/newsfirstlive-kannada/media/post_attachments/wp-content/uploads/2024/11/JOB_Railway-2.jpg)
ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ ಸಚಿವಾಲಯ ಖಾಲಿ ಇರೋ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಫೆಬ್ರವರಿ 2025 ಆಗಿದೆ.
ರೈಲ್ವೆ ನೇಮಕಾತಿ ಮಂಡಳಿ, ಸಚಿವಾಲಯ ಮತ್ತು ಪ್ರತ್ಯೇಕ ವಿಭಾಗದಲ್ಲಿ 1036 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ rrbapply.gov.in ಅನ್ನೋ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಿದೆ.
12ನೇ ತರಗತಿ ಪಾಸಾದವರಿಂದ ಹಿಡಿದು ಸ್ನಾತಕೋತ್ತರ ಪದವಿ ಮುಗಿಸಿರೋ ಎಲ್ಲಾ ಅಭ್ಯರ್ಥಿಗಳು ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ರೈಲ್ವೆಯಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಡ್ / ಬಿ.ಎಡ್ ಪೂರ್ಣಗೊಳಿಸಿರಬೇಕು.
ಎಷ್ಟು ಉದ್ಯೋಗಗಳಿಗೆ ಅರ್ಜಿ ಆಹ್ವಾನ?
ಸ್ನಾತಕೋತ್ತರ ಶಿಕ್ಷಕ (ಪಿಜಿಟಿ ಟೀಚರ್) - 187 ಹುದ್ದೆಗಳು
ಟ್ರೈನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ ಟೀಚರ್) - 338 ಹುದ್ದೆಗಳು
ಸೈಂಟಿಫಿಕ್ ಸೂಪರ್ವೈಸರ್ - 03 ಹುದ್ದೆಗಳು
ಚೀಫ್ ಲೀಗಲ್ ಅಸಿಸ್ಟೆಂಟ್ - 54 ಹುದ್ದೆಗಳು
ಸರ್ಕಾರಿ ವಕೀಲರು - 20 ಹುದ್ದೆಗಳು
ದೈಹಿಕ ತರಬೇತಿ ಬೋಧಕ ಪಿಟಿಐ - 18 ಹುದ್ದೆಗಳು
ಸೈಂಟಿಫಿಕ್ ಅಸಿಸ್ಟೆಂಟ್: 02 ಹುದ್ದೆಗಳು
ಜೂನಿಯರ್ ಟ್ರಾನ್ಸ್ಲೇಟರ್ - 130 ಹುದ್ದೆಗಳು
ಸೀನಿಯರ್ ಪಬ್ಲಿಸಿಟಿ ಇನ್ಸ್ಪೆಕ್ಟರ್ - 03 ಹುದ್ದೆಗಳು
ಉದ್ಯೋಗಿ ಮತ್ತು ಕಲ್ಯಾಣ ಇನ್ಸ್ಪೆಕ್ಟರ್ - 59 ಹುದ್ದೆಗಳು
ಲೈಬ್ರೇರಿಯನ್ - 10 ಹುದ್ದೆಗಳು
ಮ್ಯೂಸಿಕ್ ಟೀಚರ್ - 03 ಹುದ್ದೆಗಳು
ಪ್ರಾಥಮಿಕ ರೈಲ್ವೆ ಶಿಕ್ಷಕ - 188 ಹುದ್ದೆಗಳು
ಸಹಾಯಕ ಶಿಕ್ಷಕಿ ಮಹಿಳಾ ಜೂನಿಯರ್ ಶಾಲೆ - 02 ಹುದ್ದೆಗಳು
ಲ್ಯಾಬೊರೇಟರಿ ಅಸಿಸ್ಟೆಂಟ್/ಸ್ಕೂಲ್- 07 ಹುದ್ದೆಗಳು
ಲ್ಯಾಬೊರೇಟರಿ ಅಸಿಸ್ಟೆಂಟ್ ಗ್ರೇಡ್ 3 - 12 ಹುದ್ದೆಗಳು
ಅರ್ಹತಾ ಮಾನದಂಡವೇನು?
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ರಿಂದ 48 ವರ್ಷ ವಯಸ್ಸಿನವರು ಆಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ವಿನಾಯಿತಿ ನೀಡಲಾಗುವುದು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿದವರು ಅರ್ಜಿ ಸಲ್ಲಿಸಲು 500 ರೂ. ಶುಲ್ಕ ಪಾವತಿಸಬೇಕು. ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ, ಮಹಿಳೆಯರು ಮತ್ತು ಮಾಜಿ ಸೈನಿಕರು 250 ರೂ. ಶುಲ್ಕ ಕಟ್ಟಬೇಕು.
ಇದನ್ನೂ ಓದಿ:ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣಾವಕಾಶ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ