ಭರ್ಜರಿ ಆಫರ್​​; ಕೇವಲ 1 ರೂ.ಗೆ ಚಿನ್ನ ಖರೀದಿಸೋ ಅವಕಾಶ; ನೀವು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಭರ್ಜರಿ ಆಫರ್​​; ಕೇವಲ 1 ರೂ.ಗೆ ಚಿನ್ನ ಖರೀದಿಸೋ ಅವಕಾಶ; ನೀವು ಓದಲೇಬೇಕಾದ ಸ್ಟೋರಿ
Advertisment
  • ಶಿವರಾತ್ರಿ ಸಮಯದಲ್ಲಿ ಚಿನ್ನ ಖರೀದಿಸುವ ಅವಕಾಶ
  • ಡಿಜಿಟಲ್​ ಗೋಲ್ಡ್​ ಖರೀದಿಯಿಂದ ಸಿಗುವ ಲಾಭಗಳೇನು?​
  • ಯಾವುದರಲ್ಲಿ ಡಿಜಿಟಲ್​ ಗೋಲ್ಡ್​ ಖರೀದಿ ಮಾಡಬಹುದು?

ಭಾರತೀಯರಿಗೆ ಹಬ್ಬ ಹರಿದಿನಗಳೆಂದರೆ ಅದು ಮಹತ್ವದ ದಿನ ಎಂದರ್ಥ. ಈ ಸಮಯದಲ್ಲಿ ಬಹುತೇಕ ಜನರು ಆಭರಣಕೊಳ್ಳಲು ಬಯಸುತ್ತಾರೆ. ವಿಶೇಷವಾಗಿ ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ದೀಪಾವಳಿ ಹೀಗೆ ಹಬ್ಬದ ಸಮಯದಲ್ಲಿ ಚಿನ್ನ ಖರೀದಿಸಲು ಮುಂದಾಗುತ್ತಾರೆ. ಸದ್ಯದ ಗೋಲ್ಡ್​ ರೇಟ್​​ ಅನೇಕರಿಗೆ ಸವಾಲಾಗಿದೆ. ಆದರೀಗ ಡಿಜಿಟಲ್​ ಗೋಲ್ಡ್​ ಎಂಬ ಹೊಸ ಪರಿಕಲ್ಪನೆ ಬಂದಿದ್ದು, ಅದರ ಮೂಲಕ ಸುಲಭವಾಗಿ ಚಿನ್ನ ಖರೀದಿಸಲು ಜನರು ಮುಂದಾಗುತ್ತಿದ್ದಾರೆ.

ಡಿಜಿಟಲ್​ ಚಿನ್ನ ಎಂದರೇನು?

ಪ್ರಸ್ತುತ ತಂತ್ರಜ್ಞಾನ ಲೋಕ ವೇಗವಾಗಿ ಬೆಳೆಯುತ್ತಿದೆ. ಆನ್​ಲೈನ್​ ಮೂಲಕವು ಚಿನ್ನವನ್ನು ಖರೀದಿಸುವ ಅವಕಾಶವಿದೆ. ಅಷ್ಟೇ ಅಲ್ಲದೆ ಹೂಡಿಕೆ ಮಾಡುವ ಮೂಲಕ ಚಿನ್ನ ಖರೀದಿಸುವ ಆಯ್ಕೆಯಿದೆ. ಅದರಂತೆಯೇ ಡಿಜಿಟಲ್​​ ಗೋಲ್ಡ್ ಆಯ್ಕೆ​ ಮೂಲಕವು ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಖರೀದಿ ಮಾಡಬಹುದಾಗಿದೆ. ಅಚ್ಚರಿ ಸಂಗತಿ ಎಂದರೆ 1 ರೂಪಾಯಿಯಿಂದ ಚಿನ್ನ ಖರೀದಿ ಮಾಡಬಹುದು.

ಡಿಜಿಟಲ್​ ಗೋಲ್ಡ್​ ಹೂಡಿಕೆ

ಡಿಜಿಟಲ್​​ ಗೋಲ್ಡ್​ಗಾಗಿ ಬಹುತೇಕರು ಹೂಡಿಕೆ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ 1 ರೂಪಾಯಿಯಿಂದ ಪ್ರಾರಂಭವಾಗಿ 2 ಲಕ್ಷದವರೆಗೂ ಹೂಡಿಕೆ ಮಾಡಬಹುದಾಗಿದೆ. ಇದರ ಮೂಲಕ ಚಿನ್ನ ಕಳ್ಳತನದ ಅಪಾಯವನ್ನು ತಪ್ಪಿಸಬಹುದಾಗಿದೆ. ಇನ್ನು ಡಿಜಿಟಲ್​ ಚಿನ್ನವನ್ನು ಖರೀದಿಸುವಾಗ ಗ್ರಾಹಕರು 24 ಕ್ಯಾರೆಟ್​​ ಚಿನ್ನವನ್ನು ಪಡೆಯುತ್ತಾರೆ.

ಡಿಜಿಟಲ್​ ಗೋಲ್ಡ್​ ಎಲ್ಲಿ ಖರೀದಿಸಬೇಕು?

ಆನ್​ಲೈನ್​ ಪೇಮೆಂಟ್​ ಆ್ಯಪ್​ಗಳು ಡಿಜಿಟಲ್​ ಗೋಲ್ಡ್​ ಮಾರಾಟ ನಡೆಸುತ್ತಿದೆ. ಗೂಗಲ್​ ಪೇ, ಪೇಟಿಎಂ, ಫೋನ್​ಪೇನಂತರ ಪ್ರಮುಖ ಡಿಜಿಟಲ್​​ ಪಾವತಿ ಆ್ಯಪ್​ಗಳು ಡಿಜಿಟಲ್​​ ಗೋಲ್ಡ್​ ಖರೀದಿಸುವ ಅವಕಾಶವನ್ನು ತೆರೆದಿಟ್ಟಿದೆ. MMTC-PAMP ಇಂಡಿಯಾ ಪ್ರೈವೇಟ್​ ಲಿಮಿಡೆಟ್​​ನಂತಹ ಕಂಪನಿಗಳು ಈ ಮಾರುಕಟ್ಟೆಯ ಪ್ರಸಿದ್ಧ ಮಾರಾಟಗಾರರು.

ಖರೀದಿ ಹೇಗೆ?

ಗೂಗಲ್​ ಪೇ ಬಳಕೆದಾರರಾಗಿದ್ದರೆ ಗೋಲ್ಡ್​​ ಲಾಕರ್​ ಎಂಬ ಆಯ್ಕೆಯಿದೆ. ಅದನ್ನು ಸರ್ಚ್ ಬಾರ್​ನಲ್ಲಿ ಹುಡುಕಿ ನಂತರ ಚಿನ್ನದ ಬೆಲೆಯನ್ನು ಪರೀಕ್ಷಿಸಿ. ನಿಮಗೆ ಬೇಕಾದ ಮೊತ್ತವನ್ನು ನಮೂದಿಸಿ ಬಳಿಕ ವಹಿವಾಟು ಪೂರ್ಣಗೊಳಿಸಿ. ಅಂದಹಾಗೆಯೇ ಇದು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದರೂ ಸಹ ಬಳಕೆದಾರರು ನಾಣ್ಯದ ರೂಪದಲ್ಲಿ ಚಿನ್ನವನ್ನು ಪಡೆಯುತ್ತಾರೆ.

ಗೂಗಲ್​ ಪೇ ಮಾತ್ರವಲ್ಲದೆ, ಅಮೆಜಾನ್​ ಪೇ, ಪೇಟಿಎಂ ಹೀಗೆ ಅನೇಕ ಡಿಜಿಟಲ್​​ ಪಾವತಿ ಅಪ್ಲಿಕೇಶನ್​ ಮೂಲಕ ಚಿನ್ನವನ್ನು ಖರೀದಿ ಮಾಡಬಹುದಾಗಿದೆ.

ಇದನ್ನೂ ಓದಿ:KL ರಾಹುಲ್​​ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಗಂಭೀರ್​​; ಟೀಮ್​ ಇಂಡಿಯಾ ಮುಖ್ಯ ಕೋಚ್​​ ವಿರುದ್ಧ ಭಾರೀ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment