ಸರ್ಕಾರಿ ಉದ್ಯೋಗ ಬೇಕಾ? ಕೂಡಲೇ ಅರ್ಜಿ ಸಲ್ಲಿಸಿ; ಸಂಬಳ ಬರೋಬ್ಬರಿ 177500 ರೂ!

author-image
Ganesh Nachikethu
Updated On
ತಿಂಗಳಿಗೆ ಬರೋಬ್ಬರಿ 50 ಸಾವಿರ ಸಂಬಳ; ಬೆಂಗಳೂರಿಗರು ಈಗಲೇ ಕೆಲಸಕ್ಕೆ ಅಪ್ಲೈ ಮಾಡಬಹುದು!
Advertisment
  • ಸರ್ಕಾರಿ ಕೆಲಸಕ್ಕಾಗಿ ಇನ್ನೂ ಹುಡುಕುತ್ತಲೇ ಇದ್ದೀರಾ?
  • ಉದ್ಯೋಗದ ಬದಲಾವಣೆಗಾಗಿ ಕಾಯುತ್ತಿದ್ದೀರಾ..?
  • ಹಾಗಾದ್ರೆ ಇಲ್ಲಿದೆ ನಿಮಗೊಂದು ಬಂಪರ್​ ಆಫರ್​​​

ನಿಮ್ಮದು ಡಿಗ್ರಿ ಅಥವಾ ಮಾಸ್ಟರ್ಸ್​ ಆಗಿದ್ಯಾ? ಹಲವು ವರ್ಷಗಳಿಂದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೀರಾ! ಕನಿಷ್ಠ 1-10 ವರ್ಷ ಅನುಭವ ಇದ್ಯಾ? ಅದರಲ್ಲೂ ಉದ್ಯೋಗ ಬದಲಾವಣೆ ಮಾಡಲು ಕಾಯುತ್ತಿದ್ದೀರಾ! ಹಾಗಿದ್ರೆ ನಿಮಗೊಂದು ಬಂಪರ್​ ಆಫರ್​ ಇದೆ.

ದೆಹಲಿಯಲ್ಲಿರೋ ಭಾರತ ಸರ್ಕಾರದ ವೈದ್ಯಕೀಯ ಅಧೀಕ್ಷಕರ ಕಚೇರಿ, ವಿಎಂಎಂಸಿ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಖಾಲಿ ಇರೋ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ. ಈಗಾಗಲೇ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಸಂಬಳ ಬರೋಬ್ಬರಿ 56100 ರಿಂದ 177500 ರೂ. ಇರಲಿದೆ. ಅರ್ಹ ಮತ್ತು ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.

ಖಾಲಿ ಹುದ್ದೆ ಮತ್ತು ಸಂಬಳದ ವಿವರ ಹೀಗಿದೆ!

ಸಹಾಯಕ ನಿರ್ದೇಶಕರು (ಒಎಲ್) ಕೇವಲ ಒಂದು ಹುದ್ದೆ ಮಾತ್ರ ಖಾಲಿ ಇದ್ದು, ಸಂಬಳ 56100 ರಿಂದ 177500 ರೂ. ಇರಲಿದೆ. ಅಗತ್ಯ ಅರ್ಹತೆ, ವಯೋಮಿತಿ, ಅರ್ಜಿ ನಮೂನೆ ಸೇರಿದಂತೆ ಇತ್ಯಾದಿ ಮಾಹಿತಿಗಾಗಿ ಸಫ್ದರ್‌ಜಂಗ್ ಆಸ್ಪತ್ರೆಯ ಜಾಲತಾಣ -www.vmmc-sjh.nic.in)/ DGHS -https://dghs.gov.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಇನ್ನು, ವೆಬ್​ಸೈಟಿನಲ್ಲಿ ನೀಡಿದ ಸೂಚನೆಯಂತೆ ಎಲ್ಲ ಪೂರಕ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕು. ಜಾಹೀರಾತು ನೀಡಿದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು. ವೆಬ್​​​ಸೈಟಿನಲ್ಲಿ ನೀಡಲಾದ ವಿಳಾಸಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಯಾವಾಗ ಬೇಕಾದ್ರೂ ಭೇಟಿ ನೀಡಬಹುದು. ಅಷ್ಟೇ ಅಲ್ಲ ಶನಿವಾರ ಮಾತ್ರ ಅರ್ಧ ದಿನ ಇದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿದು ಬಂದಿದೆ.

ಅರ್ಜಿ ಸಲ್ಲಿಸಿದ ಬಳಿಕ ಸಂದರ್ಶನ ಮಾಡಿ ಮೂಲ ದಾಖಲೆಗಳ ಪರಿಶೀಲಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹೇಳಿದ ರೀತಿಯಲ್ಲಿ ಸಂಬಳ ನೀಡಲಾಗುತ್ತದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment