/newsfirstlive-kannada/media/post_attachments/wp-content/uploads/2024/09/BANK_JOB.jpg)
ಬೆಂಗಳೂರು: ಬ್ಯಾಂಕ್​​ ಕೆಲಸಕ್ಕಾಗಿ ಕಾಯುತ್ತಿರೋರಿಗೆ ಗುಡ್​ನ್ಯೂಸ್​ ಒಂದಿದೆ. ಇಡೀ ದೇಶಾದ್ಯಂತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಖಾಲಿ ಇರೋ ಹುದ್ದೆಗಳನ್ನು ಭರ್ತಿಗೆ ಮುಂದಾಗಿದೆ. ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಆನ್​​ಲೈನ್ ಮೂಲಕ​ ಅರ್ಜಿ ಆಹ್ವಾನ ಮಾಡಲಾಗಿದೆ. ಕರ್ನಾಟಕದಲ್ಲೂ ಈ ಬ್ಯಾಂಕ್​ನ ಬ್ರ್ಯಾಂಚ್​ಗಳಿದ್ದು ಇಲ್ಲಿಯು ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಕರ್ನಾಟಕದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಕರ್ನಾಕದಲ್ಲಿ ಮಾತ್ರ 300 ಉದ್ಯೋಗಗಳು ಖಾಲಿ ಇವೆ. ಎಸ್​ಸಿ 45, ಎಸ್​ಟಿ 22, ಒಬಿಸಿ 81, ಎಡಬ್ಲುಎಸ್​ 30, ಯುಆರ್ 122 ಉದ್ಯೋಗಗಳು ಮೀಸಲು ಇವೆ. ಅ.23 ರಂದು ಬ್ಯಾಂಕ್ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಆನ್‌ಲೈನ್ ನೋಂದಣಿ, ಕೊನೆ ದಿನಾಂಕ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಹೇಗೆಲ್ಲಾ ಇರಲಿದೆ ಎಂಬುದು ಇಲ್ಲಿದೆ.
ಹುದ್ದೆ ಯಾವುದು ಮತ್ತು ಎಷ್ಟಿವೆ?
ಲೋಕಲ್ ಬ್ಯಾಂಕ್ ಆಫೀಸರ್ (ಎಲ್​ಬಿಒ)
ಒಟ್ಟು ಹುದ್ದೆಗಳು- 1,500
ಅರ್ಜಿಗೆ ಪಾವತಿಸಬೇಕಾದ ಶುಲ್ಕ?
ಜನರಲ್​, ಇಡಬ್ಲುಎಸ್, ಒಬಿಸಿ- 850 ರೂ.ಗಳು
ಎಸ್​ಸಿ, ಎಸ್​​​ಟಿ, ಅಂಗ ವಿಕಲರು- 175 ರೂ.ಗಳು
ವಯೋಮಿತಿ?
20- 30 ವರ್ಷ
ಶೈಕ್ಷಣಿಕ ಅರ್ಹತೆ ಏನು?
ಯಾವುದೇ ವಿಷಯದಲ್ಲಿ ಪದವಿ
ಆಯ್ಕೆ ಹೇಗೆ?
ಲಿಖಿತ ಪರೀಕ್ಷೆ (ಆನ್​ಲೈನ್)
ಸಂದರ್ಶನ
ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್​​​ಪಿಟಿ)
ದಾಖಲಾತಿ ಪರಿಶೀಲನೆ
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 13 ನವೆಂಬರ್ 2024
ನ. 28ರ ಒಳಗೆ ಅರ್ಜಿ ಪ್ರಿಂಟ್ ತೆಗೆದುಕೊಳ್ಳಬೇಕು
ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್- https://ibpsonline.ibps.in/ubilbooct24/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us