/newsfirstlive-kannada/media/post_attachments/wp-content/uploads/2024/03/UCO-Bank-Scam.jpg)
ಬೆಂಗಳೂರು: 250 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಯುಕೋ ಬ್ಯಾಂಕ್ ಅರ್ಜಿ ಆಹ್ವಾನ ನೀಡಿದೆ. ಕಳೆದ ತಿಂಗಳು ಜನವರಿ 16ನೇ ತಾರೀಕಿನಂದೇ ಅರ್ಜಿ ಆಹ್ವಾನಿಸಿದ್ದು, ಅಪ್ಲೈ ಮಾಡಲು ಕೊನೆಯ ದಿನಾಂಕ ಫೆಬ್ರವರಿ 6 ಆಗಿದೆ.
ಈ ಹಿಂದೆ ಅರ್ಜಿ ಸಲ್ಲಿಕೆಗೆ ಫೆಬ್ರವರಿ 5ನೇ ತಾರೀಕು ಕೊನೆ ಎಂದು ಹೇಳಲಾಗಿತ್ತು. ಈಗ ದಿನಾಂಕ ವಿಸ್ತರಿಸಿದ್ದು, ಅರ್ಹ ಅಭ್ಯರ್ಥಿಗಳು ucobank.com ಅನ್ನೋ ಯುಕೋ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಏನು ಓದಿರಬೇಕು?
ಅರ್ಹ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸುವಾಗ ಮಾನ್ಯವಾದ ಅಂಕಪಟ್ಟಿ ಅಪ್ಲೋಡ್ ಮಾಡಬೇಕು. ಹಾಗೆಯೇ ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ನಮೂದಿಸಬೇಕು.
ವಯಸ್ಸು ಎಷ್ಟಾಗಿರಬೇಕು?
ಅಭ್ಯರ್ಥಿ 20 ವರ್ಷದಿಂದ 30 ವರ್ಷ ವಯಸ್ಸಿನವರಾಗಿರಬೇಕು. SC/ST/PwBD ಅಭ್ಯರ್ಥಿಗಳಿಗೆ ಮೀಸಲಾತಿ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬೇಕು. SC/ST/PwBD ಅಭ್ಯರ್ಥಿಗಳಿಗೆ 175 ರೂ. ಮತ್ತು ಇತರರಿಗೆ 850 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಖಾಲಿ ಹುದ್ದೆಗಳ ವಿವರ
ಕರ್ನಾಟಕ: 35 ಹುದ್ದೆಗಳು
ಗುಜರಾತ್: 57 ಹುದ್ದೆಗಳು
ಮಹಾರಾಷ್ಟ್ರ: 70 ಹುದ್ದೆಗಳು
ಅಸ್ಸಾಂ: 30 ಹುದ್ದೆಗಳು
ತ್ರಿಪುರ: 13 ಹುದ್ದೆಗಳು
ಸಿಕ್ಕಿಂ: 6 ಹುದ್ದೆಗಳು
ನಾಗಾಲ್ಯಾಂಡ್: 5 ಹುದ್ದೆಗಳು
ಮೇಘಾಲಯ: 4 ಹುದ್ದೆಗಳು
ಕೇರಳ: 15 ಹುದ್ದೆಗಳು
ತೆಲಂಗಾಣ ಮತ್ತು ಆಂಧ್ರಪ್ರದೇಶ: 10 ಹುದ್ದೆಗಳು
ಜಮ್ಮು ಮತ್ತು ಕಾಶ್ಮೀರ: 5 ಹುದ್ದೆಗಳು
ಇದನ್ನೂ ಓದಿ:ಭಾರತ, ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ; ಬಲಿಷ್ಠ ತಂಡ ಪ್ರಕಟ; ಮೂವರು RCB ಸ್ಟಾರ್ ಆಟಗಾರರಿಗೆ ಅವಕಾಶ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ