/newsfirstlive-kannada/media/post_attachments/wp-content/uploads/2024/12/JOB_ITBP.jpg)
ಬೆಂಗಳೂರು: ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಅಡಿ ಬರೋ ಸರ್ಕಾರದ ಅಧಿಕೃತ ಸಂಸ್ಥೆ ಆದಾಯ ತೆರಿಗೆ ಇಲಾಖೆ. ಖಾಲಿ ಇರೋ 8 ಪ್ರಮುಖ ಹುದ್ದೆಗಳಿಗೆ ಆದಾಯ ತೆರಿಗೆ ಇಲಾಖೆ ಅರ್ಜಿ ಆಹ್ವಾನಿಸಿದೆ. ಹಾಗಾಗಿ ಆಸಕ್ತರು ಕೂಡಲೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಹುದ್ದೆಗಳು ಹೆಸರು?
ಡೇಟಾ ಸಂಸ್ಕರಣ ಸಹಾಯಕ ಉದ್ಯೋಗ
ಉದ್ಯೋಗದ ಸ್ಥಳ?
ಲಕ್ನೋ, ಕಾನ್ಪುರ, ಚಂಡೀಗಡ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ನಗರದ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರ ವಿವಿಧ ಕಚೇರಿಗಳಲ್ಲಿ ಉದ್ಯೋಗ.
ಎಷ್ಟು ಹುದ್ದೆಗಳು?
8 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮಾಸಿಕ ವೇತನ ಎಷ್ಟು?
44,900-1,42,400 ರೂ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ?
ಫೆಬ್ರುವರಿ 5, 2025
ವಿದ್ಯಾರ್ಹತೆ ಏನು?
ಎಂಟೆಕ್ ಬಿಇ/ಬಿಟೆಕ್ ಕಂಪ್ಯೂಟರ್ ಇಂಜಿನಿಯರ್/ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಟೆಕ್ನಾಲಜಿ
ಕೆಲಸದ ಅನುಭವ?
2 ವರ್ಷಗಳ ಕೆಲಸದ ಅನುಭವ ಇರಬೇಕು
ವೆಬ್ಸೈಟ್ ವಿಳಾಸ:incometaxindia.gov.in
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸಿದ ನಂತರ ಡೌನ್ಲೋಡ್ ಮಾಡಬೇಕು. ಭರ್ತಿ ಮಾಡಲಾದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ವಿಳಾಸಕ್ಕೆ ಪೋಸ್ಟ್ ಮಾಡಬೇಕು.
Directorate of Income Tax (Systems),
Central Board of Direct Taxes,
Ground Floor, E2, ARA Center,
Jhandewalan Ext., New Delhi- 110055
ಇದನ್ನೂ ಓದಿ:ಬೆಂಗಳೂರಿನಲ್ಲೇ ಸರ್ಕಾರಿ ಕೆಲಸ ಹುಡುಕುತ್ತಿರೋರಿಗೆ ಸುವರ್ಣಾವಕಾಶ; ಸಂಬಳ ಎಷ್ಟು? ವಿದ್ಯಾರ್ಹತೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ