಾರ ನಮಾಜ್ ಮಾಡುತ್ತೀರಿ ನಮಗೆ ಹೋಳಿ ಆಡಲು ಅವಕಾಶ ಸಿಗುವುದು ವರ್ಷಕ್ಕೆ ಒಂದು ಬಾರಿ ಮಾತ್ರ. ಹೀಗಾಗಿ ಹೋಳಿ ಹಬ್ಬದಂದು ನೀವು ಯಾರು ಮನೆಬಬಿಟ್ಟು ಆಚೆ ಬರಬೇಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಓಪನ್ ಪ್ಲೇಸ್‌ನಲ್ಲಿ ಮಾಡೆಲ್​ಗಳ ವಯ್ಯಾರಕ್ಕೆ ಬೆಚ್ಚಿ ಬಿದ್ದ ಕಾಶ್ಮೀರ! ಫ್ಯಾಷನ್ ಶೋಗೆ ವಿರೋಧ ಯಾಕೆ?
ಸದ್ಯ ಶಾಸಕ ಠಾಕೂರ್ ಹೇಳಿಕೆಯನ್ನು ಖಂಡಿಸಿರುವ ಆರ್​​ಜೆಡಿಯ ಬಚೋಲ್ ಇದನ್ನೆಲ್ಲಾ ಹೇಳಲು ಇವನ್ಯಾರು? ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಇಂತಹ ಶಾಸಕರನ್ನು ಬಂಧಿಸುವಂತೆ ಪೊಲೀಸರಿಗೆ ಹೇಳಲು ಸಿಎಂಗೆ ತಾಕತ್ ಇಲ್ಲವೇ? ಎಂದು ಗುಡುಗಿದ್ದಾರೆ. ಒಟ್ಟಾರೆ ಹೋಳಿ ಹಬ್ಬ ಉತ್ತರ ಭಾರತದಲ್ಲಿ ಬೇರೆಯದ್ದೇ ರಂಗು ಎರುಚುತ್ತಿದೆ. ಈ ಹೇಳಿಕೆಗಳು ಮುಂದೆ ಯಾವ ಪರಿಣಾಮಗಳನ್ನು ಉಂಟು ಮಾಡಲಿವೆ. ಏನೆಲ್ಲಾ ಆಗಲಿದೆ ಮತ್ತು ಶಾಂತಿ ಸೌಹಾರ್ದತೆಗಳು ಮೊದಲನಂತೆಯೇ ಇದ್ದು ಸುಗಮವಾಗಿ ಹಬ್ಬ ಮುಗಿಯಲಿದೆಯಾ ಎಂಬೆಲ್ಲಾ ಪ್ರಶ್ನೆಗಳನ್ನು ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us